ರಾಜ್ಯಸಭೆ ಸದಸ್ಯೆಯಾಗಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಸುಧಾಮೂರ್ತಿ: ಇಲ್ಲಿದೆ ವಿಡಿಯೋ

ನವದೆಹಲಿ, ಮಾರ್ಚ್‌ 14: ಸಮಾಜ ಸೇವಕಿ, ಇನ್ಫೋಸಿಸ್ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಅವರು ಇಂದು ಗುರುವಾರ ದೆಹಲಿಯಲ್ಲಿ ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸುಧಾ ಮೂರ್ತಿ ಅವರು ಕನ್ನಡದಲ್ಲೇ ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು.

ಸುಧಾ ಮೂರ್ತಿ ಅವರು ಇಂದು ರಾಜ್ಯಸಭಾ ಸಂಸದರಾಗಿ ತಮ್ಮ ಪತಿ ಎನ್.ಆ‌ರ್.ನಾರಾಯಣ ಮೂರ್ತಿ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರು ಸಂಸತ್ ಭವನದ ತಮ್ಮ ಕಚೇರಿಯಲ್ಲಿ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಸಭಾನಾಯಕ ಪಿಯೂಷ್ ಗೋಯಲ್ ಕೂಡ ಉಪಸ್ಥಿತರಿದ್ದರು.

Sudha Murthy takes oath as Rajya Sabha MP

ಇನ್ಫೋಸಿಸ್ ಫೌಂಡೇಶನ್ ನ ಮಾಜಿ ಅಧ್ಯಕ್ಷೆ ಮತ್ತು ಹಲವಾರು ಪುಸ್ತಕಗಳ ಲೇಖಕರಾಗಿರುವ 73 ವರ್ಷದ ಶ್ರೀಮತಿ ಮೂರ್ತಿ ಅವರನ್ನು ಕಳೆದ ಶುಕ್ರವಾರ ಅಂತರರಾಷ್ಟ್ರೀಯ ಮಹಿಳಾ ದಿನದಂದು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿತ್ತು. ಇಂದು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಗಮನ ಸೆಳೆದಿದೆ. ಸುಧಾ ಮೂರ್ತಿ, ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆಯಾಗಿದ್ದು ಹಲವು ಪುಸ್ತಕಗಳ ಲೇಖಕಿಯಾಗಿ, ವಿಶೇಷವಾಗಿ ಮಕ್ಕಳ ಪುಸ್ತಕ ಬರೆದು ಜನಪ್ರಿಯರಾಗಿದ್ದಾರೆ. ಇನ್ಫೋಸಿಸ್ ಫೌಂಡೇಶನ್ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದು, ಕೊರೋನಾ ಹಾಗೂ ಪ್ರವಾಹಸ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ನೆರವಾಗಿದ್ದಾರೆ.

ಮೂಲತಃ ಹುಬ್ಬಳ್ಳಿ ಕಡೆಯವರಾದ ಸುಧಾಮೂರ್ತಿಯವರಿಗೆ ಕನ್ನಡ ಭಾಷೆಯೆಂದರೆ ವಿಶೇಷ ಒಲವು ಹೊಂದಿದ್ದಾರೆ. ಸುಧಾಮೂರ್ತಿ ಅವರು, ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಹೆಸರುವಾಸಿಯಾಗಿದ್ದಾರೆ. ಅಲ್ಲದೇ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ, 2006 ರಲ್ಲಿ ಪದ್ಮಶ್ರೀ ಮತ್ತು 2023 ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+