Get Updates
Get notified of breaking news, exclusive insights, and must-see stories!

Gujarat riots: ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮಧ್ಯಂತರ ಜಾಮೀನು ಜುಲೈ 19 ರವರೆಗೆ ವಿಸ್ತರಣೆ

ನವದೆಹಲಿ, ಜುಲೈ. 05: 2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ತಿರುಚಿದ ಆರೋಪದ ಹೊತ್ತಿರುವ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ನೀಡಿರುವ ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟ್ ಬುಧವಾರ ಮುಂದಿನ ವಿಚಾರಣೆ ಜುಲೈ 19 ರವರೆಗೆ ವಿಸ್ತರಿಸಿದೆ.

2002ರ ಗೋಧ್ರಾ ಗಲಭೆ ನಂತರದ ಪ್ರಕರಣಗಳಲ್ಲಿ ನಿರಪರಾಧಿಗಳನ್ನು ಬಂಧಿಸಲು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪ ಅವರ ಮೇಲಿದೆ. ಈ ಪ್ರಕರಣದಲ್ಲಿ ಶರಣಾಗುವಂತೆ ಗುಜರಾತ್ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಹೋರಾಟಗಾರ್ತಿ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಆಕೆಯ ಸಾಮಾನ್ಯ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.

Supreme Court extended interim bail

ಇದಕ್ಕೂ ಮುನ್ನ ಜುಲೈ 1 ರಂದು ಸುಪ್ರೀಂ ಕೋರ್ಟ್ ಆಕೆಯನ್ನು ಬಂಧನದಿಂದ ರಕ್ಷಿಸಿತ್ತು ಮತ್ತು ಸದ್ಯಕ್ಕೆ ಹೈಕೋರ್ಟ್ ಆದೇಶವನ್ನು ತಡೆಹಿಡಿದಿದೆ. ಶನಿವಾರ ತಡರಾತ್ರಿ ಈ ಪ್ರಕರಣದ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠವು, ಹೈಕೋರ್ಟ್ ಆದೇಶದ ವಿರುದ್ಧ ಪ್ರಶ್ನಿಸಲು ಕಾರ್ಯಕರ್ತನಿಗೆ ಏಕೆ ಸಮಯ ನಿರಾಕರಿಸಲಾಗಿದೆ ಎಂದು ಪ್ರಶ್ನಿಸಿತ್ತು.

"ಮಧ್ಯಂತರ ಜಾಮೀನು ಮಂಜೂರಾತಿಗಾಗಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಈ ನ್ಯಾಯಾಲಯವು ಸೆಪ್ಟೆಂಬರ್ 2, 2022 ರ ಆದೇಶದ ಪ್ರಕಾರ ಕೆಲವು ಷರತ್ತುಗಳ ಮೇಲೆ ಜಾಮೀನು ನೀಡಿದೆ. ಸೆಕ್ಷನ್ 437 CrPC ಅಡಿಯಲ್ಲಿ ಅರ್ಜಿದಾರರು ಮಹಿಳೆ ಮತ್ತು ವಿಶೇಷ ರಕ್ಷಣೆಗೆ ಅರ್ಹರು" ಎಂದು ಸುಪ್ರೀಂ ಕೋರ್ಟ್ ಪೀಠವು ಹೇಳಿದೆ.

Supreme Court extended interim bail

"ಈ ಸತ್ಯವನ್ನು ಪರಿಗಣಿಸಿ, ಏಕ ನ್ಯಾಯಾಧೀಶರು ಕನಿಷ್ಟ ಕೆಲವು ರಕ್ಷಣೆಯನ್ನು ನೀಡಬೇಕೆಂಬುದನ್ನ ನಾವು ತಿಳಿದಿದ್ದೇವೆ, ಇದರಿಂದಾಗಿ ಈ ನ್ಯಾಯಾಲಯದಲ್ಲಿ ಏಕ ನ್ಯಾಯಾಧೀಶರು ನೀಡಿದ ಆದೇಶವನ್ನು ಪ್ರಶ್ನಿಸಲು ಅರ್ಜಿದಾರರಿಗೆ ಸಾಕಷ್ಟು ಸಮಯವಿದೆ. ಈ ವಿಷಯದ ದೃಷ್ಟಿಯಿಂದ, ವಿಷಯದ ಅರ್ಹತೆಯ ಮೇಲೆ ಏನನ್ನೂ ಪರಿಗಣಿಸದೆ, ಏಕ ನ್ಯಾಯಾಧೀಶರು ಕೆಲವು ರಕ್ಷಣೆಯನ್ನು ನೀಡುವಲ್ಲಿ ಸರಿಯಾಗಿ ನಡೆದುಕೊಂಡಿಲ್ಲ. ನಾವು ಒಂದು ವಾರದ ಅವಧಿಗೆ ಉಚ್ಚ ನ್ಯಾಯಾಲಯವು ಹೊರಡಿಸಿದ ನಿರ್ಭಂದಿತ ಆದೇಶಕ್ಕೆ ತಡೆ ನೀಡುತ್ತೇವೆ" ಎಂದು ತಿಳಿಸಿದೆ.

ಗೋಧ್ರಾ ನಂತರದ ಗಲಭೆ ಪ್ರಕರಣಗಳಲ್ಲಿ "ಮುಗ್ಧರನ್ನು" ಬಂಧಿಸಲು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದಲ್ಲಿ ಅಹಮದಾಬಾದ್ ಕ್ರೈಂ ಬ್ರಾಂಚ್ ದಾಖಲಿಸಿದ ಅಪರಾಧದಲ್ಲಿ ತೀಸ್ತಾ ಸೆಟಲ್ವಾಡ್ ಅವರನ್ನು ಕಳೆದ ವರ್ಷ ಜೂನ್‌ನಲ್ಲಿ ಬಂದಿದಲಾಗಿತ್ತು. ಗುಜರಾತ್ ಮಾಜಿ ಪೊಲೀಸ್ ಮುಖ್ಯಸ್ಥ ಆರ್ ಬಿ ಶ್ರೀಕುಮಾರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಬಂಧಿಸಲಾಗಿತ್ತು. ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದ ನಂತರ ಹೋರಾಟಗಾರ್ತಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು.

ಮೇಲ್ನೋಟಕ್ಕೆ ತೀಸ್ತಾ ಸೆಟಲ್ವಾಡ್ ತನ್ನ ನಿಕಟವರ್ತಿಗಳನ್ನು ಮತ್ತು ಗಲಭೆ ಸಂತ್ರಸ್ತರನ್ನು ಬಳಸಿಕೊಂಡು ಸುಪ್ರಿಂಕೋರ್ಟ್‌ಗೆ ಸುಳ್ಳು ಅಫಿಡವಿಟ್‌ಗಳನ್ನು ಸಲ್ಲಿಸಿದ್ದು, ತನಿಖಾ ಸಂಸ್ಥೆಯನ್ನು ಅವಮಾನಿಸಲು ಮತ್ತು ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಕಳಂಕ ತರುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ ಎಂದು ತನ್ನ ತೀರ್ಪಿನಲ್ಲಿ ಹೈಕೋರ್ಟ್ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+