ಲೋಕಭೆಯಲ್ಲ....ನಟ ದಳಪತಿ ವಿಜಯ್ ಕಣ್ಣಿಟ್ಟಿರೋದು 2026 ರ ವಿಧಾನಸಭಾ ಚುನಾವಣೆ ಮೇಲೆ!
ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ವಿಜಯ್ ಅವರು ರಾಜಕೀಯಕ್ಕೆ ಧುಮುಕಲು ಸಿದ್ಧರಾಗಿದ್ದಾರೆ. ಇದು ತಮಿಳುನಾಡಿನ ಸಿನಿಮಾ ಮತ್ತು ರಾಜಕೀಯದಲ್ಲಿ ಇದು ಹೊಸ ತಿರುವು ತರಲಿದೆ ಎಂದು ಮೂಲಗಳು ಮಂಗಳವಾರ ಸೂಚಿಸಿವೆ. ಫೆಬ್ರವರಿ ಮೊದಲ ವಾರದಲ್ಲಿ ನವ ದೆಹಲಿಯಲ್ಲಿ ಇನ್ನೂ ಹೆಸರಿಸದ ರಾಜಕೀಯ ಪಕ್ಷವನ್ನು ನೋಂದಾಯಿಸಲು ನಟ ವಿಜಯ್ ಚಿಂತನೆ ನಡೆಸಿದ್ದಾರೆ.
ಇನ್ನೂ ನಟ ವಿಜಯ್ ಅವರ ಪಕ್ಷವು ಲೋಕಸಭೆಗಲ್ಲ... ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗಿದೆ. ಹೆಸರು ನೋಂದಾಯಿಸದ ವಿಜಯ್ ಅವರ ಪಕ್ಷವು 2026 ರ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ವಿಜಯ್ ಪಕ್ಷದ ಅಧ್ಯಕ್ಷರೆಂದು ಘೋಷಿಸಲಾಗಿದ್ದು, ಹೆಸರು ನೋಂದಾಯಿಸುವ ಪ್ರಕ್ರಿಯೆ ನಡೆಯುತ್ತಿದೆ.

"ವಿಜಯ್ ಅವರು ತಮಿಳುನಾಡಿನಲ್ಲಿ 2026 ರ ರಾಜ್ಯ ಚುನಾವಣೆಗೆ ಮುಂಚಿತವಾಗಿ ರಾಜಕೀಯಕ್ಕೆ ಪ್ರವೇಶಿಸುತ್ತಾರೆ. ತಮಿಳುನಾಡಿನ ಸಂಪ್ರದಾಯಗಳಿಗೆ ಅನುಗುಣವಾಗಿ ಹೆಸರನ್ನು ಇಡಲಾಗುತ್ತದೆ. ಖಂಡಿತವಾಗಿಯೂ ಅದರಲ್ಲಿ ಕಳಗಂ ಇರುತ್ತದೆ" ಎಂದು ಮೂಲಗಳು ತಿಳಿಸಿವೆ.
ಜೊತೆಗೆ "ನಟ ವಿಜಯ್ ಅವರನ್ನು ತಮ್ಮ ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಚುನಾವಣಾ ಆಯೋಗದಲ್ಲಿ ಪಕ್ಷದ ಹೆಸರನ್ನು ನೋಂದಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಪಕ್ಷವು ತನ್ನ ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಯನ್ನೂ ನೇಮಿಸಿದೆ. ಸುಮಾರು 200 ಸದಸ್ಯರು ಪಾಲ್ಗೊಂಡಿದ್ದ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಕಾರ್ಯಕಾರಿ ಸಮಿತಿಯನ್ನೂ ರಚಿಸಲಾಗಿದೆ" ಎಂದು ವರದಿಯಾಗಿದೆ.
ವಿಜಯ್ ಅವರಿಗೆ ಪಕ್ಷದ ಹೆಸರನ್ನು ಆಯ್ಕೆ ಮಾಡುವ ಅಧಿಕಾರ ನೀಡಲಾಗಿದೆ. ನಟ ಈಗಾಗಲೇ 'ವಿಜಯ್ ಮಕ್ಕಳ್ ಇಯಕ್ಕಂ' ಎಂಬ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಸಾವಿರಾರು ಅಭಿಮಾನಿಗಳನ್ನು ಇದು ಹೊಂದಿದೆ. ಈ ಫ್ಯಾನ್ ಗ್ರೂಪ್ ರಾಜ್ಯಾದ್ಯಂತ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಇತ್ತೀಚೆಗಷ್ಟೇ ಅಭಿಮಾನಿಗಳ ಸಂಘ ತಮಿಳುನಾಡಿನ ಪಬ್ಲಿಕ್ ಪರೀಕ್ಷೆಯಲ್ಲಿ ಟಾಪರ್ ಆದವರನ್ನು ಸನ್ಮಾನಿಸಿತ್ತು.

ರಾಜಕೀಯದಲ್ಲಿ ಆಸಕ್ತಿ ಹೊಂದಿರುವ ವಿಜಯ್
ನಟ ವಿಜಯ್ ಯಾವಾಗಲೂ ರಾಜಕೀಯದ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ. ಹಲವಾರು ಬಾರಿ, ಅವರು ತಮ್ಮ ವೃತ್ತಿಜೀವನದ ಕೆಲವು ಹಂತದಲ್ಲಿ ರಾಜಕೀಯಕ್ಕೆ ಪ್ರವೇಶಿಸುವ ಬಗ್ಗೆ ಸುಳಿವುಗಳನ್ನು ನೀಡಿದ್ದಾರೆ. 2020 ರಲ್ಲಿ, ಅವರ ತಂದೆ ಎಸ್‌ಎ ಚಂದ್ರಶೇಖರ್ ಅವರು ರಾಜಕೀಯ ಪಕ್ಷದ ಮೂಲಕ ರಾಜಕೀಯದಲ್ಲಿ ಸಕ್ರಿಯರಾಗುವುದಾಗಿ ಘೋಷಿಸಿದ್ದರು. ಅಲ್ಲಿಂದಲೇ ವಿಜಯ್ ಕೂಡ ರಾಜಕೀಯಕ್ಕ ಎಂದ್ಟರಿ ಕೊಡುವ ಸುದ್ದಿ ಹಬ್ಬಿತ್ತು.
ಹೊಸ ಪಕ್ಷಕ್ಕೆ ವಿಜಯ್ ತಂದೆ ಎ ಚಂದ್ರಶೇಖರ್ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ, ಅವರ ಪತ್ನಿ ಅದರ ಖಜಾಂಜಿ ಮತ್ತು ಸಂಬಂಧಿ ಪದ್ಮನಾಭನ್ ಪಕ್ಷದ ಅಧ್ಯಕ್ಷರು ಎಂದು ಘೋಷಿಸಿದರು. ಆದರೆ, ವಿಜಯ್ ತನ್ನ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದರಿಂದ ತಂದೆಯೊಂದಿಗೆ ಅಸಮಾಧಾನ ಹೊಂದಿದ್ದರು. ಹೀಗಾಗಿ, ಅವರು ತಮ್ಮ ಪೋಷಕರಾದ ಎಸ್‌ಎ ಚಂದ್ರಶೇಖರ್ ಮತ್ತು ಶೋಬಾ ಚಂದ್ರಶೇಖರ್ ಸೇರಿದಂತೆ ಹನ್ನೊಂದು ಜನರ ವಿರುದ್ಧ ಚೆನ್ನೈನ ಸಿಟಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು.
"ನನ್ನ ತಂದೆ ನೀಡಿರುವ ರಾಜಕೀಯ ಹೇಳಿಕೆಗಳಿಗೂ ನನಗೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ ಸಂಬಂಧವಿಲ್ಲ, ನನ್ನ ತಂದೆಯ ರಾಜಕೀಯ ಆಕಾಂಕ್ಷೆಗಳನ್ನು ಅನುಸರಿಸಲು ನಾನು ಬದ್ಧನಲ್ಲ. ನನ್ನ ತಂದೆ ಪ್ರಾರಂಭಿಸಿದ ಪಕ್ಷಕ್ಕೆ ನನ್ನ ಅಭಿಮಾನಿಗಳು ಸೇರಬೇಡಿ ಎಂದು ವಿನಂತಿಸುತ್ತೇನೆ. ಯಾರಾದರೂ ತಮ್ಮ ರಾಜಕೀಯ ಆಕಾಂಕ್ಷೆಗಳಿಗಾಗಿ ನನ್ನ ಹೆಸರು, ಫೋಟೋ ಅಥವಾ ನನ್ನ ಅಭಿಮಾನಿ ಸಂಘಗಳನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರೆ, ನಾನು ಅವರ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ" ಎಂದು ಹೇಳಿಕೆಯಲ್ಲಿ ತಿಳಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಎಸ್‌ಎ ಚಂದ್ರಶೇಖರ್ ಪಕ್ಷವನ್ನು ವಿಸರ್ಜಿಸಿದರು.
-
CBFC: "ಜನ ನಾಯಗನ್" ಸಿನಿಮಾ ಲೀಕ್ ವರದಿ ಆಧಾರರಹಿತ: ಆರೋಪಗಳಿಗೆ ಸಿಬಿಎಫ್ಸಿ ಸ್ಪಷ್ಟನೆ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ









Click it and Unblock the Notifications