ವಿದೇಶಾಂಗ ಕಾರ್ಯದರ್ಶಿ: ಸುಜಾತಾ ವಜಾ, ಜೈ ಶಂಕರ್ ಅಧಿಕಾರಕ್ಕೆ
ನವದೆಹಲಿ, ಜ.28: ಅಮೆರಿಕ ಹಾಗೂ ಭಾರತ ನಡುವಿನ ಒಪ್ಪಂದಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕೆಲ ದಿನಗಳಲ್ಲೇ ಸುಜಾತಾ ಸಿಂಗ್ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದೆ. ಅವರ ಸ್ಥಾನಕ್ಕೆ ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಎಸ್. ಜೈಶಂಕರ್ ನೇಮಕಗೊಂಡಿದ್ದು, ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ.
ಗಣರಾಜ್ಯೋತ್ಸವ ದಿನಕ್ಕೆ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಬಂದು ಹೋದ ಮೇಲೆ ಈ ಎಲ್ಲಾ ಬೆಳವಣಿಗೆಗಳು ನಡೆದಿವೆ. ಒಬಾಮಾ ಅವರನ್ನು ಅತಿಥಿಯಾಗಿ ಕರೆಸುವಲ್ಲಿ ಜೈಶಂಕರ್ ಅವರ ಪಾತ್ರವೂ ಇತ್ತು ಎಂಬುದು ಉಲ್ಲೇಖಾರ್ಹ. ಆದರೆ, ಯುಪಿಎ ಕಾಲದಲ್ಲಿ ನೇಮಕಗೊಂಡಿದ್ದ ದಕ್ಷ ಅಧಿಕಾರಿ ಸುಜಾತಾ ಸಿಂಗ್ ಅವರು ವಿದೇಶಾಂಗ ಕಾರ್ಯದರ್ಶಿಯಾಗಿ ಇನ್ನು ಆರು ತಿಂಗಳು ಅಧಿಕಾರದಲ್ಲಿ ಇರಬೇಕಿತ್ತು. ಎಎಫ್ ಎಸ್ ಜೈಶಂಕರ್ ಅವರ ಅವಧಿ ಮುಂದಿನ ತಿಂಗಳಿಗೆ ಕೊನೆಗೊಳ್ಳುತ್ತದೆ. [ಮಂಡ್ಯ ಮೂಲದ ವಿವೇಕ್, ಅಮೆರಿಕದ ಪ್ರಧಾನ ಸರ್ಜನ್]

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ವಿದೇಶಾಂಗ ಕಾರ್ಯದರ್ಶಿಯಾಗಿ ಸುಜಾತಾ ಸಿಂಗ್ ಅವರ ಕಾರ್ಯ ವೈಖರಿ ಬಗ್ಗೆ ಅಸಮಾಧಾನವಿತ್ತು ಎಂಬ ಸುದ್ದಿಯೂ ಇದೆ. ಅದರೆ, ಮೋದಿ ಅವರ ಏಷ್ಯಾ ಪ್ರವಾಸದ ವೇಳೆ ಸುಜಾತಾ ಸಿಂಗ್ ಕಾರ್ಯ ವೈಖರಿ ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿತ್ತು.
ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಪ್ರತಿಕ್ರಿಯೆ ಹೀಗಿದೆ:
Is sacking of Foreign Secretary late retribution for her stand on Devyani Khorbode affair? Removal after a Presidential visit"coincidental"?
— Manish Tewari (@ManishTewari) January 29, 2015 ಜೂ. 31ಕ್ಕೆ ನಿವೃತ್ತಿ ಹೊಂದ ಬೇಕಿದ್ದ ಜೈಶಂಕರ್ ಅವರು ಬಂಪರ್ ಆಫರ್ ಸಿಕ್ಕಿದ ಬೆನ್ನಲ್ಲೇ ಅಧಿಕಾರ ವಹಿಸಿಕೊಂಡಿದ್ದಾರೆ. ಅಮೆರಿಕ ಹಾಗೂ ಭಾರತ ನಡುವಿನ ಅನೇಕ ಒಪ್ಪಂದಗಳಿಗೆ ಸಹಿ ಬೀಳಲು ಜೈಶಂಕರ್ ಅವರು ಕೂಡಾ ಕಾರಣ ಎಂಬ ಮಾತುಗಳು ಕೇಳಿ ಬಂದಿದೆ. ಮೋದಿ ಅವರಿಂದ ಮೆಚ್ಚುಗೆ ಸಿಕ್ಕಿದ ಕೂಡಲೇ ಅವರಿಗೆ ವಿದೇಶಾಂಗ ಕಾರ್ಯದರ್ಶಿ ಸ್ಥಾನ ಸಿಕ್ಕಿದೆ. [ಭಾರತ-ಅಮೆರಿಕದ ನಡುವೆ 'ಹಾಟ್ ಲೈನ್']
ಅಮೆರಿಕದ ಭಾರತೀಯ ರಾಯಭಾರಿಯಾಗಿ ಅನಿವಾಸಿ ಭಾರತೀಯ ರಿಚರ್ಡ್ ರಾಹುಲ್ ವರ್ಮ ಅವರು ನೇಮಕಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.[ಯುಎಸ್ ರಾಯಭಾರಿ ರಾಹುಲ್ ವರ್ಮ]












Click it and Unblock the Notifications