ತಮಿಳುನಾಡು : ಕೊಳವೆ ಬಾವಿಗೆ ಬಿದ್ದ ಬಾಲಕಿ

borewell
ತಮಿಳುನಾಡು, ಸೆ.28 : ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ನಾಲ್ಕ ವರ್ಷದ ಬಾಲಕಿಯೊಬ್ಬಳು ಶನಿವಾರ ಬೆಳಗ್ಗೆ ಬೋರ್ ವೆಲ್ ಗೆ ಬಿದ್ದಿದ್ದಾಳೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಅಧಿಕಾರಿಗಳು ಆಗಮಿಸಿದ್ದು, ಬಾಲಕಿಯನ್ನು ರಕ್ಷಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ತಿರುವಣ್ಣಾಮಲೈ ಜಿಲ್ಲೆಯ ಅರಾನ್ ಎಂಬ ಗ್ರಾಮದಲ್ಲಿನ ತೋಟದ ಬಳಿ ಇರುವ ಕೊಳವೆಬಾವಿಗೆ ದೇವಿ (4) ಎಂಬ ಬಾಲಕಿ ಶನಿವಾರ ಬೆಳಗ್ಗೆ ಆಕಸ್ಮಿಕವಾಗಿ ಬಿದ್ದಿದ್ದಾಳೆ. ಬಾವಿ ಸುಮಾರು 300 ಅಡಿ ಆಳವಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ವಿಷಯ ತಿಳಿದ ತಕ್ಷಣ ಚೆನ್ನೈನಿಂದ ಅಗ್ನಿಶಾಮಕ ದಳದ ತಂಡ ಗ್ರಾಮಕ್ಕೆ ಧಾವಿಸಿದೆ. ಬಾವಿಯ ಪಕ್ಕದಲ್ಲಿ 15 ಅಡಿ ಆಳದ ಸುರಂಗ ಕೊರೆದು ದೇವಿಯನ್ನು ರಕ್ಷಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ. ಬಾವಿಯ 60 ಅಡಿ ಆಳದಲ್ಲಿ ದೇವಿ ಸಿಕ್ಕಿಹಾಕಿಕೊಂಡಿದ್ದಾಳೆ.

ಕೊಳವೆ ಬಾವಿಯೊಳಕ್ಕೆ ಪೈಪ್ ಮೂಲಕ ಆಮ್ಲಜನಕ ಪೂರೈಸಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಮತ್ತು ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಯ ವೈದ್ಯರು ಆಗಮಿಸಿದ್ದು, ದೇವಿಯನ್ನು ರಕ್ಷಿಸುವ ಕಾರ್ಯಚರಣೆಗೆ ಸಹಾಯ ಮಾಡುತ್ತಿದ್ದಾರೆ.

ತೋಟದ ಮಾಲೀಕ ಕೆಲವು ದಿನಗಳ ಹಿಂದೆ ಈ ಕೊಳವೆ ಬಾವಿ ತೋಡಿಸಿದ್ದರು. ಆದರೆ, ನೀರು ದೊರೆಯದ ಕಾರಣ ಅದರ ಮೇಲೆ ಹುಲ್ಲುಹಾಕಿ ಹೋಗಿದ್ದರು. ತೋಟದಲ್ಲಿ ಕೂಲಿ ಕೆಲಸಕ್ಕೆ ಬಂದಿರುವ ಕಾರ್ಮಿಕರ ಮಗಳಾದ ದೇವಿ ಶನಿವಾರ ಬೆಳಗ್ಗೆ ಆಟವಾಡುವಾಗ ತಿಳಿಯದೆ ಕೊಳವೆಬಾವಿಗೆ ಬಿದ್ದಿದ್ದಾಳೆ.

ಸ್ಥಳಕ್ಕೆ ತಿರುವಣ್ಣಾಮಲೈ ಜಿಲ್ಲಾಧಿಕಾರಿ ಆಗಮಿಸಿದ್ದು, ಬೋರ್ ವೆಲ್ ಮುಚ್ಚದೆ ನಿರ್ಲಕ್ಷ್ಯ ತೋರಿದ ತೋಟದ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ದೇವಿಯನ್ನು ರಕ್ಷಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+