Get Updates
Get notified of breaking news, exclusive insights, and must-see stories!

ತೆಹೆಲ್ಕಾ ಯುವತಿ ಹೆಸರು ಬಹಿರಂಗ, ಲೇಖಿ ವಿರುದ್ಧ ತನಿಖೆ

ಪಣಜಿ, ಡಿ.16: ತೆಹೆಲ್ಕಾ ಸಂಸ್ಥೆಯ ಕಿರಿಯ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿ ಬಂಧನಕ್ಕೊಳಗಾಗಿರುವ ತೆಹೆಲ್ಕಾ ಮಾಜಿ ಸಂಪಾದಕ ತರುಣ್ ತೇಜ್ ಪಾಲ್ ಪ್ರಕರಣದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಯುವತಿಯ ಹೆಸರನ್ನು ಟ್ವಿಟ್ಟರ್ ನಲ್ಲಿ ಬಹಿರಂಗಪಡಿಸಿದ ಆರೋಪ ಎದುರಿಸುತ್ತಿರುವ ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ವಿರುದ್ಧ ಗೋವಾ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

ಈ ಆರೋಪದ ಕುರಿತು ಗೋವಾದ ಪೊಲೀಸರು ತನಿಖೆಯ ನಾಟಕವಾಡುತ್ತಿದ್ದಾರೆ ಎಂದು ದೂರದಾರರಾಗಿರುವ ನಗರದ ವಕೀಲ ಸುನಿಲ್ ಕೌಥಂಕರ್ ದೂಷಿಸಿದ್ದಾರೆ.

ಮೀನಾಕ್ಷಿ ಲೇಖಿ ಅವರು ಮಾಡಿದ್ದೆನ್ನಲಾದ ಟ್ವಿಟ್ಟರ್ ನ ಸ್ಕ್ರೀನ್ ಶಾಟ್ ಪ್ರತಿ ಮತ್ತು ಯುಆರ್ ಎಲ್ ಅನ್ನು ಒದಗಿಸುವಂತೆ ಸೈಬರ್ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ರಾಜೇಶ್ ಜೋಬ್ ಅವರು ಸುನಿಲ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಡಿಸೆಂಬರ್ 10ರಂದೇ ಈ ಪತ್ರ ಬರೆಯಲಾಗಿದ್ದು ಸುನಿಲ್ ಅವರಿಗೆ ಶನಿವಾರ ತಲುಪಿದೆ. ಈ ಪ್ರಕರಣದ ಕುರಿತು ತನಿಖೆ ಆರಂಭವಾಗಿರುವುದು ಸಂತೋಷ ತಂದಿದೆ. ಆದರೆ ಬಿಜೆಪಿ ವಕ್ತಾರೆ ವಿರುದ್ಧ ತನಿಖೆ ಕೈಗೊಳ್ಳುವ ವಿಚಾರದಲ್ಲಿ ಗೋವಾ ಪೊಲೀಸರು ಗಂಭೀರವಾಗಿರುವಂತೆ ಕಾಣುತ್ತಿಲ್ಲ ಎಂದು ಸುನಿಲ್ ತಿಳಿಸಿದ್ದಾರೆ.

ಈ ನಡುವೆ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನ ಕ್ಕೊಳಗಾಗಿರುವ ತೆಹಲ್ಕಾ ಸ್ಥಾಪಕ ಸಂಪಾದಕ ತರುಣ್ ತೇಜ್ ಪಾಲ್ ವಿರುದ್ಧ ಗೋವಾ ಕ್ರೈಮ್ ಬ್ರಾಂಚ್ ಪೊಲೀಸರು ಹೆಚ್ಚುವರಿ ಎರಡು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತೇಜಪಾಲ್ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದ್ದಂತಾಗಿದೆ.

ಲೇಖಿ ವಿರುದ್ಧ ತನಿಖೆ

ಲೇಖಿ ವಿರುದ್ಧ ತನಿಖೆ

ರಾಷ್ಟ್ರೀಯ ಮಹಿಳಾ ಆಯೋಗ ಈಗಾಗಲೇ ಲೇಖಿ ಅವರಿಗೆ ಸಮನ್ಸ್ ಜಾರಿ ಮಾಡಿದ್ದು, ಸ್ಪಷ್ಟನೆ ಕೋರಿದೆ. ಆದರೆ, ಎಲ್ಲಾ ಆರೋಪಗಳನ್ನು ಅಲ್ಲಗೆಳೆದಿರುವ ಲೇಖೀ ಅವರು ಇದು ರಾಜಕೀಯ ಕುತಂತ್ರವಾಗಿದೆ ಎಂದಿದ್ದಾರೆ.

ತೇಜ್ ಪಾಲ್

ತೇಜ್ ಪಾಲ್

ಸಂತ್ರಸ್ತೆಯ ಹೇಳಿಕೆ, ಸಾಕ್ಷಿ ಹಾಗೂ ಪ್ರಕರಣ ನಡೆದಿದೆ ಎಂದು ಹೇಳಲಾಗಿರುವ ಹಯಾತ್ ಹೊಟೇಲ್ ನ ಸಿಸಿಟಿವಿ ವೀಡಿಯೊ ತುಣುಕುಗಳನ್ನು ಆಧಾರವಾಗಿಟ್ಟುಕೊಂಡು ಹೆಚ್ಚುವರಿ ಸೆಕ್ಷನ್ ‌ಗಳನ್ನು ತೇಜ್ ಪಾಲ್ ವಿರುದ್ಧ ಪ್ರಯೋಗಿಸಲಾಗಿದೆ ಎಂದು ತೇಜ್ ಪಾಲ್ ರನ್ನು ತನಿಖೆ ನಡೆಸುತ್ತಿರುವ 45 ವರ್ಷದ ಸುನೀತಾ ಸಾವಂತ್ ಎಂಬ ಖಡಕ್ ಮಹಿಳಾ ಆಧಿಕಾರಿ ಹೇಳಿದ್ದಾರೆ. ಈ ನಡುವೆ ತೇಜ್ ಪಾಲ್ ಅವರ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಲಾಗಿದೆ

ಶೋಮಾ ವಿಚಾರಣೆ

ಶೋಮಾ ವಿಚಾರಣೆ

ತೆಹಲ್ಕಾದ ಸ್ಥಾಪಕ ಸಂಪಾದಕ ತರುಣ್ ತೇಜ್ ಪಾಲ್ ಸಹೋದ್ಯೋಗಿ ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಪ್ರಕರಣದಲ್ಲಿ ಸಂಸ್ಥೆಯ ಮಾಜಿ ವ್ಯವಸ್ಥಾಪಕ ಸಂಪಾದಕಿ ಶೋಮಾ ಚೌಧರಿಯನ್ನು ಗೋವಾ ಕ್ರೈಂ ಬ್ರಾಂಚ್ ಪೊಲೀಸರು ತನಿಖೆಗೊಳಪಡಿಸಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು

ಶೋಮಾ ಬಂಧನವಿಲ್ಲ

ಶೋಮಾ ಬಂಧನವಿಲ್ಲ

ಶೋಮಾ ಅವರು ತಮ್ಮ ಹೇಳಿಕೆಯನ್ನು ಮುಖ್ಯನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸಾರಿಕಾ ಫಲ್ದೇಸಾಯಿ ಅವರಿಗೆ ನೀಡಿದ ನಂತರ ಆಕೆ ವಿಚಾರಣೆ ನಡೆಸಲಾಯಿತು. ತರುಣ್ ತೇಜ್ ಪಾಲ್ ಹಾಗೂ ಯುವ ಪತ್ರಕರ್ತೆ ನಡುವೆ ನಡೆದ ಇಮೇಲ್ ಸಂದೇಶ ರವಾನೆಯ ಬಗ್ಗೆ ಶೋಮಾರಲ್ಲಿ ಪ್ರಶ್ನಿಸಲಾಯಿತು ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.

ಲ್ಯಾಪ್ ಟಾಪ್ ವಶಕ್ಕೆ

ಲ್ಯಾಪ್ ಟಾಪ್ ವಶಕ್ಕೆ

ತೇಜ್ ಪಾಲ್ ಹಾಗೂ ಶೋಮಾ ಚೌಧರಿ ಅವರು ಬಳಸುತ್ತಿದ್ದ ಲ್ಯಾಪ್ ಟಾಪ್ ಮತ್ತು ಇನ್ನಿತರ ವಿದ್ಯುನ್ಮಾನ ಉಪಕರಣಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲು ಕ್ರೈಂ ಬ್ರಾಂಚ್ ಪೊಲೀಸರು ಮುಂದಾಗಿದ್ದಾರೆ. ತೇಜ್ ಪಾಲ್ ಬಳಸುತ್ತಿದ್ದ ಮೊಬೈಲ್ ಫೋನ್‌ನ್ನೂ ವಿಧಿವಿಜ್ಞಾನ ಪರಿವೀಕ್ಷಣೆಗೆ ಕಳುಹಿಸಿಕೊಡಲಾಗುವುದು ಎಂದು ತಿಳಿದು ಬಂದಿದೆ.

ಪ್ರಶ್ನೆಗಳ ಸುರಿಮಳೆ

ಪ್ರಶ್ನೆಗಳ ಸುರಿಮಳೆ

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೋಮಾ, ನನಗೆ ಸುಮಾರು 50 ಕ್ಕೂ ಹೆಚ್ಚು ಪ್ರಶ್ನೆಗಳನ್ನು ನೀಡಲಾಗಿತ್ತು. ಎಲ್ಲಕ್ಕೂ ಸಮರ್ಥವಾಗಿ ಉತ್ತರಿಸಿದ್ದೇನೆ. ಈ ಪ್ರಕರಣದಲ್ಲಿ ನಾನು ಮಾಧ್ಯಮಗಳ ಜತೆ ಸಹಕರಿಸುತ್ತಾ ಬಂದಿದ್ದೇನೆ. ಆದರೆ, ನನ್ನ ಪಾತ್ರದ ಬಗ್ಗೆ ಸರಿಯಾಗಿ ವರದಿ ಬಂದಿಲ್ಲ ಹೀಗಾಗಿ ನಾನು ತೆಹೆಲ್ಕಾ, ತೇಜಪಾಲ್, ಈ ಇಡೀ ಪ್ರಕರಣದ ಬಗ್ಗೆ ಹೆಚ್ಚಿನ ವಿಷಯ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ. ಶೋಮಾ ಅವರು ತೇಜಪಾಲ್ ಹಾಗೂ ಸಂತ್ರಸ್ತೆ ಇಮೇಲ್ ಬಗ್ಗೆ ಬಂದ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿಲ್ಲ ಎಂದು ತಿಳಿದು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+