ಆಟ ಈಗ ಶುರುವಾಗಿದೆ, ವಿದಾಯ ಭಾಷಣದಲ್ಲಿ ಅರ್ನಬ್ ಗೋಸ್ವಾಮಿ

Posted By:
Subscribe to Oneindia Kannada

ನವದೆಹಲಿ, ನ 4: ಈ ಪ್ರಪಂಚ ಚಿಕ್ಕದು, ಇಂದಲ್ಲಾ ನಾಳೆ ನಿಮ್ಮನ್ನು ಮತ್ತೆ ಭೇಟಿಯಾಗುತ್ತೇನೆ, ಆಟ ಈಗ ಶುರುವಾಗಿದೆ ಎಂದು ಇತ್ತೀಚೆಗೆ ಟೈಮ್ಸ್ ನೌ ವಾಹಿನಿಗೆ ರಾಜೀನಾಮೆ ನೀಡಿದ ಎಡಿಟರ್-ಇನ್-ಚೀಫ್ ಕಮ್ ಅಧ್ಯಕ್ಷ (ನ್ಯೂಸ್ ಸೆಕ್ಸನ್) ಅರ್ನಬ್ ಗೋಸ್ವಾಮಿ ತಮ್ಮ ವಿದಾಯ ಭಾಷಣದಲ್ಲಿ ಹೇಳಿದ್ದಾರೆ.

ಅರ್ನಬ್, ಗುರುವಾರ (ನ 3) ಸಹೋದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವಿಡಿಯೋ ಬಹಿರಂಗಗೊಂಡಿದ್ದು, ' the game has just begun' ಎಂದು ಫೇರ್ ವೆಲ್ ಭಾಷಣ ಆರಂಭಿಸಿದ ಅರ್ನಬ್, ಮಾಧ್ಯಮಗಳ ಸ್ವಾತಂತ್ರ್ಯದ ಬಗ್ಗೆ ಯಾರೂ ನಮಗೆ ಪಾಠ ಹೇಳಿಕೊಡಬೇಕಾಗಿಲ್ಲ ಎಂದಿದ್ದಾರೆ. (ಅರ್ನಬ್ ಗೋಸ್ವಾಮಿ ರಾಜೀನಾಮೆ)

The game has just begun, Arnab Goswami in hiss farewell speech

ತಮ್ಮ ಭಾಷಣದ ಮಧ್ಯೆ ಭಾವೋದ್ವೇಗಕ್ಕೆ ಒಳಗಾದ ಅರ್ನಬ್, ನಮ್ಮ ಸಂಸ್ಥೆ ಮಾಧ್ಯಮ ಲೋಕದಲ್ಲಿ ಮೊದಲ ಸ್ಥಾನದಲ್ಲಿ ಇರಬೇಕು ಎನ್ನುವ ಕಾರಣಕ್ಕಾಗಿ ನಿಮ್ಮ ಜೊತೆ ಕಠಿಣವಾಗಿರ ಬೇಕಾಯಿತು ಎಂದು ಸಹದ್ಯೋಗಿಗಳ ಕ್ಷಮೆಯಾಚಿಸಿದರು.

ಯಾರೊಬ್ಬರು ವಿಶ್ವಾಸವನ್ನು ಕಳೆದುಕೊಳ್ಳಬಾರದು, ಮಾಧ್ಯಮ ಯಾವ ರೀತಿ ಕೆಲಸ ನಿರ್ವಹಿಸಬೇಕೆಂದು ಯಾರೂ ನಮಗೆ ಹೇಳಬೇಕಾಗಿಲ್ಲ. ಸ್ವತಂತ್ರ ಮಾಧ್ಯಮ ಬಂದಾಗಿದೆ ಮತ್ತು ಅದು ಸ್ವತಂತ್ರವಾಗಿಯೇ ಕಾರ್ಯ ನಿರ್ವಹಿಸಲಿದೆ ಎಂದು ಅರ್ನಬ್ ಹೇಳಿದ್ದಾರೆ.

ಸಂಸ್ಥೆಗೆ ಒಳ್ಳೆಯದನ್ನು ಮಾಡಿದ್ದೇನೆ, ವೃತ್ತಿಪರತೆಯಿಂದ ಕೆಲಸ ಮಾಡಲು ನನಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ಅರ್ನಬ್ ತಮ್ಮ ವಿದಾಯ ಭಾಷಣದಲ್ಲಿ ಹೇಳಿದ್ದಾರೆ.

ಟೈಮ್ಸ್ ನೌ ವಾಹಿನಿ ಎಡಿಟರ್ ಇನ್ ಚೀಫ್ ಹುದ್ದೆಗೆ ಅರ್ನಬ್ ಗೋಸ್ವಾಮಿ ಅವರು ಮಂಗಳವಾರ (ನ 1) ರಾಜೀನಾಮೆ ನೀಡಿದ್ದರು. ಆದರೆ, ತಮ್ಮ ಜನಪ್ರಿಯ ಟಿವಿ ಶೋ 'News Hour' ಶೋ ಮುಂದುವರೆಸಲು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿಯಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The game has just begun, Arnab Goswami (Editor-in-Chief and President (News) of Times Now & ET Now) in his farewell speech.
Please Wait while comments are loading...