ಶಂಕಿತ ಉಗ್ರ ಎಜಾಜ್ ಸೆರೆ; ಹೈದರಾಬಾದಿಗೆ ರವಾನೆ

terror-suspect-aijaz-ahmed-held-kuwait-sent-judicial-custody-hyderabad
ಹೈದರಾಬಾದ್, ಅ.12: ಶಂಕಿತ ಭಯೋತ್ಪಾದಕ, ಸುಪಾರಿ ಹಂತಕ ಮೊಹಮದ್ ಎಜಾಜ್ ಅಹಮದನನ್ನು ಇಂಟರ್ ಪೋಲ್ ನೆರವಿನಿಂದ ಕುವೈತಿನಲ್ಲಿ ಬಂಧಿಸಲಾಗಿದ್ದು ಹೈದರಾಬಾದಿಗೆ ಶುಕ್ರವಾರ ಕರೆತರಲಾಗಿದೆ.

ಬಂಧಿತ ಮೊಹಮದ್ ಎಜಾಜ್ ಅಹಮದ್ ಈಗ ನ್ಯಾಯಾಂಗ ವಶದಲ್ಲಿದ್ದಾನೆ. Indian Muslim Mohammadi Mujahideen (IMMM) ಜತೆಯೂ ಎಜಾಜ್ ಅಹಮದ್ ಗುರುತಿಸಿಕೊಂಡಿದ್ದಾನೆ. ಇವನು, ಹತ್ಯೆಗೀಡಾದ ಅಜಾಂ ಘೋರಿ ಸಹಚರ. ನಿಜಾಮಾಬಾದ್ ಪೊಲೀಸರು 2000 ಇಸ್ವಿಯಲ್ಲಿ ಘೋರಿಯನ್ನು ಗುಂಡಿಟ್ಟು ಸಾಯಿಸಿದ್ದರು.

ಅಜಾಂ ಘೋರಿಯು ಪಾಕಿಸ್ತಾನದ Inter Services Intelligence (ISI) ಏಜೆಂಟ್. Lashkar-e-Toiba ಕುಮ್ಮಕ್ಕಿನಿಂದ ಭಾರತದಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ಎಸಗಲು ಅಜಾಂ ಘೋರಿ IMMM ಸಂಘಟನೆಯನ್ನು ಹುಟ್ಟುಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

35 ವರ್ಷದ ಎಜಾಜ್ ಅಹಮದ್ ಮೂಲತಃ ಆಂಧ್ರದ ನಿಜಾಮಾಬಾದ್ ಜಿಲ್ಲೆಯವ. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಈತ 2006ರಿಂದ ನಾಪತ್ತೆಯಾಗಿದ್ದ. IMMM ಸಂಘಟನೆಗೆ ಹಣಕಾಸು ಒದಗಿಸಲು ಎಜಾಜ್ ಅಹಮದ್ ಸುಪಾರಿ ಹಣ ಪಡೆದು ಹತ್ಯೆ ನಡೆಸಿದ್ದ ಎಂದು ಆಂಧ್ರ ಎಡಿಜಿಪಿ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.

2000 ಇಸ್ವಿಯಲ್ಲಿ ವಿಜಯವಾಡಾದ ಕೆ ಲಕ್ಷ್ಮಿನಾರಾಯಣ ಅವರನ್ನು ಸುಪಾರಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಲಕ್ಷ್ಮಿನಾರಾಯಣರ ನೆರೆಮನೆಯವರಾದ ರಾಧಿಕಾ ಮತ್ತು ಸಾಂಬಶಿವರಾವ್ ಅವರು ಅಜಾಂ ಘೋರಿಗೆ ಸುಪಾರಿ ಹಣ ನೀಡಿ ಲಕ್ಷ್ಮಿನಾರಾಯಣ ಹತ್ಯೆ ಮಾಡಿದ್ದರು.

ಮುಂದೆ 2 ಸಿನಿಮಾ ಮಂದಿರಗಳು, ಮಿಠಾಯಿ ಅಂಗಡಿಯೊಂದರ ಬಳಿ ಬಾಂಬ್ ಸ್ಫೋಟಿಸಲು ಎಜಾಜ್ ಅಹಮದ್ ಇದೇ ಸುಪಾರಿ ಹಣವನ್ನು ಬಳಸಿದ್ದ. ಹೈದರಾಬಾದಿನ ಾಭರಣ ಮಾಲೀಕನ ಹತ್ಯೆಗೂ ಇದನ್ನು ಬಳಸಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+