ಕೋವಿಡ್ ನಿರ್ವಹಣೆಗೆ ಪ್ರಧಾನಿ ಮೋದಿಗೆ ವಿಪಕ್ಷಗಳ ಪತ್ರ, 9 ಸಲಹೆ

ನವದೆಹಲಿ, ಮೇ 12; ಭಾರತದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಎದುರಿಸಲು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯಲಾಗಿದೆ. ವಿಪಕ್ಷಗಳು ಬರೆದಿರುವ ಪತ್ರದಲ್ಲಿ 9 ಸಲಹೆಗಳನ್ನು ಸಹ ನೀಡಲಾಗಿದೆ.

12 ಪ್ರಮುಖ ವಿರೋಧ ಪಕ್ಷಗಳ ನಾಯಕರು ಜಂಟಿಯಾಗಿ ಪ್ರಧಾನಿಗೆ ಈ ಪತ್ರವನ್ನು ಬರೆದಿದ್ದಾರೆ. ಲಭ್ಯವಿರುವ ಮೂಲಗಳಿಂದ ಕೋವಿಡ್ ವಿರುದ್ಧದ ಲಸಿಕೆ ಖರೀದಿ ಮಾಡಬೇಕು ಎಂದು ಪತ್ರದಲ್ಲಿ ಸಲಹೆ ನೀಡಲಾಗಿದೆ.

ವಿಪಕ್ಷಗಳು ನೀಡಿರುವ ಸಲಹೆಯನ್ನು ಇದುವರೆಗೂ ಗಂಭೀರವಾಗಿ ಪರಿಗಣಿಸಿಲ್ಲ. ಹೊಸ ಸಂಸತ್ ಭವನ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಪತ್ರದಲ್ಲಿ ಪ್ರಧಾನಿಗೆ ಸಲಹೆ ನೀಡಲಾಗಿದೆ.

Spent Money On Procure Vaccines And Oxygen Opposition Leaders Letter To PM

ಪತ್ರಕ್ಕೆ ಸೋನಿಯಾ ಗಾಂಧಿ, ಶರದ್ ಪವಾರ್, ಮಮತಾ ಬ್ಯಾನರ್ಜಿ, ಎಂ. ಕೆ. ಸ್ಟಾಲಿನ್, ಸೀತಾರಾಂ ಯೆಚೂರಿ, ಉದ್ಭವ್ ಠಾಕ್ರೆ ಸೇರಿದಂತೆ ವಿರೋಧ ಪಕ್ಷದ ಪ್ರಮುಖ ನಾಯಕರ ಸಹಿ ಇದೆ.

ಪ್ರಧಾನಿಗೆ ಸಲಹೆಗಳು; ಪತ್ರದಲ್ಲಿ ದೇಶಿಯವಾಗಿ ಮತ್ತು ವಿದೇಶದಲ್ಲಿ ಲಭ್ಯವಿರುವ ಮೂಲಗಳಿಂದ ಕೋವಿಡ್ ವಿರುದ್ಧದ ಲಸಿಕೆಯನ್ನು ಖರೀದಿ ಮಾಡಬೇಕು ಎಂದು ಸಲಹೆ ನೀಡಲಾಗಿದೆ. ದೇಶಾದ್ಯಂತ ಉಚಿತವಾಗಿ, ಸಾಮೂಹಿಕವಾಗಿ ಲಸಿಕೆ ನೀಡುವ ಅಭಿಯಾನವನ್ನು ಆರಂಭಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.

35 ಸಾವಿರ ಕೋಟಿ ರೂ.ಗಳನ್ನು ಲಸಿಕೆಗಾಗಿಯೇ ಮೀಸಲಾಗಿಡಬೇಕು. ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಕನಿಷ್ಠ 6000 ರೂ. ನೀಡಬೇಕು, ಬಡವರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಣೆ ಮಾಡಬೇಕು ಎಂದು ಸಹ ಪತ್ರದಲ್ಲಿ ಸಲಹೆಯನ್ನು ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+