ದೀಪಾವಳಿ, ನವರಾತ್ರಿ ಹಬ್ಬಕ್ಕೆ ಹಲವೆಡೆ ವಿಶೇಷ ರೈಲುಗಳ ಸಂಚಾರ, ವಿವರ ತಿಳಿಯಿರಿ

ಬೆಂಗಳೂರು, ಅಕ್ಟೋಬರ್‌ 03: ಮುಂಬರುವ ನವರಾತ್ರಿ ಹಾಗೂ ದೀಪಾವಳಿ ಹಬ್ಬಕ್ಕೆ ಭಾರತೀಯ ರೈಲ್ವೆ ಇಲಾಖೆಯೂ ದೇಶದ ಹಲವಾರು ಕಡೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಇದು ಹಬ್ಬದ ಸಮಯದಲ್ಲಿ ಪ್ರಯಾಣ ಬೆಳೆಸುವ ಜನರಿಗೆ ನೆರವಾಗಲಿದೆ.

ಭಾರತೀಯ ರೈಲ್ವೇ ಮುಂಬರುವ ನವರಾತ್ರಿಗಳು ಮತ್ತು ಇತರ ಹಬ್ಬಗಳ ಸಮಯದಲ್ಲಿ ಸಾಕಷ್ಟು ಜನರ ಓಡಾಟ ಇರುವುದರಿಂದ ಉತ್ತರ ರೈಲ್ವೆಯು ವಿವಿಧ ಸ್ಥಳಗಳಿಂದ ಕತ್ರಾಕ್ಕೆ ವಿಶೇಷ ರೈಲುಗಳನ್ನು ಪ್ರಾರಂಭಿಸಲಿದೆ. ಅಕ್ಟೋಬರ್ ತಿಂಗಳಲ್ಲಿ ಶ್ರೀ ಮಾತಾ ವೈಷ್ಣೋದೇವಿ ಕತ್ರಾಕ್ಕೆ ಭೇಟಿ ನೀಡಲು ಬಯಸುವ ಭಕ್ತರಿಗಾಗಿ ವಿಶೇಷ ರೈಲುಗಳನ್ನು ಬಿಡಲಾಗುತ್ತದೆ. ಈ ರೈಲು ಪ್ರತಿ ದಿಕ್ಕಿನಲ್ಲಿ ಆರು ಪ್ರಯಾಣಗಳನ್ನು ಮಾಡಲಿದೆ.

special-trains-running-in-many-places

ವಾರಣಾಸಿಯಿಂದ ಕತ್ರಾಕ್ಕೆ ರೈಲುಗಳು:

ಪ್ರತಿ ಭಾನುವಾರ ರಾತ್ರಿ 11.20ಕ್ಕೆ ಶ್ರೀ ಮಾತಾ ವೈಷ್ಣೋದೇವಿ-ವಾರಣಾಸಿ ನಡುವಿನ ವಿಶೇಷ ರೈಲು ಕತ್ರಾದಿಂದ ಹೊರಟು ಮರುದಿನ ರಾತ್ರಿ 11.55ಕ್ಕೆ ವಾರಣಾಸಿಗೆ ಆಗಮಿಸಲಿದೆ. ಈ ರೈಲು ಅಕ್ಟೋಬರ್ 22 ರಿಂದ ನವೆಂಬರ್ 26 ರವರೆಗೆ ಚಲಿಸುತ್ತದೆ. ಮಂಗಳವಾರದಂದು ವಾರಣಾಸಿ-ಶ್ರೀ ಮಾತಾ ವೈಷ್ಣೋದೇವಿ ವಿಶೇಷ ರೈಲು 01653 ವಾರಣಾಸಿಯಿಂದ ಬೆಳಿಗ್ಗೆ 6.20 ಕ್ಕೆ ಹೊರಟು ಮರುದಿನ ಬೆಳಿಗ್ಗೆ 11.20 ಕ್ಕೆ ತನ್ನ ಶ್ರೀ ಮಾತಾ ವೈಷ್ಣೋದೇವಿಯನ್ನು ತಲುಪಲಿದೆ.

ವಿಶೇಷ ರೈಲು ಅಂಬಾಲಾ ಕ್ಯಾಂಟ್, ಲುಧಿಯಾನ, ಜಲಂಧರ್ ಕ್ಯಾಂಟ್, ಪಠಾಣ್‌ಕೋಟ್ ಕ್ಯಾಂಟ್, ಜಮ್ಮು ತಾವಿ ಮತ್ತು ಉತ್ತಂಪುರ್ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲ್ಲುತ್ತದೆ. ಇದು ಹವಾನಿಯಂತ್ರಿತ ಸ್ಲೀಪರ್ ಮತ್ತು ಸಾಮಾನ್ಯ ದರ್ಜೆಯ ಕೋಚ್‌ಗಳನ್ನು ಒಳಗೊಂಡಿರುತ್ತದೆ.

ಹೆಚ್ಚುವರಿ ವಿಶೇಷ ರೈಲುಗಳು:

ನವದರಾತ್ರಿಗಾಗಿ ಕೆಲವು ಹೆಚ್ಚುವರಿ ವಿಶೇಷ ರೈಲುಗಳು ಸಹ ಪ್ರಾರಂಭವಾಗಲಿವೆ. ನವದೆಹಲಿ-ವಾರಣಾಸಿ ವಿಶೇಷ ರೈಲು ಸಂಖ್ಯೆ 04080 ನವೆಂಬರ್ 6 ರಿಂದ ನವೆಂಬರ್ 30 ರವರೆಗೆ ಕಾರ್ಯನಿರ್ವಹಿಸುತ್ತದೆ. ಪ್ರತಿ ಸೋಮವಾರ, ಗುರುವಾರ ಮತ್ತು ಶನಿವಾರದಂದು ರಾತ್ರಿ 7.20 ಕ್ಕೆ, ಈ ರೈಲು ನವದೆಹಲಿಯಿಂದ ಹೊರಟು ಮರುದಿನ ಬೆಳಿಗ್ಗೆ 9.45 ಕ್ಕೆ ವಾರಣಾಸಿ ನಿಲ್ದಾಣವನ್ನು ತಲುಪುತ್ತದೆ.

04079 ವಾರಣಾಸಿ- ಹೊಸದಿಲ್ಲಿ ವಿಶೇಷ ರೈಲು ವಾರಣಾಸಿಯಿಂದ ಪ್ರತಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಸಂಜೆ 6.35ಕ್ಕೆ ಹೊರಡಲಿದ್ದು, ರೈಲು ಮರುದಿನ ಬೆಳಗ್ಗೆ 9 ಗಂಟೆಗೆ ದೆಹಲಿಗೆ ಆಗಮಿಸಲಿದೆ. ನವೆಂಬರ್ 7, 2023 ರಿಂದ ಆರಂಭಗೊಂಡು ಡಿಸೆಂಬರ್ 1, 2023 ರವರೆಗೆ ಚಲಿಸಲಿದೆ. ರೈಲ್ವೆಯು ಹಬ್ಬದ ವಿಶೇಷ ಭಾರತ್ ಗೌರವ್ ರೈಲುಗಳನ್ನು ಸಹ ಓಡಿಸಲಿದೆ.

ಅಕ್ಟೋಬರ್ 10 ರಂದು ಮಧುರೈನಿಂದ ಪ್ರಯಾಗ್‌ರಾಜ್‌-ವಾರಣಾಸಿ-ಗಯಾ-ಅಯೋಧ್ಯಾ-ಹರಿದ್ವಾರ-ದೆಹಲಿ-ಮಥುರಾ-ಆಗ್ರಾಕ್ಕೆ ಮಹಾಲಯ ಅಮ್ಮವಾಸೆ ವಿಶೇಷ ರೈಲು ಹೊರಡಲಿದೆ. ಅಕ್ಟೋಬರ್ 27 ರಂದು ಕೋಲ್ಕತ್ತಾ - ಕಾಮಾಖ್ಯ - ಪುರಿ - ಭುವನೇಶ್ವರಕ್ಕೆ ತ್ರಿ ಶಕ್ತಿ ಪೀಠ ಯಾತ್ರೆಗೆ ರೈಲು ಸಂಚರಿಸಲಿದೆ. ಇದರೊಂದಿಗೆ ಹಲವೆಡೆ ದಕ್ಷಿಣ ಮಧ್ಯ ರೈಲ್ವೆ ವಿಶೇಷ ರೈಲುಗಳನ್ನು ವಿಸ್ತರಿಸಿದೆ.

ದೀಪಾವಳಿ, ದಸರಾ ಮತ್ತು ಛತ್ ಹಬ್ಬದ ಹಿನ್ನೆಲೆಯಲ್ಲಿ ರೈಲು ಸೇವೆಗೆ ಬೇಡಿಕೆ ಹೆಚ್ಚಾಗಿದ್ದು ದಕ್ಷಿಣ ಮಧ್ಯ ರೈಲ್ವೆ ಹಲವಾರು ಸ್ಥಳಗಳ ನಡುವೆ ವಿಶೇಷ ರೈಲುಗಳನ್ನು ವಿಸ್ತರಿಸಿದೆ. ಅಕ್ಟೋಬರ್ 15ರಿಂದ ನವೆಂಬರ್ 26, 2023 ರವರೆಗೆ ತಿರುಪತಿ-ಸಾಯಿನಗರ ಶಿರಡಿ (07637) ವಿಸ್ತರಿಸಲಾಗಿದೆ. ಸಾಯಿನಗರ ಶಿರಡಿ-ತಿರುಪಲಿ (07638) ಅಕ್ಟೋಬರ್ 16 ರಿಂದ 27 ರವರೆಗೆ ವಿಸ್ತರಿಸಲಾಗಿದೆ. ಇದಲ್ಲದೆ ಕಾಜಿಪೇಟ್-ದಾದರ್ (07195) ಅನ್ನು ಅಕ್ಟೋಬರ್ 4, 2023 ರಿಂದ ನವೆಂಬರ್ 29, 2023 ರವರೆಗೆ ವಿಸ್ತರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+