ಬಿಜೆಪಿ ಗೂಂಡಾಗಳ ಪಕ್ಷ: ತೇಜಸ್ವಿ ಯಾದವ್

ಪಾಟ್ನಾ, ಜುಲೈ 30: "ಬಿಜೆಪಿ ಗೂಂಡಾಗಳ ಪಕ್ಷ" ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ಬಿಹಾರದ ಬಿಜೆಪಿ ಎಂಎಲ್ ಸಿ ಯೊಬ್ಬರು ಬಿಹಾರದ ರಾಜ್ಯಪಾಲರಾದ ಸತ್ಯ ಪಾಲ್ ಮಲೀಕ್ ಅವರ ವಿರುದ್ಧ ಬೆದರಿಕೆ ಒಡ್ಡುತ್ತಿರುವ ವಿಡಿಯೋವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿ ಯಾದವ್, ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Tejaswi Yadav says BJP a party of goons and shared a viral video

"ಬಿಹಾರ ರಾಜ್ಯ ಸರ್ಕಾರವು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ, ಇಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಹಗರಣವಾಗುತ್ತಿದೆ ಎಂಬುದನ್ನು ನೇರವಾಗಿ ದೂರಿದ ರಾಜ್ಯಪಾಲರ ವಿರುದ್ಧ ಬಿಜೆಪಿ ಮುನಿಸುಕೊಂಡಿದೆ. ಇದ್ದಿದ್ದನ್ನು ಇದ್ದ ಹಾಗೆ ಹೇಳಿದ್ದಕ್ಕೆ ಗೂಂಡಾಗಳಂತೆ ವರ್ತಿಸಿ ಪ್ರತಿಕ್ರಿಯಿಸಿದ್ದಾರೆ" ಎಂದು ಅವರು ಲೇವಡಿ ಮಾಡಿದ್ದಾರೆ.

"ಇದು ಗೂಂಡಾಗಳ ಪಕ್ಷವಲ್ಲವೇ? ಒಬ್ಬ ರಾಜ್ಯಪಾಲರಿಗೆ ಬೆದರಿಕೆ ಹಾಕುವಾಗಲೂ ಹೆದರದ ಇವರೆಂಥವರು! ಎಂಥ ನಾಚಿಕೆಗೇಡು" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಎಂಎಲ್ ಸಿ 'ರಾಜ್ಯಪಾಲರೇನು ನನ್ನ ತಾತನ ಸಂಬಂಧಿಕರೇ ಅವರು ಹೇಳಿದ್ದಲ್ಲವನ್ನೂ ಮಾಡುವುದಕ್ಕೆ? ಅವರನ್ನು ನಾನು ಹೊಡೆಯುತ್ತೇನೆ' ಎಂದಿರುವುದು ಈ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+