ಕಾಶ್ಮೀರ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ಬಂಧನ, ಗಿಲಾನಿ ಮನೆ ಜಪ್ತಿ
ಜಮ್ಮು ಮತ್ತು ಕಾಶ್ಮೀರ, ಜೂನ್ 5: ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ರನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬಂಧಿಸಿದೆ.
ಇದೇ ವೇಳೆ ರಾಷ್ಟ್ರೀಯ ತನಿಖಾ ದಳ ಮತ್ತೊಬ್ಬ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿಶಾ ಗಿಲಾನಿ ಮನೆಯನ್ನು ಜಪ್ತಿ ಮಾಡಿದೆ. ಕಾಶ್ಮೀರದಲ್ಲಿ ಸಂಘರ್ಷ ಉಂಟು ಮಾಡಲು ಇಬ್ಬರೂ ನಾಯಕರು ಅನಧಿಕೃತ ಮೂಲಗಳಿಂದ ಹಣ ಪಡೆದ ಆರೋಪ ಎದುರಿಸುತ್ತಿದ್ದಾರೆ.

ಭಯೋತ್ಪಾದಕರಿಗೆ ಹಣ ಹರಿದು ಬರುತ್ತಿರುವ ಪ್ರಕರಣವನ್ನು ತನಿಖೆ ಮಾಡುತ್ತಿರುವ ಎನ್ಐಎ ಈ ಕ್ರಮ ಕೈಗೊಂಡಿದೆ. ಕಳೆದ ಮೂರು ದಿನಗಳಲ್ಲಿ ಹಲವು ಕಡೆಗಳಲ್ಲಿ ರೈಡ್ ಮಾಡಿದ್ದ ಎನ್ಐಎ ಇದೀಗ ಪ್ರತ್ಯೇಕತಾವಾದಿ ನಾಯಕರ ಬಂಧನಕ್ಕೂ ಮುಂದಾಗಿದೆ.
ಇನ್ನು ಮನೆಗಳಿಗೆ ದಾಳಿ ನಡೆಸಿದ ಸಂದರ್ಭ ಲಷ್ಕರ್ ಇ ತಯ್ಯಾಬಾದ ಲೆಟರ್ ಹೆಡ್ ಗಳು ಮತ್ತು ಹಣ ಕೂಡಾ ಪತ್ತೆಯಾಗಿದೆ.












Click it and Unblock the Notifications