ಬರಡು ಭೂಮಿಯನ್ನ 20 ಕೋಟಿ ರೂ. ಮೌಲ್ಯದ ಹಸಿರು ಸಾಮ್ರಾಜ್ಯವಾಗಿಸಿದ ಕೆಎಲ್ ರಾಹುಲ್ ಮಾವ ಸುನೀಲ್ ಶೆಟ್ಟಿ

Suniel Shetty: ಬರಡು ಭೂಮಿಯಲ್ಲಿ ಏನು ಮಾಡಲಿಕ್ಕೆ ಆಗುವುದಿಲ್ಲ ಎಂಬ ಕಾರಣವನ್ನು ಇಟ್ಟುಕೊಂಡು ಯಾವ ಪ್ರಯತ್ನವನ್ನೂ ಸಹ ಮಾಡದಿರುವವರ ಸಂಖ್ಯೆ ತುಂಬಾ ಇದೆ. ಈ ನಡುವೆಯೇ ಬಾಲಿವುಡ್‌ ಖ್ಯಾನ ನಟ ಹಾಗೂ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್ ಕನ್ನಡಿಗ ಕೆಎಲ್ ರಾಹುಲ್ ಅವರ ಮಾವ ಸುನೀಲ್ ಶೆಟ್ಟಿ ಅವರು ಬಂಜರು ಭೂಮಿಯಲ್ಲೇ 400ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ಗಮನ ಸೆಳೆದಿದ್ದಾರೆ.

ಬಾಲಿವುಡ್‌ನ ಖ್ಯಾತ ನಟ ಸುನೀಲ್ ಶೆಟ್ಟಿ ತಮ್ಮ ಅಭಿನಯದಿಂದಷ್ಟೇ ಅಲ್ಲದೆ, ಪ್ರಕೃತಿ ಪ್ರೇಮದಿಂದಲೂ ಗಮನ ಸೆಳೆದಿದ್ದಾರೆ. ಮಹಾರಾಷ್ಟ್ರದ ಖಂಡಾಲಾದಲ್ಲಿರುವ ತಮ್ಮ ಬರಡು ಭೂಮಿಯನ್ನು ಸುಮಾರು 20 ಕೋಟಿ ರೂಪಾಯಿ ಮೌಲ್ಯದ ಭವ್ಯ ಹಾಗೂ ಸುಂದರವಾದ ಫಾರ್ಮ್‌ಹೌಸ್ ಆಗಿ ಪರಿವರ್ತಿಸುವ ಮೂಲಕ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Suniel Shetty How Turned Barren Land Into a Green Farmhouse Key message By KL Rahul father-in-law

400ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ ಸುನೀಲ್ ಶೆಟ್ಟಿ

ಸುನೀಲ್ ಶೆಟ್ಟಿ ಅವರು ಸಂಪೂರ್ಣವಾಗಿ ಬರಡಾಗಿದ್ದ ಜಾಗದಲ್ಲಿ 400ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಬೆಳೆಸುವ ಮೂಲಕ ಆ ಜಾಗಕ್ಕೆ ಮರುಜೀವ ನೀಡಿದ್ದಾರೆ. ಈ ಮೂಲಕ ಅವರು ಬಂಜರು ಭೂಮಿಯಲ್ಲಿ ಏನು ಬೆಳೆಯುವುದಿಲ್ಲ ಎಂದು ಯಾವ ಪ್ರಯತ್ನವನ್ನೂ ಮಾಡದೆ ಹಿಂದೆ ಸರಿಯುವವರಿಗೆ ಮಾದರಿಯಾಗಿದ್ದಾರೆ ಎಂದು ಹೇಳಬಹುದು.

ಸುನೀಲ್ ಶೆಟ್ಟಿ ಡ್ರೀಮ್ ಹೌಸ್‌ನ ಕಥೆ

ಸುನೀಲ್ ಶೆಟ್ಟಿ ಅವರು ಖಂಡಾಲಾದಲ್ಲಿ ಜಾಗ ಖರೀದಿಸಿದಾಗ ಅದು ಯಾವುದೇ ಗಿಡಗಳಿಲ್ಲದ, ಬಂಡೆಗಳಿಂದ ಕೂಡಿದ ಬರಡು ಭೂಮಿಯಾಗಿತ್ತು. ಆದರೆ ಪ್ರಕೃತಿಯ ಮಡಿಲಲ್ಲಿ ವಿಶಾಲವಾದ ಮನೆ ನಿರ್ಮಿಸಬೇಕೆಂಬ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಅವರು ತಕ್ಷಣವೇ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಕಾಲಕ್ರಮೇಣ 400ಕ್ಕೂ ಹೆಚ್ಚು ವಿಭಿನ್ನ ತಳಿಯ ಗಿಡಗಳನ್ನು ನೆಟ್ಟು, ಇಂದು ಅದನ್ನು ಹಸಿರು ವಾತಾವರಣದಿಂದ ಕೂಡಿದ ಭವ್ಯವಾದ ತೋಟದ ಮನೆಯಾಗಿ ಬದಲಾಯಿಸಿದ್ದಾರೆ.

ತೋಟಗಾರಿಕೆ ಆರಂಭಿಸುವವರಿಗೆ ಮಹತ್ವದ ಸಲಹೆಗಳು

ಗಿಡಗಳನ್ನು ಬೆಳೆಸಲು ಯಾವುದೇ ಪ್ರತ್ಯೇಕ ತರಬೇತಿಯ ಅಗತ್ಯವಿಲ್ಲ, ಬದಲಿಗೆ ಪ್ರಕೃತಿಯ ಮೇಲಿನ ಕಾಳಜಿ ಮತ್ತು ಸರಿಯಾದ ಆರೈಕೆ ಮುಖ್ಯ ಎಂದು ಸುನೀಲ್ ಶೆಟ್ಟಿ ತಿಳಿಸಿದ್ದಾರೆ. ತೋಟಗಾರಿಕೆಗೆ ಕಾಲಿಡಲು ಬಯಸುವವರಿಗಾಗಿ ಅವರು ಕೆಲವು ಪ್ರಮುಖ ಸಲಹೆಗಳನ್ನು ಕೂಡ ನೀಡಿದ್ದಾರೆ.

* ಸರಿಯಾದ ಸಸ್ಯಗಳ ಆಯ್ಕೆ: ಆರಂಭದಲ್ಲೇ ನಿರ್ವಹಣೆ ಮಾಡಲು ಕಷ್ಟವಾಗುವ ಗಿಡಗಳನ್ನು ಆರಿಸಿಕೊಳ್ಳುವ ಬದಲು, ಸ್ಥಳೀಯ ಹವಾಮಾನಕ್ಕೆ ಬೇಗ ಒಗ್ಗಿಕೊಳ್ಳುವ ಮತ್ತು ಕಡಿಮೆ ಆರೈಕೆ ಬೇಡುವ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

* ಮಣ್ಣು ಮತ್ತು ಗೊಬ್ಬರದ ಪ್ರಾಮುಖ್ಯತೆ: ಗಿಡಗಳ ಆರೋಗ್ಯಕರ ಬೆಳವಣಿಗೆಗೆ ಮಣ್ಣಿನ ಗುಣಮಟ್ಟ ಅತ್ಯಂತ ಮುಖ್ಯ. ನೈಸರ್ಗಿಕ ಗೊಬ್ಬರ ಹಾಗೂ ಕಾಂಪೋಸ್ಟ್ ಬಳಕೆಯಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದು.

* ಸರಿಯಾಗಿ ನೀರುಣಿಸಬೇಕು: ಅತಿಯಾಗಿ ನೀರು ಹಾಕುವುದು ಗಿಡಗಳ ಬೇರು ಕೊಳೆಯಲು ಕಾರಣವಾಗಬಹುದು. ಮಣ್ಣಿನ ತೇವಾಂಶವನ್ನು ಪರಿಶೀಲಿಸಿ ಅಗತ್ಯಕ್ಕೆ ತಕ್ಕಂತೆ ಮಾತ್ರ ನೀರು ಹಾಕಬೇಕು.

* ಪ್ರತಿಯೊಂದು ಗಿಡಕ್ಕೂ ಸೂರ್ಯನ ಬೆಳಕಿನ ಅಗತ್ಯ ಬೇರೆ ಬೇರೆಯಾಗಿರುತ್ತದೆ. ಸೂರ್ಯನ ಬೆಳಕು ಸರಿಯಾಗಿ ಬೀಳುವ ಜಾಗದಲ್ಲಿ ಗಿಡಗಳನ್ನು ಇಡುವುದು ಅತ್ಯಗತ್ಯ.

* ಗಿಡಗಳನ್ನು ಬೆಳೆಸುವುದು ಒಂದು ತಾಳ್ಮೆಯ ಕೆಲಸ. ದಿನವೂ ಸ್ವಲ್ಪ ಸಮಯವನ್ನು ಅವುಗಳ ಆರೈಕೆಗೆ ಮೀಸಲಿಟ್ಟರೆ, ಹಸಿರು ಪರಿಸರ ನಮಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ.

ಖಂಡಾಲಾದಲ್ಲಿರುವ ತಮ್ಮ ಸುಂದರ ಮನೆಯ ಮೂಲಕ ಪ್ರಕೃತಿ ಸಂರಕ್ಷಣೆಯ ಸಂದೇಶ ನೀಡಿರುವ ಸುನೀಲ್ ಶೆಟ್ಟಿ ಅವರು, ಪ್ರತಿಯೊಬ್ಬರೂ ತಮ್ಮ ಮನೆಗಳ ಸುತ್ತಮುತ್ತ ಅಥವಾ ಬಾಲ್ಕನಿಯಲ್ಲಿ ಸಣ್ಣ ಪ್ರಮಾಣದಲ್ಲಾದರೂ ಗಿಡಗಳನ್ನು ಬೆಳೆಸಿ ಪರಿಸರಕ್ಕೆ ಕೊಡುಗೆ ನೀಡಬೇಕೆಂದು ಮಹತ್ವದ ಕರೆ ನೀಡಿದ್ದಾರೆ. ಒಟ್ಟಿನಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಮನಸಿದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+