ತಿರುಪತಿಗೆ ಬಂತು 24 ಕೋಟಿಯ ಚಿನ್ನದ ರಥ!

ತಿರುಮಲದಲ್ಲಿರುವ ಎಸ್‌ವಿ ಮ್ಯೂಸಿಯಂನಲ್ಲಿ ಸ್ವರ್ಣರಥಂ ನಿರ್ಮಾಣ ಕಾರ್ಯದ ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಮಂಗಳವಾರ ಟಿಟಿಡಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ರೆಡ್ಡಿ ರಥ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.
ನಂತರ ಮಾಧ್ಯಮಗಳಿಗೆ ರಥದ ಕುರಿತು ಮಾಹಿತಿ ನೀಡಿದ ಅವರು, ರಥ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದ್ದು, ಸೆ.30ರಂದು ರಥವನ್ನು ದೇವಾಲಯಕ್ಕೆ ತರಲಾಗುವುದು ಎಂದು ಹೇಳಿದರು. 24 ಕೋಟಿ ರೂ ವೆಚ್ಚದಲ್ಲಿ ಸ್ವರ್ಣರಥಂ ನಿರ್ಮಾಣಗೊಂಡಿದೆ ಎಂದರು.
ಹೇಗಿದೆ ರಥ : 32 ಅಡಿ ಎತ್ತರವಿರುವ ಸ್ವರ್ಣರಥಂ 28,000 ಕೆ.ಜಿ.ತೂಕವಿರಲಿದೆ. 74 ಕೆ.ಜಿ.ಚಿನ್ನ, 2,800 ಕೆ.ಜಿ. ತಾಮಗ್ರ ಬಳಸಿ ಇದನ್ನು ನಿರ್ಮಿಸಲಾಗಿದೆ. 18 ಗೇಜ್ ತಾಮ್ರದ ತಗಡು ಸೇರಿದಂತೆ ರಥದಲ್ಲಿ 9 ಪದರದಲ್ಲಿ ಚಿನ್ನವಿರುತ್ತದೆ.
ಸೆ.30ರಂದು ಬೆಳಗ್ಗೆ ಚಿನ್ನದ ತೇರನ್ನು ರಾಜಬೀದಿಗಳಲ್ಲಿ ಮೆರವಣಿಗೆ ಮೂಲಕ ತೆಗೆದುಕೊಂಡು ಬಂದು, ದೇವಾಲಯ ಬಳಿಯ ವಾಹನ ಮಂಟಪದ ಹಿಂಭಾಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸ್ವರ್ಣರಥಂ ಮಂಟಪದಲ್ಲಿ ನಿಲ್ಲಿಸಲಾಗುತ್ತಿದೆ.
ಟಿಟಿಡಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಚಂದ್ರಶೇಖರರೆಡ್ಡಿ, ಅಧಿಕಾರಿಗಳಾದ ಸುಧಾಕರರೆಡ್ಡಿ, ಪರಂಧಾಮಂ ಹಾಗೂ ತಮಿಳುನಾಡಿನ ಶಿಲ್ಪಿಗಳ ತಂಡದ ಸ್ವರ್ಣರಥಂ ನಿರ್ಮಾಣದಲ್ಲಿ ಶ್ರಮವಹಿಸಿ ಕೆಲಸ ಮಾಡಿದ್ದಾರೆ.
ಈ ಸ್ವರ್ಣರಥ ಸಂಚರಿಸಲು ತಿರುವೆಂಕಟಪಥಂ ಎಂಬ ರಸ್ತೆಯನ್ನು ನಿರ್ಮಿಸಲಾಗಿದೆ. ಮೊದಲನೇ ಹಂತದ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅ.5ರಿಂದ ಎರಡನೇ ಹಂತದ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ.












Click it and Unblock the Notifications