ಮತಯಂತ್ರಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ ಹೈಕೋರ್ಟ್!
ಜಾರ್ಖಂಡ್ ವಿಧಾನ ಸಭೆ ಚುನಾವಣೆಯಲ್ಲಿ ಮತಯಂತ್ರಗಳ ದೋಷದಿಂದಾಗಿಯೇ ಬಿಜೆಪಿ ಭರ್ಜರಿ ಜಯ ಗಳಿಸಲು ಸಾಧ್ಯವಾಯಿತು ಎಂದು ಉತ್ತರಾಖಾಂಡ್ ನ ಕಾಂಗ್ರೆಸ್ ಪಕ್ಷವು ಹೈಕೋರ್ಟ್ ನಲ್ಲಿ ಅಹವಾಲು ಸಲ್ಲಿಸಿತ್ತು.
ಡೆಹ್ರಾಡೂನ್, ಏಪ್ರಿಲ್ 27: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇಲ್ಲಿನ ಉತ್ತರಾಖಾಂಡ್ ನ್ಯಾಯಾಲಯವು, ಚುನಾವಣೆಗಳಲ್ಲಿ ಬಳಸುವ ಎಲೆಕ್ಟ್ರಾನಿಕ್ ಮತಯಂತ್ರಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಜಾರ್ಖಂಡ್ ವಿಧಾನ ಸಭೆ ಚುನಾವಣೆಯಲ್ಲಿ ಮತಯಂತ್ರಗಳ ದೋಷದಿಂದಾಗಿಯೇ ಬಿಜೆಪಿ ಭರ್ಜರಿ ಜಯ ಗಳಿಸಲು ಸಾಧ್ಯವಾಯಿತು ಎಂದು ಉತ್ತರಾಖಾಂಡ್ ನ ಕಾಂಗ್ರೆಸ್ ಪಕ್ಷವು ಹೈಕೋರ್ಟ್ ನಲ್ಲಿ ಅಹವಾಲು ಸಲ್ಲಿಸಿತ್ತು.[ಲೋಕಪಾಲ್ ವಿಳಂಬ: ಕೇಂದ್ರ ಸರ್ಕಾರ ಧೋರಣೆಗೆ ಸುಪ್ರೀಂ ಕಿಡಿ]

ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮತಯಂತ್ರಗಳ ಮೇಲೆ ನಿಮಗೆ ಅನುಮಾನವಿದ್ದರೆ ಆ ಎಲ್ಲಾ ಮತಯಂತ್ರಗಳನ್ನೂ ವಿಚಾರಣೆಗೊಳಪಡಿಸಬೇಕು ಎಂದಿತಲ್ಲದೆ, ಚುನಾವಣೆಗೆ ಬಳಸಲಾದ ಮತಯಂತ್ರಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಆಜ್ಞಾಪಿಸಿತು. ಅಂದಹಾಗೆ, ಹೈಕೋರ್ಟ್ ಹೇಳಿದ್ದು ತಮಾಷೆಗೆ. ಆದರೂ, ಅಹವಾಲು ಸಲ್ಲಿಸಿರುವ ಕಾಂಗ್ರೆಸ್ ನ ವಾದವನ್ನು ಮನ್ನಿಸಿ, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿತು.












Click it and Unblock the Notifications