ಉತ್ತರ ಪ್ರದೇಶ: ವಿಧಾನಪರಿಷತ್ ಚುನಾವಣೆಯಲ್ಲೂ ಎಸ್ಪಿ-ಬಿಎಸ್ಪಿ ಮೈತ್ರಿ
ಲಕ್ನೋ, ಏಪ್ರಿಲ್ 12: ಲೋಕಸಭಾ ಉಪಚುನಾವಣೆ ಮತ್ತು ರಾಜ್ಯ ಸಭಾ ಚುನಾವಣೆಗಳಲ್ಲಿ ಒಂದಾಗಿ ಚುನಾವಣೆ ಎದುರಿಸಿದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ ಇದೀಗ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಪರಿಷತ್ ಚುನಾವಣೆಯನ್ನೂ ಒಟ್ಟಾಗಿ ಎದುರಿಸಲಿದೆ.
ಉತ್ತರ ಪ್ರದೇಶದಲ್ಲಿ 13 ವಿಧಾನ ಪರಿಷತ್ ಸೀಟುಗಳಿಗೆ ಏ.26 ರಂದು ಚುನಾವಣೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಹೊರಬೀಳಲಿದೆ. ಉತ್ತರ ಪ್ರದೇಶದ 100 ಸದಸ್ಯರ ವಿಧಾನ ಪರಿಷತ್ತಿನಲ್ಲಿ ಒಟ್ಟು 61 ಸೀಟುಗಳನ್ನು ಎಸ್ಪಿ ಹೊಂದಿದೆ. ಬಿಸ್ಪಿ 9 ಸೀಟುಗಳನ್ನು ಹೊಂದಿದೆ. ಆಡಳಿತಾರೂಢ ಬಿಜೆಪಿ 13 ಸೀಟುಗಳನ್ನಷ್ಟೇ ಹೊಂದಿದೆ.

ಕೆಲವು ದಿನಗಳ ಹಿಂದೆ ಇಲ್ಲಿನ ಗೋರಖ್ಪುರ ಮತ್ತು ಫುಲ್ಪುರ ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಎಸ್ಪಿ ಮತ್ತು ಎಸ್ಪಿ ಮೈತ್ರಿಯಿಂದಾಗಿ ಎರಡೂ ಕ್ಷೇತ್ರಗಳಲ್ಲೂ ಎಸ್ಪಿ ಅಭ್ಯರ್ಥಿಗಳು ಜಯ ದಾಖಲಿಸಿದ್ದರು.












Click it and Unblock the Notifications