ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಶಿಕಲಾ ಅಕ್ರಮ ಆಸ್ತಿಗಳಿಕೆ ಕೇಸ್, ವಿಚಾರಣೆಯಿಂದ ಹಿಂದೆ ಸರಿದ ಜಡ್ಜ್

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆ.2 : ಸುಪ್ರೀಂಕೋರ್ಟ್ ನ್ಯಾಯೂರ್ತಿಗಳು ಶಶಿಕಲಾ ನಟರಾಜನ್ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ಶಶಿಕಲಾ ಅರ್ಜಿ ಸಲ್ಲಿಸಿದ್ದರು.

Supreme Court judge recuses from hearing review in DA case filed by Sasikal

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಶಶಿಕಲಾ ನಟರಾಜನ್ ಅವರಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರಕರಣದಲ್ಲಿ ಅಪರಾಧಿಯಾಗಿರುವ ಶಶಿಕಲಾ ನಟರಾಜನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ತೀರ್ಪನ್ನು ಪುನರ್ ಪರಿಶೀಲಿಸಬೇಕು ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ಅಕ್ರಮ ಆಸ್ತಿಗಳಿಕೆ ಕೇಸ್, ಶಶಿಕಲಾ ವಾದವೇನು?

ಬುಧವಾರ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಮುಕುಲ್ ರೋಹಗ್ಟಿ ಅವರು ನ್ಯಾಯೂಮೂರ್ತಿ ಆರ್.ನಾರಿಮನ್ ಮುಂದೆ ವಾದ ಮಂಡನೆ ಮಾಡಿದರು. ಆರ್.ನಾರಿಮನ್ ತಂದೆ ಫಾಲಿ ಎಸ್.ನಾರಿಮನ್ ಈ ಪ್ರಕರಣದಲ್ಲಿ ಜಯಲಲಿತಾ ಪರವಾಗಿ ವಾದ ಮಾಡಲಿದ್ದಾರೆ. ಆದ್ದರಿಂದ, ನ್ಯಾಯಮೂರ್ತಿಗಳು ಅರ್ಜಿ ವಿಚಾರಣೆ ನಡೆಸುವುದು ಸಮ್ಮತವಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

2017ರ ಫೆಬ್ರವರಿಯಲ್ಲಿ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಶಶಿಕಲಾ ನಟರಾಜನ್ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. 61 ವರ್ಷದ ಶಶಿಕಲಾ ಅವರು ಮೇ ತಿಂಗಳಿನಲ್ಲಿ ಈ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಅರ್ಜಿ ಸಲ್ಲಿಸಿದ್ದರು.

ಸಾಮಾನ್ಯ ಕೈದಿಯಾದ ಶಶಿಕಲಾ!

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಅಪರಾಧಿಯಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಸಾವಪ್ಪಿದ್ದಾರೆ, ಅವರ ವಿರುದ್ಧದ ಪ್ರಕರಣದ ರದ್ದಾಗಿದೆ. ಅದೇ ಪ್ರಕರಣದಲ್ಲಿ ಅಪರಾಧಿಯಾಗಿರುವ ತಮಗೂ ಜೈಲು ಶಿಕ್ಷೆ ಅನ್ವಯವಾಗುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಿದ್ದರು.

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಶಶಿಕಲಾ, ಇಳವರಸಿ, ವಿ.ಸುಧಾಕರನ್ ಅಪರಾಧಿಗಳಾಗಿದ್ದು ಎಲ್ಲರೂ ಬೆಂಗಳೂರಿನ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

English summary
A Supreme Court judge has recused himself from hearing the review petition filed by Sasikala Natarajan in the disproportionate assets case. Sasikala's was convicted by top court in February this year and sentenced to four years in jail
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X