ಬಿಆರ್‌ಎಸ್ ಪ್ರಮುಖ ನಾಯಕ ಪೊಂಗುಲೇಟಿ ಶ್ರೀನಿವಾಸ್ ಕಾಂಗ್ರೆಸ್‌ ಸೇರ್ಪಡೆ ಬಹುತೇಕ ಖಚಿತ- ಆಪರೇಶನ್‌ 'ಕೈ'ಗೆ ಡಿಕೆಶಿ ಚಾಲನೆ?

ಹೈದರಾಬಾದ್‌, ಜೂನ್‌ 20: ಮಾಜಿ ಸಂಸದ ಮತ್ತು ಬಿಎಸ್‌ಆರ್‌ ಪ್ರಮುಖ ನಾಯಕ ಪೊಂಗುಲೇಟಿ ಶ್ರೀನಿವಾಸ್ ಮಂಗಳವಾರ ಕಾಂಗ್ರೆಸ್‌ ಸೇರುವುದನ್ನು ಬಹುತೇಕ ಖಚಿತಪಡಿಸಿದ್ದಾರೆ. ಹೈದರಾಬಾದ್‌ಗೆ ತೆರಳಿ ಕಾಂಗ್ರೆಸ್‌ ನಾಯಕರೊಂದಿಗೆ ಸಭೆಯಲ್ಲಿ ಭಾಗಿವಹಿಸುವುದಾಗಿ ತಿಳಿಸಿದ್ದಾರೆ. ಈ ಸಮಯದಲ್ಲಿ ಹಾಜರಿರುವಂತೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ ಎಂದು ವರದಿಯಾಗಿದೆ.

ಬಳಿಕ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ದಿನಾಂಕಗಳನ್ನು ಅಂತಿಮಗೊಳಿಸಲಿದ್ದಾರೆ. ಆ ನಂತರ ಖಮ್ಮಂನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸುವ ನಿರೀಕ್ಷೆ ಇದೆ.

Telangana: BRS key leader and former MP Ponguleti Srinivas to join the Congress

ಖಮ್ಮಂನಲ್ಲಿ ಭಟ್ಟಿ ವಿಕ್ರಮಾರ್ಕ ಪಾದಯಾತ್ರೆಯ ಸಮಾರೋಪ ರ್ಯಾಲಿ ಮತ್ತು ಅವರ ಸಾರ್ವಜನಿಕ ಸಭೆಯನ್ನು ಪ್ರತ್ಯೇಕವಾಗಿ ನಡೆಸಲು ಮಾಜಿ ಬಿಆರ್‌ಎಸ್ ನಾಯಕ ಮುಂದಾಗಿದ್ದಾರೆ.

ಏಪ್ರಿಲ್‌ನಲ್ಲಿ, 'ಪಕ್ಷ ವಿರೋಧಿ' ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಅವರನ್ನು ಬಿಆರ್‌ಎಸ್‌ನಿಂದ ಜೂಪಲ್ಲಿ ಕೃಷ್ಣರಾವ್ ಅವರೊಂದಿಗೆ ಅಮಾನತುಗೊಳಿಸಲಾಗಿತ್ತು. ಅಂದಿನಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅವರನ್ನು ತಮ್ಮ ಪಕ್ಷಗಳಿಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂಬ ಮಾತುಗಳು ಕೇಳಿಬಂದಿವೆ.

ಕೇಸರಿ ಪಕ್ಷಕ್ಕೆ ಸೇರುವಂತೆ ಮನವೊಲಿಸಲು ಬಿಜೆಪಿ ಶಾಸಕ ಈಟಾಳ ರಾಜೇಂದರ್ ಅವರೊಂದಿಗೆ ಸಭೆ ನಡೆಸಿದರು. ಆದರೆ, ಪೊಂಗುಲೇಟಿ ಅವರು ಬಿಜೆಪಿ ತೊರೆಯುವಂತೆ ರಿವರ್ಸ್ ಕೌನ್ಸೆಲಿಂಗ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಈಟಾಳ ರಾಜೇಂದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2014 ರಲ್ಲಿ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ವೈಎಸ್‌ಆರ್‌ಸಿಪಿಯಿಂದ ಸಂಸದರಾಗಿ ಗೆದ್ದರು. ಆದರೆ ನಂತರ ಅವರು ಬಿಆರ್‌ಎಸ್ ಸೇರಿದರು. 2019 ರ ಚುನಾವಣೆಗೆ ಸ್ಪರ್ಧಿಸಲು ಅವರಿಗೆ ಟಿಕೆಟ್ ನೀಡಲಿಲ್ಲ. ಅವರು ಬಿಎಸ್‌ಆರ್‌ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಪಕ್ಷ ಮತ್ತು ಅವರ ನಡುವಿನ ಭಿನ್ನಾಭಿಪ್ರಾಯವು ದೊಡ್ಡದಾಯಿತು. ಕೆಸಿಆರ್ ಮತ್ತು ಬಿಆರ್‌ಎಸ್ ವಿರುದ್ಧ ಹಲವಾರು ಹೇಳಿಕೆಗಳನ್ನು ಪೊಂಗುಲೇಟಿ ನೀಡಿದರು. ಆ ನಂತರ ಅವರನ್ನು ಪಕ್ಷದಿಂದ ಅಮಾನತು ಮಾಡಲಾಯಿತು.

ಡಿಕೆಶಿಯಿಂದ ಆಪರೇಶನ್‌

ಆಪರೇಶನ್‌ ಆಕರ್ಷ್‌ ಎಂಬ ಪ್ರಕ್ರಿಯೆಗೆ ಕಾಂಗ್ರೆಸ್‌ ಗುಪ್ತವಾಗಿ ಚಾಲನೆ ನೀಡಿದೆ ಎನ್ನಲಾಗುತ್ತಿದೆ. ಬಿಜೆಪಿ ಹಾಗೂ ಬಿಎಸ್‌ಆರ್‌ ನಾಯಕರನ್ನು ಸೆಳೆಯಲು ತೆಲಂಗಾಣದಲ್ಲಿ ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಸ್‌ಆರ್‌ನ ಹಲವು ನಾಯಕರು ಬೆಂಗಳೂರಿಗೆ ಭೇಟಿ ನೀಡಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಅಭೂತಪೂರ್ವ ಯಶಸ್ಸು ಸಾಧಿಸಿದ ಬಳಿಕ ಡಿಕೆಶಿ ವರ್ಚಸ್ಸು ರಾಷ್ಟ್ರ ಮಟ್ಟದಲ್ಲಿ ದುಪ್ಪಟ್ಟಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+