BREAKING: ದೇಶದಲ್ಲಿ ಎಂಪಾಕ್ಸ್ ಸೋಂಕು ಕನ್ಫರ್ಮ್!
ದೇಶಕ್ಕೆ ಎಂಪಾಕ್ಸ್ ಸೋಂಕು ಕಾಲಿಟ್ಟಾಗಿದ್ದು, ಎಂಪಾಕ್ಸ್ ಸೋಂಕು ಇದ್ದ ದೇಶದಿಂದ ಭಾರತಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇದನ್ನು ಕೇಂದ್ರ ಆರೋಗ್ಯ ಸಚಿವಾಲಯ ದೃಢಪಡಿಸಿದೆ. ಮೊದಲು ಈತನಿಗೆ ಸಾಮಾನ್ಯ ಸೋಂಕು ಎಂದು ಹೇಳಲಾಗಿತ್ತು. ಆದರೆ, ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ ಮೇಲೆ ವರದಿಯಲ್ಲಿ ಆಫ್ರಿಕಾದ ಕ್ಲಾಡ್-2 ಎಂಪಾಕ್ಸ್ ವೈರಸ್ ಇರುವುದು ದೃಢವಾಗಿದೆ.
ಎಂಪಾಕ್ಸ್ ಕಾಯಿಲೆ ಚಿಕಿತ್ಸೆಗಾಗಿ ಮೀಸಲಿಟ್ಟಿರುವ ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಆತನ ಆರೋಗ್ಯ ಕೂಡ ಸದ್ಯಕ್ಕೆ ಸ್ಥಿರವಾಗಿದ್ದು, ಯಾವುದೇ ಆತಂಕ ಬೇಡ ಎಂದು ಹೇಳಲಾಗಿದೆ. ಈಗ ಸೋಂಕು ಸಾರ್ವಜನಿಕವಾಗಿ ಹರಡುವ ಯಾವುದೇ ಅಪಾಯವಿಲ್ಲ ಎಂದೂ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಎಂಪಾಕ್ಸ್ ಕಾಯಿಲೆ ವರದಿಯಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಅಲರ್ಟ್ ಆಗಿದೆ. ದೇಶದೆಲ್ಲೆಡೆ ಈ ಕಾಯಿಲೆ ಹರಡದಂತೆ ಎಚ್ಚರ ವಹಿಸಲು ನಿರ್ದೇಶನ ಕೂಡ ನೀಡಿದೆ. ಹಾಗಾಗಿ, ಎಂಪಾಕ್ಸ್ ಕಾಯಿಲೆಯ ಶಂಕಿತರನ್ನು ಕೂಡಲೇ ತಪಾಸಣೆಗೆ ಒಳಪಡಿಸುವಂತೆ ಖಡಕ್ ಆದೇಶ ನೀಡಿದೆ. ಶಂಕಿತರು ಹಾಗೂ ಕಾಯಿಲೆ ದೃಢಪಟ್ಟವರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸುವಂತೆಯೂ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಇನ್ನು ಕೇಂದ್ರ ಆರೋಗ್ಯ ಸಚಿವಾಲಯದ ನಿರ್ದೇಶಕ ಅಪೂರ್ವ ಚಂದ್ರ ಅವರು ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಎಂಪಾಕ್ಸ್ ಬಗ್ಗೆ ಜನರಲ್ಲಿರುವ ಭಯ ಹೋಗಲಾಡಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ದೇಶದಲ್ಲಿ ಹೊಸದಾಗಿ ಎಂಪಾಕ್ಸ್ ಕೇಸ್ ವರದಿಯಾಗಿದೆ. ಆದರೆ ಇಲ್ಲಿವರೆಗೂ ವರದಿಯಲ್ಲಿ ಎಂಪಾಕ್ಸ್ ಸೋಂಕು ಇರುವುದು ದೃಢವಾಗಿರಲಿಲ್ಲ. ಏನೇ ಆದರೂ ಜನರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ಹೇಳಿದ್ದಾರೆ.
ಎಂಪಾಕ್ಸ್ ಸಂಬಂಧ ಎಲ್ಲ ರಾಜ್ಯಗಳು ತಮ್ಮಲ್ಲಿರುವ ಆಸ್ಪತ್ರೆಗಳಲ್ಲಿ ಐಸೋಲೇಷನ್ ಸೌಲಭ್ಯ, ತರಬೇತಿ ಪಡೆದ ವೈದ್ಯರು ಹಾಗೂ ಚಿಕಿತ್ಸೆಗೆ ಬೇಕಾಗಿರುವ ಪರಿಕರಗಳನ್ನು ಸಿದ್ಧವಾಗಿ ಇಟ್ಟುಕೊಳ್ಳುವಂತೆ ಹೇಳಲಾಗಿದೆ. ಎಂಪಾಕ್ಸ್ ಶಂಕಿತರು ಅಥವಾ ಸೋಂಕು ದೃಢಪಟ್ಟವರೆ ಅವರೊಂದಿಗೆ ಸಂಪರ್ಕದಲ್ಲಿದ್ದ ಜನರನ್ನು ಕೂಡ ತ್ವರಿತವಾಗಿ ಪತ್ತೆ ಹಚ್ಚಬೇಕು. ಈ ವಿಚಾರದಲ್ಲಿ ಎಲ್ಲರೂ ಅಲರ್ಟ್ ಆಗಿರುವಂತೆ ರಾಜ್ಯಗಳಿಗೆ ಸಚಿವಾಲಯ ಸೂಚನೆ ನೀಡಿದೆ.

ಭಾರತದಲ್ಲಿ ಎಂಪಾಕ್ಸ್ ಶಂಕಿತ ಪ್ರಕರಣ ಪತ್ತೆಯಾಗಿದೆ. ಹಲವು ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಆತಂಕದ ನಡುವೆ ಭಾರತದಲ್ಲಿ ಕೂಡ ಸೋಂಕಿತ ಪ್ರಕರಣ ಪತ್ತೆಯಾಗಿದೆ. ವಿದೇಶದಿಂದ ವಾಪಸಾಗಿರುವ ಯುವಕನಲ್ಲಿ ಎಂಪಾಕ್ಸ್‌ನ ಲಕ್ಷಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ರೋಗಿಯನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದೆ.
ರೋಗಿಗೆ ಎಂಪಾಕ್ಸ್ ಸೋಂಕು ಇದೆಯೇ ಎಂದು ದೃಢಪಡಿಸಿಕೊಳ್ಳಲು ವಿವಿಧ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಎಂಪಾಕ್ಸ್ ಸೋಂಕು ಇರುವ ಬಗ್ಗೆ ಖಚಿತಪಡಿಸಲು ವಿವಿಧ ಪರೀಕ್ಷೆಗಳನ್ನು ನಡೆಸುತ್ತಿದ್ದು, ಪ್ರೋಟೊಕಾಲ್‌ಗೆ ಅನುಗುಣವಾಗಿಯೇ ಪ್ರಕರಣವನ್ನು ನಿರ್ವಹಣೆ ಮಾಡಲಾಗುತ್ತಿದೆ. ಆತನ ಸಂಪರ್ಕಕ್ಕೆ ಯಾರಾದರೂ ಬಂದಿದ್ದಾರ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಆಫ್ರಿಕಾದ 12 ದೇಶಗಳಲ್ಲಿ ಎಂಪಾಕ್ಸ್ ಪ್ರಕರಣ ಹರಡುತ್ತಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತುಸ್ಥಿತಿ ಎಂದು ಘೋಷಿಸಿದ ಮೂರು ವಾರಗಳ ಬಳಿಕ ಭಾರತದಲ್ಲಿ ಮೊದಲ ಎಂಪಾಕ್ಸ್ ಪ್ರಕರಣ ಪತ್ತೆಯಾಗಿದೆ.












Click it and Unblock the Notifications