Telangana Nurse: 25 ವರ್ಷದ ನರ್ಸ್ ಕಡೆಯಿಂದ ಭೀಕರ ಕೃತ್ಯ, ಅಪ್ಪ-ಅಮ್ಮನ ಜೀವ ತೆಗೆದ ಆರೋಪ
ಅಪ್ಪ & ಅಮ್ಮ ದೇವರ ಸ್ವರೂಪ ಅಂತಾರೆ, ಅಲ್ಲದೆ ದೇವರು ಎಲ್ಲಾ ಕಡೆ ಇರಲು ಆಗೋದಿಲ್ಲ ಅಂತಾ ತಾಯಿಯನ್ನು ಜೊತೆಗೆ ಬಿಟ್ಟು ಹೋಗಿದ್ದಾನೆ ಎಂಬ ಮಾತು ಕೂಡ ಪೋಷಕರ ಮಹತ್ವ ಸಾರುತ್ತದೆ. ಆದರೆ ಹೀಗಿದ್ದಾಗ 25 ವರ್ಷದ ನರ್ಸ್ ಒಬ್ಬಳು ತನ್ನ ಹೆತ್ತ ಅಪ್ಪ & ಅಮ್ಮನಿಗೆ ಲೀಥಾಲ್ ಇಂಜಕ್ಷನ್ ನೀಡಿ ಕೊಲೆ ಮಾಡಿದರೆ, ಈ ಘಟನೆ ಬಗ್ಗೆ ಕೇಳಲು ಎಷ್ಟು ಆಘಾತ ಆಗಬೇಡ ಹೇಳಿ? ಹೌದು ಇಂತಹದ್ಧೇ ಭೀಕರ ಘಟನೆ ಇದೀಗ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ನಡೆದಿದೆ. ಇಡೀ ದೇಶವೇ ಅದರಲ್ಲೂ ಮೆಡಿಕಲ್ ಕ್ಷೇತ್ರವೇ ಬೆಚ್ಚಿಬೀಳುವ ಘಟನೆ ಇದಾಗಿದೆ. ಹಾಗಾದ್ರೆ ಈ ನರ್ಸ್‌ಗೆ ಅಪ್ಪ & ಅಮ್ಮನ ಕೊಲ್ಲುವಷ್ಟು ದ್ವೇಷ ಏನಿತ್ತು?
ಮಕ್ಕಳು ಓದಿ ಚನ್ನಾಗಿ ಬೆಳೆದು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲಿ, ಹಾಗೇ ಒಳ್ಳೆಯವರ ಜೊತೆಗೆ ಮದುವೆ ಆಗಿ ಚನ್ನಾಗಿ ಬಾಳಲಿ ಅನ್ನೋದು ಅಪ್ಪ & ಅಮ್ಮನ ಕನಸು. ಆದರೆ ಕೆಲವು ಕಡೆ ಜಾತಿ ಎಂಬ ಪಿಡುಗು ಕಾಡುತ್ತಾ, ಪ್ರೀತಿಸಿದವರಿಗೆ ಅಡ್ಡಿ ಮಾಡಿಬಿಡುತ್ತದೆ. ಇದೇ ರೀತಿಯಾಗಿ ಜಾತಿ ಕಾರಣಕ್ಕೆ ತನ್ನ ಪ್ರೀತಿಗೆ ಅಪ್ಪ, ಅಮ್ಮನ ವಿರೋಧ ಎದುರಿಸಿದ್ದ ನರ್ಸ್ ಲೀಥಾಲ್ ಇಂಜಕ್ಷನ್ ಚುಚ್ಚಿ ಸ್ವಂತ ತಂದೆ & ತಾಯಿಯನ್ನೇ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಆರೋಪಿಯನ್ನು 25 ವರ್ಷದ ನರ್ಸ್ ಸುರೇಖಾ ಎಂದು ಗುರುತಿಸಲಾಗಿದ್ದು, ನರ್ಸ್ ಮಾಡಿದ್ದ ಖತರ್ನಾಖ್ ಪ್ಲಾನ್ ಕೇಳಿ ಪೊಲೀಸರೇ ಸುಸ್ತಾಗಿ ಹೋಗಿದ್ದಾರೆ.

ಅಪ್ಪ & ಅಮ್ಮನಿಗೆ ಲೀಥಾಲ್ ಇಂಜಕ್ಷನ್
ಸುರೇಖಾ ವೃತ್ತಿಯಲ್ಲಿ ನರ್ಸ್ ಆಗಿದ್ದು ಪ್ರೀತಿಸಿ ಮದುವೆ ಆಗುವ ಪ್ಲಾನ್ ಮಾಡಿದ್ದರು, ಆದರೆ ಈ ಮದುವೆಗೆ ಜಾತಿ ಅಡ್ಡ ಬಂದಿತ್ತು ಎಂದು ಆರೋಪ ಮಾಡಲಾಗಿದೆ. ಸುರೇಖಾ ಅವರ ಅಪ್ಪ & ಅಮ್ಮ ಇಂಟರ್‌ಕ್ಯಾಸ್ಟ್ ಮ್ಯಾರೇಜ್ ಬೇಡ ಎಂದು ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ತನ್ನ ವೃತ್ತಿಯಲ್ಲಿ ಇದ್ದ ಜ್ಞಾನ ಬಳಸಿಕೊಂಡು, ಸ್ವಂತ ಅಪ್ಪ & ಅಮ್ಮನಿಗೆ ಲೀಥಾಲ್ ಇಂಜಕ್ಷನ್ ಚುಚ್ಚಿ ಕೊಲೆ ಮಾಡಿದ್ದಾಳೆ. ಜನವರಿ 25 ಭಾನುವಾರ ಯಾಚಾರಂನ ಮನೆಯಲ್ಲಿ ಈ ಘಟನೆಯು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಎನ್ ದಶರಥಮ್ (58) & ಅವರ ಹೆಂಡತಿ ಲಕ್ಷ್ಮೀ (54) ಎಂದು ಗುರುತಿಸಲಾಗಿದೆ.
ಮೊದಲಿಗೆ ಪೊಲೀಸರಿಗೆ ಅನುಮಾನ ಬಂದು ಮಕ್ಕಳನ್ನು ವಿಚಾರಣೆ ನಡೆಸಿದ್ದಾರೆ. ಈ ಸಮಯಕ್ಕೆ ಸರಿಯಾಗಿ ರಕ್ತದ ಕಲೆಗಳಿಂದ ಕೂಡಿದ ಸಿರಿಂಜ್ ಪತ್ತೆ ಆಗಿದ್ದು ಪೊಲೀಸರಿಗೆ ಅನುಮಾನ ಹೆಚ್ಚು ಮಾಡಿತ್ತು. ತನಿಖೆಯಲ್ಲಿ ಪೊಲೀಸರು ಮೃತ ದಂಪತಿಯ ಮಗ ಮತ್ತು ಅವರ ಮೂವರು ಹೆಣ್ಣು ಮಕ್ಕಳನ್ನ ಪ್ರಶ್ನಿಸಿದ್ದಾರೆ. ಈ ಸಮಯದಲ್ಲೇ ಕಿರಿಯ ಮಗಳು ಸುರೇಖಾ ನೀಡಿದ ಹೇಳಿಕೆ ಸಾಕಷ್ಟು ಅನುಮಾನ ಮೂಡಿಸಿತ್ತು. ಅಲ್ಲದೆ ಇದೇ ಕಾರಣಕ್ಕೆ ಹೆಚ್ಚಿನ ವಿಚಾರಣೆ ನಡೆಸಿದ ಸಮಯದಲ್ಲಿ, ಭೀಕರ ಕೃತ್ಯ ಹೊರಬಿದ್ದಿದೆ. ಅಂತಿಮವಾಗಿ ತಾನು ಈ ಕೊಲೆ ಮಾಡಿರುವುದಾಗಿ ಸುರೇಖಾ ಒಪ್ಪಿದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಔಷಧಿ ಕದ್ದು ತಂದಿದ್ದ ನರ್ಸ್
ಇನ್ನು ಆರೋಪಿ ಸುರೇಖಾ ಸಂಗರೆಡ್ಡಿ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಇದೇ ಆಸ್ಪತ್ರೆಯಿಂದ ಕದ್ದು ಲೀಥಾಲ್ ಇಂಜಕ್ಷನ್ ತಂದು ನೀಡಿರುವ ಮಾಹಿತಿ ಬಯಲಾಗಿದೆ. ಅಲ್ಲದೆ ಈ ಘಟನೆ ಬಗ್ಗೆ ಆಸ್ಪತ್ರೆ ಅಧಿಕಾರಿಗಳಿಗೆ ಕೂಡ ಮಾಹಿತಿ ಇರಲಿಲ್ಲ. ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳ ಸ್ನಾಯು ಸಡಿಲಗೊಳಿಸಲು ಬಳಸುವ ಔಷಧಿ ಇದಾಗಿದೆ. ಆದ್ರೆ ಇದೇ ಔಷಧ ಬಳಸಿ ತನ್ನ ಅಪ್ಪ & ಅಮ್ಮನನ್ನೇ ಸುರೇಖಾ ಕೊಲೆ ಮಾಡಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications