ತಬ್ಲಿಘಿ ಜಮಾತ್ ಸದಸ್ಯ ಐಸೋಲೇಟೆಡ್ ನಲ್ಲಿ ಬೆತ್ತಲೆ ಓಡಾಡಿದ್ದು ನಿಜವೇ?

ನವದೆಹಲಿ, ಏಪ್ರಿಲ್.10: ಕೊರೊನಾ ವೈರಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾದ ಸಮಯದಲ್ಲಿ ಬಿರುಕು ಮೂಡಿಸುವಂತಾ ಕೆಲವು ಫೋಟೋ, ವಿಡಿಯೋ ಮತ್ತು ಸುದ್ದಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

Recommended Video

      ಎಳೆ ಕಂದಮ್ಮನನ್ನು ತೂಗುತ್ತಲೇ ಕರ್ತವ್ಯ ನಿಭಾಯಿಸ್ತಿರೋ ಈ ಮಹಿಳಾ ಪೊಲೀಸ್ ಕೆಲಸಕ್ಕೆ ಹ್ಯಾಟ್ಸ್ ಆಫ್

      ಒಂದು ಸಮುದಾಯದ ಜನರು ಕೊರೊನಾ ವೈರಸ್ ಹರಡುವುದಕ್ಕೆ ಮುಂದಾಗಿದ್ದಾರೆ ಎಂದು ಬಿಂಬಿಸುವಂತಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗುತ್ತಿದೆ. ಅಂಥದ್ದೇ ಒಂದು ವಿಡಿಯೋ ಹಿಂದಿನ ಅಸಲಿ ಸತ್ಯ ಇದೀಗ ಹೊರ ಬಿದ್ದಿದೆ.

      ನವದೆಹಲಿಯ ನಿಜಾಮುದ್ದೀನ್ ಮರ್ಕಾಜ್ ನಲ್ಲಿ ನಡೆದ ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿ ಹಲವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಈ ಪೈಕಿ ಒಬ್ಬ ಸೋಂಕಿತನು ವೈದ್ಯರ ಚಿಕಿತ್ಸೆ ಸಹಕಾರ ನೀಡದೇ ಆಸ್ಪತ್ರೆಯ ಐಸೋಲೇಟೆಡ್ ವಾರ್ಡ್ ಗಳಲ್ಲಿ ಬೆತ್ತಲೆಯಾಗಿ ಓಡಾಡಿದ್ದು ಅಲ್ಲದೇ ಕಿಟಕಿ ಗ್ಲಾಸ್ ಗಳನ್ನು ಒಡೆದು ಹಾಕಿರುವ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದರು.

      1,400 ಜನರು ಶೇರ್ ಮಾಡಿದ ವಿಡಿಯೋ

      1,400 ಜನರು ಶೇರ್ ಮಾಡಿದ ವಿಡಿಯೋ

      ನವದೆಹಲಿಯ ಗಜಿಯಾಬಾದ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ಬೆತ್ತಲೆಯಾಗಿ ಐಸೋಲೇಟೆಡ್ ವಾರ್ಡ್ ಗಳಲ್ಲಿ ವ್ಯಕ್ತಿಯೊಬ್ಬ ಓಡಾಡಿದ ವಿಡಿಯೋವನ್ನು HindustanKi Awazlive ಫೇಸ್ ಬುಕ್ ಪೇಜ್ ನಲ್ಲಿ ಅಪ್ ಲೋಡ್ ಮಾಡಲಾಗಿತ್ತು. ಅದೇ ವಿಡಿಯೋವನ್ನು 1,400 ಜನರು ಶೇರ್ ಮಾಡಿದ್ದರು.

      ವಿಡಿಯೋ ಹಿಂದಿನ ಅಸಲಿ ಸತ್ಯ ಇದೀಗ ಬಯಲು

      ವಿಡಿಯೋ ಹಿಂದಿನ ಅಸಲಿ ಸತ್ಯ ಇದೀಗ ಬಯಲು

      ಆದರೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಇತ್ತೀಚಿನದ್ದು ಅಲ್ಲವೇ ಅಲ್ಲ. ಕಳೆದ 2019ರ ಆಗಸ್ಟ್.23ರಂದು ಪಾಕಿಸ್ತಾನ ಕರಾಚಿಯಲ್ಲಿರುವ ಗುಲ್ಶಾನ್ ಇ ಹದೀದ್ ಪ್ರದೇಶದಲ್ಲಿ ಬೆತ್ತಲೆಯಾಗಿ ವ್ಯಕ್ತಿಯೊಬ್ಬ ಪ್ರವೇಶಿಸಿದ ಘಟನೆಗೆ ಸಂಬಂಧಿಸಿದ್ದು ಎಂದು ತಿಳಿದು ಬಂದಿದೆ.

      ವಿಡಿಯೋದಲ್ಲಿನ ಕಟ್ಟಡಕ್ಕೂ ಪಾಕ್ ಮಸೀದಿಗೂ ಹೋಲಿಕೆ

      ವಿಡಿಯೋದಲ್ಲಿನ ಕಟ್ಟಡಕ್ಕೂ ಪಾಕ್ ಮಸೀದಿಗೂ ಹೋಲಿಕೆ

      ಇನ್ನು, ವಿಡಿಯೋದಲ್ಲಿ ವ್ಯಕ್ತಿಯು ಒಡೆದು ಹಾಕಿದ ಕಟ್ಟಡವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಪಾಕಿಸ್ತಾನ ಗುಲ್ಶಾನ್ ಇ ಹದೀದ್ ಪ್ರದೇಶದಲ್ಲಿ ಇರುವ ಜಾಮಿಯಾ ಮಸೀದ್ ಖಾಲಿದ್ ಬಿನ್ ವಾಲೀದ್ ಹೋಲಿಕೆ ಕಂಡು ಬಂದಿದೆ. ಗೂಗಲ್ ನಲ್ಲಿ ಪತ್ತೆಯಾದ ಮಸೀದಿಯ ಅಂದಿನ ಮತ್ತು ಇಂದಿನ ಚಿತ್ರಗಳಲ್ಲಿ ವ್ಯತ್ಯಾಸವನ್ನು ಕೂಡಾ ಇಲ್ಲಿ ಪಟ್ಟಿ ಮಾಡಲಾಗಿದೆ.

      1. ಕಟ್ಟಡದ ಎರಡನೇ ಫ್ಲೋರ್ ನಲ್ಲಿ ಗಾಜಿನ ಕಿಟಕಿ

      2. ಕಟ್ಟಡದ ಒಂದನೇ ಫ್ಲೋರ್ ನಲ್ಲಿರುವ ಕಿಟಕಿಯು ಕಬ್ಬಿಣದ ಸಲಾಕೆಗಳಿಂದ ಕೂಡಿದೆ

      3. ಕಟ್ಟಡದ ಎದುರಿಗೆ ನೀತಿ ಬಣ್ಣದ ಹೆಸರನ್ನು ಬರೆಯಲಾಗಿದೆ

      ಪಾಕ್ ನಲ್ಲಿ ಮಾನಸಿಕ ಅಸ್ವಸ್ಥನಾಗಿದ್ದ ವ್ಯಕ್ತಿಯಿಂದ ಕೃತ್ಯ

      ಪಾಕ್ ನಲ್ಲಿ ಮಾನಸಿಕ ಅಸ್ವಸ್ಥನಾಗಿದ್ದ ವ್ಯಕ್ತಿಯಿಂದ ಕೃತ್ಯ

      ಪಾಕಿಸ್ತಾನದಲ್ಲಿ ನಡೆದ ಘಟನೆಯಲ್ಲಿ ಮಾನಸಿಕ ಅಸ್ವಸ್ಥನಾಗಿದ್ದ ಶಫೀಕ್ ಅಬ್ರೋ ಎಂಬ ವ್ಯಕ್ತಿಯು ಬೆತ್ತಲೆಯಾಗಿ ಓಡಾಡಿದ್ದನು. ಈತ ಪಾಕ್ ಕಮಾಂಡೋ ಒಬ್ಬರ ಪುತ್ರನೆಂದು ತಿಳಿದು ಬಂದಿದೆ. ಇದೇ ವಿಡಿಯೋವನ್ನು ಬಳಸಿಕೊಂಡು ಸುಳ್ಳು ಸುದ್ದಿಯಲ್ಲಿ ಹರಿ ಬಿಡಲಾಗಿದೆ ಎಂದು ತಿಳಿದು ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+