12 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ದೆಹಲಿಯ ತಾಪಮಾನ
ನವದೆಹಲಿ, ನವೆಂಬರ್ 24: ಚಳಿಗಾಲ ಆರಂಭವಾಗುತ್ತಿದ್ದಂತೆ ಗುರುವಾರ ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು 17 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇದು ಈ ವರ್ಷದ ಸರಾಸರಿಗಿಂತ ಕಡಿಮೆಯಾಗಿದೆ.
ಗುರುವಾರ ಬೆಳಗ್ಗೆ ಮಸುಕಾದ ವಾತಾವರಣ ಇತ್ತು. ದೆಹಲಿ ಪ್ರದೇಶದಲ್ಲಿ ಇಂದಿನ ತಾಪಮಾನ ಗರಿಷ್ಟ ಉಷ್ಣತೆಯು 27 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕನಿಷ್ಠ ತಾಪಮಾನವು ಡಿಗ್ರಿ ಸೆಲ್ಸಿಯಸ್ ಇರಬಹುದೆಂದು ಊಹಿಸಲಾಗಿದೆ. ಇದೇ ಗುರುಗ್ರಾಮ್‌ನಲ್ಲಿ ಕನಿಷ್ಠ ತಾಪಮಾನ 12°c ಮತ್ತು ಗರಿಷ್ಠ 27°c ಇದ್ದರೆ ಫರಿದಾಬಾದ್ ಮತ್ತು ಗಾಜಿಯಾಬಾದ್‌ನಲ್ಲಿ ಕನಿಷ್ಠ ತಾಪಮಾನ 13°c ಮತ್ತು ಗರಿಷ್ಠ 27°c ಇರುತ್ತದೆ.
ನವೆಂಬರ್ 18 ರಿಂದ ಕನಿಷ್ಠ ತಾಪಮಾನವು ಸರಾಸರಿ 8 ಅಥವಾ 9 ಡಿಗ್ರಿ ಸೆಲ್ಸಿಯಸ್ ಆಗಿದೆ. ದೆಹಲಿಯು ಬುಧವಾರದಂದು ಅತ್ಯಂತ ತಂಪಾದ ವಾಯುವ್ಯ ಮಾರುತಗಳನ್ನು ಹೊಂದಿತ್ತು. ಇದರ ಪರಿಣಾಮವಾಗಿ ಈ ತಿಂಗಳಿನ ಕನಿಷ್ಠ ತಾಪಮಾನವು 8 ಡಿಗ್ರಿಯಾಗಿರುತ್ತದೆ. ಏರ್ ಕ್ವಾಲಿಟಿ ಇಂಡೆಕ್ಸ್ 23. 7 ರೊಂದಿಗೆ, ದೆಹಲಿಯ ಗಾಳಿಯ ಗುಣಮಟ್ಟವು ಬುಧವಾರ ಕೆಟ್ಟಮಟ್ಟಕ್ಕೆ ಕುಸಿಯಿತು. ಈ ವಾರ, ಇದು ಕಳಪೆ ಅಥವಾ ತುಂಬಾ ಕಳಪೆ ವರ್ಗದಲ್ಲಿ ಉಳಿಯಿತು.

ನವೆಂಬರ್ 23 ತಿಂಗಳಿನಲ್ಲಿ ಅತ್ಯಂತ ಕಡಿಮೆ ತಾಪಮಾನ ದಾಖಲಾಯಿತು. ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್‌ನಲ್ಲಿ ಉಳಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಾಖಲಾದ ಗರಿಷ್ಠ ತಾಪಮಾನವು 27 ಡಿಗ್ರಿ ಸೆಲ್ಸಿಯಸ್ ಆಗಿದೆ. ಇದು ಸರಾಸರಿಗಿಂತ ಸ್ವಲ್ಪ ಹೆಚ್ಚಾಗಿದೆ.
ವಾಯು ಗುಣಮಟ್ಟ ಆಯೋಗದ ಪ್ರಕಾರ, ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ I ಮತ್ತು IIನೇ ಹಂತಗಳ ಅಡಿಯಲ್ಲಿ ನಡೆಯುತ್ತಿರುವ ಮಾಲಿನ್ಯ ವಿರೋಧಿ ಉಪಕ್ರಮಗಳು ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ ಮುಂದುವರಿಯುತ್ತದೆ. ಹಂತ IIIರ ಅಡಿಯಲ್ಲಿ ಮಿತಿಗಳನ್ನು ಜಾರಿಗೊಳಿಸಲು ಇದು ತಕ್ಷಣದ ಅಗತ್ಯವಲ್ಲ ಎಂದು ಗುರುವಾರ ಹೇಳಿದೆ.

ಗಾಳಿಯ ಗುಣಮಟ್ಟದಲ್ಲಿ ಸುಧಾರಣೆಯ ಹಿನ್ನೆಲೆಯಲ್ಲಿ ನವೆಂಬರ್ 14ರಂದು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್‌ನ ಹಂತ IIIರ ಅಡಿಯಲ್ಲಿ ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ ವಿಧಿಸಲಾದ ಮಿತಿಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಕೇಂದ್ರದ ವಾಯು ಗುಣಮಟ್ಟ ಸಮಿತಿಯು ಅಧಿಕಾರಿಗಳಿಗೆ ಆದೇಶಿಸಿದೆ. ಅಗತ್ಯ ಯೋಜನೆಗಳನ್ನು ಹೊರತುಪಡಿಸಿ ಹಂತ IIIರ ನಿರ್ಬಂಧಗಳ ಅಡಿಯಲ್ಲಿ ನಿರ್ಮಾಣ ಮತ್ತು ಕಟ್ಟಡ ಉರುಳಿಸುವಿಕೆಯ ಕಾರ್ಯಾಚರಣೆಗಳನ್ನು ನಿಷೇಧಿಸಲಾಗಿದೆ.












Click it and Unblock the Notifications