ಟೊಮೆಟೊ ತಿನ್ನಬೇಡಿ, ಮನೆಯಲ್ಲಿ ಬೆಳೆಯಿರಿ ಎಂದಿದ್ದೇಕೆ ಯುಪಿ ಸಚಿವೆ!
ಲಕ್ನೋ, ಜುಲೈ. 23: ಈ ಸಮಯದಲ್ಲಿ ಟೊಮೆಟೊ ಬೆಲೆ ಏರಿಕೆ ಹೊಸದೇನಲ್ಲ ಮತ್ತು ಪ್ರತಿ ಸಮಸ್ಯೆಗೆ ಪರಿಹಾರವಿದೆ ಎಂದು ಉತ್ತರ ಪ್ರದೇಶದ ಸಚಿವೆ ಪ್ರತಿಭಾ ಶುಕ್ಲಾ ಅವರ ಹೇಳಿಕೆ ನೀಡಿದ್ದಾರೆ. ಜನರು ಈಗ ಟೊಮೆಟೊ ತಿನ್ನಬೇಡಿ ಎಂದು ಸಚಿವರು ಜನರಿಗೆ ಸಲಹೇ ನೀಡಿದ್ದು, ಈ ಹೇಳಿಕೆ ವೈರಲ್ ಆಗಿದೆ.
"ನೀವು ಟೊಮೆಟೊ ತಿನ್ನುವುದನ್ನು ನಿಲ್ಲಿಸಿದರೆ, ಬೆಲೆಗಳು ಅನಿವಾರ್ಯವಾಗಿ ಇಳಿಕೆಯಾಗುತ್ತವೆ. ಹೀಗಾಗಿ ಜನರು ಮನೆಯಲ್ಲಿ ಟೊಮ್ಯಾಟೊ ಬೆಳೆಯಬೇಕು. ನೀವು ಟೊಮೆಟೊ ಬದಲಿಗೆ ನಿಂಬೆ ಹಣ್ಣು ತಿನ್ನಬಹುದು. ಯಾರೂ ಟೊಮೆಟೊ ತಿನ್ನದಿದ್ದರೆ, ಬೆಲೆ ತಾನಾಗಿಯೇ ಕಡಿಮೆಯಾಗುತ್ತದೆ" ಎಂದು ಸಚಿವರು ಶನಿವಾರ ಹೇಳಿದ್ದಾರೆ. ಟೊಮೆಟೊ ಬೆಲೆ ದೇಶಾದ್ಯಂತ ಇನ್ನೂ ಒಂದು ಕೆಜಿಗೆ 120 ರೂಪಾಯಿಗಿಂತ ಹೆಚ್ಚುತ್ತಲೇ ಇದೆ.

ಯುಪಿ ಸಚಿವರ ಹೇಳಿಕೆಗೆ ಕಾಂಗ್ರೆಸ್ ತರಾಟೆ ತೆಗೆದುಕೊಂಡಿದೆ. ಏಕೆಂದರೆ ಏರುತ್ತಿರುವ ಬೆಲೆಗಳನ್ನು ಇಳಿಸಲು ಯಾವುದೇ ಮಾರ್ಗವಿಲ್ಲ ಎಂಬ ಹೇಳಿಕೆಯನ್ನು ಸರ್ಕಾರ 'ಸ್ವೀಕಾರ' ಎಂದು ವ್ಯಾಖ್ಯಾನಿಸಿದೆ. "ಜೋ ಭೀ ಚೀಜ್ ಮೆಹೆಂಗಿ ಹೈ ಉಸ್ ಖಾನಾ ಚೋಡ್ ದೀಜಿಯೇ ಎಂಬ ಈ ಸಲಹೆ ಉತ್ತರ ಪ್ರದೇಶದ ಸಚಿವರಿಂದ ಬರುತ್ತಿದೆ. ಇಂತಹ ಅಸಡ್ಡೆಯ ಮಾತುಗಳಿಂದ ಓಟದಲ್ಲಿ ನೀವು ನಿಮ್ಮ ಸಹೋದ್ಯೋಗಿಗಳನ್ನು ಸೋಲಿಸಿದ್ದೀರಿ, ಅಭಿನಂದನೆಗಳು" ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನಾಥೆ ಹೇಳಿದ್ದಾರೆ.
बाबा के सरकार की मंत्री प्रतिभा शुक्ला कह रही हैं, 'जो चीजें महंगी हैं। उन्हें खाना छोड़ दीजिये।'
— UP Congress (@INCUttarPradesh) July 23, 2023
यानी सरकार का फ़रमान आ गया कि 'भूखों मरना है तो मरिये! मगर, महंगाई से समझौता नहीं किया जा सकता।' pic.twitter.com/u1pvEh8Vru
ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಿಂದ ಹೊಸ ಬೆಳೆಗಳ ಆಗಮನದಿಂದ ಟೊಮೆಟೊ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ರಾಜ್ಯಸಭೆಗೆ ತಿಳಿಸಿದ್ದಾರೆ.
ಈರುಳ್ಳಿ ಬೆಲೆ ಮತ್ತು ನಿರ್ಮಲಾ ಸೀತಾರಾಮನ್
2019 ರಲ್ಲಿ, ಲೋಕಸಭೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಬಗ್ಗೆ ನಿರ್ಮಲಾ ಸೀತಾರಾಮನ್ ಅವರನ್ನು ಪ್ರಶ್ನಿಸಿದಾಗ, ಸಚಿವರು ಈರುಳ್ಳಿಯನ್ನು ನಾವು ಬಳಸದ ಕಾರಣ ನಮಗೆ ಗೊತ್ತಾಗುವುದಿಲ್ಲ ಎಂದು ಹೇಳಿದ್ದರು. ಕಳೆದೆರಡು ವಾರಗಳಿಂದ ಟೊಮೆಟೊ ಬೆಲೆ ಗಗನಕ್ಕೇರುತ್ತಿದ್ದಂತೆ ನಿರ್ಮಲಾ ಸೀತಾರಾಮನ್ ಅವರ ಹಳೆಯ ಹೇಳಿಕೆಯನ್ನು ನೆನಪಿಸಿಕೊಂಡ ವಿಪಕ್ಷ ನಾಯಕರು, ಸಚಿವರು ಟೊಮೆಟೊವನ್ನೂ ತಿನ್ನುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಟೊಮೆಟೊ ಬೆಲೆ ಏರಿಕೆ, ಕಳ್ಳತನದ ಘಟನೆಗಳು
ಟೊಮೇಟೊ ಬೆಲೆ ಏರಿಕೆಯ ನಡುವೆಯೇ ದೇಶಾದ್ಯಂತ ಹಲವಾರು ಕಡೆಗಳಲ್ಲಿ ಟೊಮೆಟೊ ಲೂಟಿ, ಕಳ್ಳತನ, ಅಪಹರಣದ ಘಟನೆಗಳು ನಡೆದಿವೆ. ಬೆಂಗಳೂರಿನಲ್ಲಿ 2.5 ಟನ್ ಟೊಮೆಟೊ ಟ್ರಕ್ ಅಪಹರಿಸಿದ ತಮಿಳುನಾಡಿನ ದಂಪತಿಯನ್ನು ಬಂಧಿಸಲಾಗಿದೆ. ಪುಣೆಯ ರೈತರೊಬ್ಬರು ತಮ್ಮ 400 ಕೆ.ಜಿ ತೂಕದ ಟೊಮೆಟೋ ಕಳ್ಳತನದ ನಂತರ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications