'ಫೈಸರ್ ಕೊರೊನಾ ವೈರಸ್ ಲಸಿಕೆ ಸಂಗ್ರಹ ಭಾರತದಲ್ಲಿ ಕಷ್ಟ'

ನವದೆಹಲಿ, ನವೆಂಬರ್ 11: ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲು ವಿವಿಧ ದೇಶಗಳು ಅಭಿವೃದ್ಧಿಪಡಿಸಿರುವ ಹಲವು ಲಸಿಕೆಗಳು ತಯಾರಾಗುತ್ತಿವೆ. ಅವುಗಳ ನಡುವೆ ಹೊಸ ಲಸಿಕೆ 'ಫೈಸರ್' ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದ್ದು, ಎಲ್ಲರ ಗಮನ ಸೆಳೆದಿದೆ. ಆದರೆ ಭಾರತದಲ್ಲಿ ಆ ಲಸಿಕೆ ಬಗ್ಗೆ ಹೆಚ್ಚು ನಿರೀಕ್ಷೆ ಹೊಂದುವುದು ಬೇಡ ಎಂದು ಪರಿಣತರು ಹೇಳಿದ್ದಾರೆ.

ಫೈಸರ್ ಕೊರೊನಾ ವೈರಸ್ ಲಸಿಕೆಯನ್ನು -70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಬೇಕಾಗುತ್ತದೆ. ಭಾರತದಲ್ಲಿ ಇದರ ಸಂಗ್ರಹ ಮತ್ತು ಸಾಗಾಟಕ್ಕೆ ವ್ಯವಸ್ಥೆ ಮಾಡುವುದು ಬಹಳ ಕಷ್ಟಕರ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.

'ಫೈಸರ್ ಲಸಿಕೆಯನ್ನು -70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇರಿಸಬೇಕಾಗುತ್ತದೆ. ಇದು ಭಾರತದಂತಹ ಅಭಿವೃದ್ಧಿಶೀಲ ದೇಶಗಳಿಗೆ ಸವಾಲಾಗಲಿದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶೀತಲೀಕರಣ ಸರಪಣಿಯನ್ನು ಕಾಪಾಡುವುದು ಬಹಳ ಕಷ್ಟಕರ. ಒಟ್ಟಾರೆಯಾಗಿ ಮೂರನೇ ಹಂತದ ಪ್ರಯೋಗದಲ್ಲಿರುವ ಲಸಿಕೆ ಸಂಶೋಧನೆಗೆ ಇದು ಉತ್ತೇಜನಕಾರಿ ಸುದ್ದಿಯಂತೂ ಹೌದು' ಎಂದು ಅವರು ತಿಳಿಸಿದ್ದಾರೆ.

Storing Pfizer Coronavirus Vaccine In India Is Difficult: AIIMS Director Randeep Guleria

ಅಮೆರಿಕ ಮೂಲದ ಫೈಸರ್ ಇಂಕ್ ಮತ್ತು ಬಯೋನ್ ಟೆಕ್ ಕಂಪೆನಿಗಳು ತಮ್ಮ ಕೊರೊನಾ ವೈರಸ್ ಲಸಿಕೆಯು ಶೇ 90ರಷ್ಟು ಪರಿಣಾಮ ಪ್ರದರ್ಶಿಸಿವೆ ಎಂದು ತಿಳಿಸಿದ್ದವು. ಬೃಹತ್ ಪ್ರಮಾಣದ ಪ್ರಯೋಗದಲ್ಲಿ ಯಶಸ್ವಿಯಾಗಿರುವುದಾಗಿ ಫೈಸರ್ ಹೇಳಿತ್ತು.

ಈ ಲಸಿಕೆಯ ದರ ಎಷ್ಟಾಗಬಹುದು ಎಂದು ಫೈಸರ್ ಇನ್ನೂ ನಿರ್ಧರಿಸಿಲ್ಲ. ಆದರೆ ಇದು ಆರ್‌ಎನ್‌ಎ ಲಸಿಕೆಯಾಗಿರುವುದರಿಂದ ಭಾರತಕ್ಕೆ ಈ ಲಸಿಕೆಗಳು ಭಾರಿ ದುಬಾರಿಯಾಗಬಹುದು ಎಂದು ವಿಜ್ಞಾನಿ ಡಾ. ಗಗನ್‌ದೀಪ್ ಕಾಂಗ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+