ಸ್ವಚ್ಛ ಸರ್ವೇಕ್ಷಣ 2020: ಸ್ವಚ್ಛನಗರ ಇಂದೋರ್, ಸ್ವಚ್ಛ ರಾಜ್ಯ ಛತ್ತೀಸ್‌ಗಢ

ನವದೆಹಲಿ, ಆಗಸ್ಟ್ 20: ಸ್ವಚ್ಛ ಸರ್ವೇಕ್ಷಣ 2020ರ ಫಲಿತಾಂಶ ಹೊರಬಿದ್ದಿದೆ. ಇಂದೋರ್ ಭಾರತದ ಸ್ವಚ್ಛ ನಗರ ಎನ್ನುವ ಖ್ಯಾತಿಗೆ ಪಾತ್ರವಾದರೆ , ಛತ್ತೀಸ್‌ಗಢ ದೇಶದ ಸ್ವಚ್ಛ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಂದೋರ್ ನಾಲ್ಕನೇ ಬಾರಿ ಸ್ವಚ್ಛ ನಗರ ಪ್ರಶಸ್ತಿ ಪಡೆದುಕೊಳ್ಳುತ್ತಿದೆ, ಛತ್ತೀಸ್‌ಗಢ ಎರಡನೇ ಬಾರಿಗೆ ಸ್ವಚ್ಛ ರಾಜ್ಯ ಎನ್ನುವ ಪಟ್ಟ ಪಡೆದುಕೊಂಡಿದೆ.. ಈ ಕುರಿತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.

ಗುಜರಾತಿನ ಸೂರತ್ ಎರಡನೇ ಸ್ಥಾನ ಪಡೆದುಕೊಂಡರೆ ಮಹಾರಾಷ್ಟ್ರದ ನವಿ ಮುಂಬೈ ಮೂರನೇ ಸ್ಥಾನ ಗಳಿಸಿದೆ. ಒಟ್ಟ 129 ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ಬಾರಿ ಸಮೀಕ್ಷೆಯು 4242 ನಗರಗಳನ್ನು ಒಳಗೊಂಡಿತ್ತು.

Swachh Survekshan 2020 Results: Indore Once Again Retain Top Spot, Here Are The Highlights

ಸ್ವಚ್ಛ ಸರ್ವೇಕ್ಷಣದ ಪ್ರಮುಖಾಂಶಗಳು
-ಮಧ್ಯಪ್ರದೇಶದ ಇಂದೋರ್ ಸತತವಾಗಿ ನಾಲ್ಕನೇ ವರ್ಷವೂ ಸ್ವಚ್ಛ ನಗರ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.
-ಛತ್ತೀಸ್‌ಗಢ ದೇಶದ ಅತ್ಯಂತ ಸ್ವಚ್ಛ ರಾಜ್ಯ ಎನ್ನು ಖ್ಯಾತಿ ಪಡೆದಿದೆ.
-ಗುಜರಾತಿನ ಸೂರತ್ ಎರಡನೆಯ ಅತಿ ಸ್ವಚ್ಛ ನಗರ
-ಮಹಾರಾಷ್ಟ್ರದ ನವಿ ಮುಂಬೈ ಮೂರನೇ ಸ್ವಚ್ಛನಗರ
-ಅಹಮದಾಬಾದ್ ಭಾರತದ ಅತ್ಯಂತ ಸ್ವಚ್ಛ ಮೆಗಾ ಸಿಟಿ
-ಮೆಗಾ ಸಿಟಿ ವಿಭಾಗದಲ್ಲಿ ಬೆಂಗಳೂರು ಅತ್ಯುತ್ತಮ ಸ್ವಯಂ ಸುಸ್ಥಿರತೆ ಪ್ರಶಸ್ತಿಯನ್ನು ಗೆದ್ದಿದೆ.
-1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಕರದ್ ಸ್ವಚ್ಛ ನಗರವಾಗದೆ.
-ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ವಿಭಾಗದಲ್ಲಿ ಮಹಾರಾಷ್ಟ್ರದ ಸವದ್ ಎರಡನೇ ಸ್ಥಾನ ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+