ಪಾರ್ಲಿಮೆಂಟ್ ಕ್ಯಾಂಟೀನ್ ಊಟದಲ್ಲಿ ಸಿಕ್ತು ಜೇಡ!
ನವದೆಹಲಿ, ಜುಲೈ 19: ಹೊಟೇಲ್ ನಲ್ಲಿ ಊಟಮಾಡುವಾಗ ಊಟದಲ್ಲಿ ಕೂದಲೋ, ಜಿರಲೆ ಮರಿಯೋ ಸಿಕ್ಕಿದ್ದರ ಬಗ್ಗೆ ಕೇಳಿದ್ದೇವೆ. ಕೆಲವೊಮ್ಮೆ ನಮಗೂ ಅಂಥ ಅನುಭವವಾಗಿರಬಹುದು.
ಆದರೆ ದೇಶದ ಶಕ್ತಿ ಕೇಂದ್ರ ಪಾರ್ಲಿಮೆಂಟಿನ ಕ್ಯಾಂಟಿನಿನಲ್ಲಿ ಊಟ ಮಾಡುತ್ತಿದ್ದ ಲೋಕಸಭೆಯ ಹಿರಿಯ ಅಧಿಕಾರಿಯೊಬ್ಬರಿಗೆ ಊಟದಲ್ಲಿ ಜೇಡ ಸಿಕ್ಕಿದೆ!

ಜುಲೈ 18, ಮಂಗಳವಾರದಂದು ಮಧ್ಯಾಹ್ನ ಪೊಂಗಲ್ ಮತ್ತು ಮೊಸರಾನ್ನ ಊಟ ಮಾಡುತ್ತಿದ್ದ ಅವರಿಗೆ ಕೆಲವು ತುತ್ತು ತಿನ್ನುವ ಹೊತ್ತಿಗೆ ವಾಂತಿ ಶುರುವಾಗಿದೆ. ಇದರಿಂದ ಆತಂಕಗೊಂಡು ಊಟವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅವರ ತಟ್ಟೆಯಲ್ಲಿ ಜೇಡವಿರುವುದು ಕಂಡಿದೆ.
ಈ ಕುರಿತು ಈಗಾಗಲೇ ಕ್ಯಾಂಟೀನ್ ಮ್ಯಾನೇಜ್ ಮೆಂಟ್ ಗೆ ದೂರು ನೀಡಲಾಗಿದೆ.












Click it and Unblock the Notifications