ಏರ್ ಇಂಡಿಯಾ: ಜಾಲ ವಿಸ್ತರಣೆಗಾಗಿ 1,000ಕ್ಕೂ ಹೆಚ್ಚು ಪೈಲಟ್ ನೇಮಕ
ಬೆಂಗಳೂರು, ಏಪ್ರಿಲ್ 27: ಟಾಟಾ ಸಮೂಹದ ಒಡೆತನದಲ್ಲಿರುವ ಏರ್‌ಲೈನ್ (Air India) ತನ್ನ ಸಂಪರ್ಕ ಜಾಲದ ವಿಸ್ತರಣೆಗೆ ಮುಂದಾಗಿದೆ. ರೂಪಿಸಲಾದ ಯೋಜನೆಯಡಿ ಜಾಲ ವಿಸ್ತರಣೆಗಾಗಿ ಏರ್‌ಲೈನ್ ಸಂಸ್ಥೆ ಏರ್ ಇಂಡಿಯಾ ಕ್ಯಾಪ್ಟನ್‌ಗಳು ಮತ್ತು ತರಬೇತುದಾರರನ್ನು ಒಳಗೊಂಡಂತೆ ಒಟ್ಟು 1,000 ಕ್ಕೂ ಹೆಚ್ಚು ಪೈಲಟ್‌ಗಳನ್ನು ನೇಮಕ ಮಾಡಿಕೊಳ್ಳಲಿದೆ.
ಜನರಿಗೆ ಅತ್ಯುತ್ತಮ ಸೇವೆ ನೀಡುರತ್ತಿರುವ ಟಾಟಾ ಏರ್‌ಲೈನ್ ಸಂಸ್ಥೆ ವ್ಯಾಪ್ತಿಯಲ್ಲಿ ಪ್ರಸ್ತುತದಲ್ಲಿ 1,800 ಕ್ಕೂ ಹೆಚ್ಚು ಪೈಲಟ್ ಗಳನ್ನು ಹೊಂದಿದೆ. ಅಲ್ಲದೇ ಈ ವಿಮಾನಯಾನ ಸಂಸ್ಥೆ ಬೋಯಿಂಗ್ ಮತ್ತು ಏರ್‌ಬಸ್‌ನೊಂದಿಗೆ 470 ಹೊಸ ವಿಮಾನಗಳ ಖರೀದಿಗೆ ನಿರ್ಧರಿಸಿದ್ದು, ಆರ್ಡರ್ ಸಹ ಮಾಡಿದೆ. ಈ ನೂತನ ವಿಮಾನಗಳ ಒಳಾಂಗಣ ಹೆಚ್ಚು ವಿಶಾಲವಾಗಿರಲಿದ್ದು, ಹಲವು ವೈಶಿಷ್ಟ್ಯತೆಗಳೊಂದಿಗೆ ಸೇವೆ ನೀಡಲು ಸಂಸ್ಥೆ ನಿರ್ಧರಿಸಿದೆ ಎನ್ನಲಾಗಿದೆ.

ಜಾಲ ವಿಸ್ತರಣೆ ಸಂಬಂಧ ಏರ್‌ಬಸ್ ಸಂಸ್ಥೆಯ ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ 210 A320/321 Neo/XLR ಮತ್ತು 40 A350-900/1000 ಸಹ ಒಳಗೊಂಡಿದೆ. ಬೋಯಿಂಗ್ ಸಂಸ್ಥೆಯ ಆದೇಶದಲ್ಲಿ 190 737-ಮ್ಯಾಕ್ಸ್, 20 787 ಮತ್ತು 10 777ಗಳನ್ನು ಒಳಗೊಂಡಿದೆ.
2022ರಲ್ಲಿ ಜನವರಿಯಲ್ಲಿ ಟಾಟಾ ಸಮೂಹ ಮರಳಿ ಏರ್ ಇಂಡಿಯಾವನ್ನು ತನ್ನ ತೆಕ್ಕೆಗೆ ಪಡೆಯಿರು. ಈ ಸ್ವಾಧೀನದ ನಂತರ ಗುರುವಾರ ನೀಡಿರುವ ಜಾಹೀರಾತಿನ ಪ್ರಕಾರ ಕ್ಯಾಪ್ಟನ್‌ಗಳು ಮತ್ತು ತರಬೇತುದಾರರನ್ನು ಒಳಗೊಂಡಂತೆ ಒಟ್ಟು 1,000 ಕ್ಕೂ ಹೆಚ್ಚು ಪೈಲಟ್‌ಗಳನ್ನು ನೇಮಕ ಪ್ರಕ್ರಿಯೆ ಆರಂಭಿಸಿದೆ.
ಬಹುವಿಧದ ತರಬೇತಿ ಪಡೆಯಲು ಅವಕಾಶ
ಟಾಟಾ ಸಮೂಹದ A320, B777, B787 ಮತ್ತು B737 ಜಾಲದಲ್ಲಿರುವ ಕ್ಯಾಪ್ಟನ್‌ಗಳು ಹಾಗೂ ಪ್ರಥಮ ಹಂತದ ಅಧಿಕಾರಿಗಳು ಜೊತೆಗೆ ತರಬೇತುದಾರರಿಗೆ ಬಹು ವಿಧದ ಅವಕಾಶಗಳನ್ನು ಸಂಸ್ಥೆ ನೀಡುತ್ತಿದೆ. 500 ಕ್ಕೂ ಹೆಚ್ಚು ವಿಮಾನಗಳ ನೂತನ ಸಿಬ್ಬಂದಿ ಸಹ ಈ ಅವಕಾಶ ಪಡೆಯಲಿದ್ದಾರೆ ಎಂದು ತಿಳಿಸಿದೆ.

ಏರ್ ಇಂಡಿಯಾದ ಪೈಲಟ್‌ಗಳು ತಮ್ಮ ವೇತನ ಪರಿಷ್ಕರಣೆ ಸೇವಾಕಾರ್ಯದ ನವೀಕರಣ ಕುರಿತು ಮನವಿ ಮಾಡಿದ್ದಾರೆ. ಆದರೆ ಈ ಬಗ್ಗೆ ಏರ್‌ಲೈನ್‌ನ ನಿರ್ಧಾರ ತಿಳಿಸಿಲ್ಲ ಎನ್ನಲಾಗಿದೆ. ಆದರೆ ಕಳೆದ ಏಪ್ರಿಲ್ 17 ರಂದು ಏರ್ ಇಂಡಿಯಾ ತನ್ನ ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗೆ ಪರಿಷ್ಕರಣೆಯನ್ನು ಘೋಷಿಸಿತ್ತು.
ಪರಿಷ್ಕರಣೆ ಒಪ್ಪದ ಯುನಿಯನ್ಸ್
ಆದರೆ ಈ ಪರಿಷ್ಕರಣೆಯನ್ನು ಪೈಲಟ್ ಯೂನಿಯನ್‌ಗಳಾದ ಇಂಡಿಯನ್ ಕಮರ್ಷಿಯಲ್ ಪೈಲಟ್ಸ್ ಅಸೋಸಿಯೇಶನ್ (PCPA) ಹಾಗೂ ಮತ್ತು ಇಂಡಿಯನ್ ಪೈಲಟ್ಸ್ ಗಿಲ್ಡ್ (IPG) ತಿರಸ್ಕರಿಸಿದೆ. ಪರಿಷ್ಕರಣೆಗೂ ಮುನ್ನ ಇಲ್ಲವೇ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವ ಮುನ್ನ ಯುನಿಯನ್ಸ್‌ಗಳನ್ನು ಸಂಪರ್ಕಿಸಬೇಕು. ಆದರೆ ಈ ಬಗ್ಗೆ ನಮ್ಮನ್ನು ಸಂಪರ್ಕ ಮಾಡದೇ ಕಾರ್ಮಿಕ ಪದ್ಧತಿಗಳ ಉಲ್ಲಂಘನೆ ಆಗಿದೆ ಎಂದು ಯೂನಿಯನ್‌ಗಳು ಆರೋಪಿಸಿವೆ.
ಟಾಟಾ ಸಮೂಹವು 'ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಎಐಎಕ್ಸ್ ಕನೆಕ್ಟ್ ಮತ್ತು ವಿಸ್ತಾರಾ' ಒಳಗೊಂಡಂತೆ ಒಟ್ಟು ನಾಲ್ಕು ಏರ್‌ಲೈನ್‌ಗಳನ್ನು ಹೊಂದಿದೆ. ಇವುಗಳ ಕಾರ್ಯ ನಿರ್ವಹಣೆಗಾಗಿ ಏರ್‌ಲೈನ್ಸ್ ಸಿಂಗಾಪುರ್ ಏರ್‌ಲೈನ್ಸ್‌ನೊಂದಿಗೆ ಕೈ ಜೋಡಿಸಿದ್ದು, ಜಂಟಿಯಾಗಿ ಸೇವೆ ನೀಡುತ್ತಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಎಐಎಕ್ಸ್ ಕನೆಕ್ಟ್ ಜೊತೆಗೆ ವಿಸ್ತಾರಾ ಹಾಗೂ ಏರ್ ಇಂಡಿಯಾವನ್ನು ವಿಲೀನದ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications