ಒಡಿಶಾದಲ್ಲಿ ಸೈಕ್ಲೋನ್ ಹೈ ಅಲರ್ಟ್: ಪುರಿಯಿಂದ ವಿಶೇಷ ರೈಲು ವ್ಯವಸ್ಥೆ
ಒಡಿಶಾ, ಮೇ 2: ಸೈಕ್ಲೋನ್ ಫ್ಯಾನಿ ಒಡಿಶಾಕ್ಕೆ ಸಮೀಪಿಸುತ್ತಿರುವ ಕಾರಣ ಪುರಿಯಿಂದ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.
ಪುರಿಯಿಂದ ಶಾಲಿಮರ್‌ಗೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ. ರೈಲು ಗುರುವಾರ ಮಧ್ಯಾಹ್ನದಿಂದ ಪುರಿಯಿಂದ ಸಂಚಾರ ಆರಂಭಿಸಲಿದೆ. ಭುವನೇಶ್ವರ, ಜಾಜಪುರ, ಬಲೇಶ್ವರ, ಖಾರಗ್‌ಪುರ, ಖೂರ್ದ ಮಾರ್ಗವಾಗಿ ಶಾಲಿಮರ್ ತಲುಪಲಿದೆ. ಮಧ್ಯಾಹ್ನ 1.30ಕ್ಕೆ ಭುವನೇಶ್ವರ ತಲುಪಲಿದೆ.

ರೈಲು ಕಾಯ್ದಿರಿಸಿದ ಹಾಗೂ ಕಾಯ್ದಿರಿಸದ ಕೋಚ್‌ಗಳು ಲಭ್ಯವಿರಲಿದೆ. ಚಂಡಮಾರುತ ಫ್ಯಾನಿ ಪುರಿಯಿಂದ 500 ಕಿ.ಮೀ ದೂರದಲ್ಲಿದೆ. ಶುಕ್ರವಾರ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಒಡಿಶಾದ 11 ಜಿಲ್ಲೆಗಳಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಹಿಂಪಡೆಯಲಾಗಿದೆ. ಭಾರತೀಯ ನೌಕಾಪಡೆ ಹಾಗೂ ಭಾರತೀಯ ಕೋಸ್ಟ್ ಗಾರ್ಡ್, ಎನ್‌ಡಿಆರ್‌ಎಫ್ ಸಿಬ್ಬಂದಿಗಳು ಕೂಡ ರಕ್ಷಣಾ ಕಾರ್ಯಕ್ಕೆ ಸಿದ್ಧರಾಗಿದ್ದಾರೆ.












Click it and Unblock the Notifications