IIT ಇಲ್ಲ, ಮನೆಯಲ್ಲಿ ಕಂಪ್ಯೂಟರ್ ಸಹ ಇರಲಿಲ್ಲ: 27 ವಿವಿಗಳಿಂದ ರಿಜೆಕ್ಟಾದ ಭಾರತೀಯ ಯುವಕ ಮೆಟಾ ವೈಸ್ ಪ್ರೆಸಿಡೆಂಟ್ ಆಗಿದ್ದ ಹೇಗೆ?

ಜಾಗತಿಕ ಮಟ್ಟದ ದೈತ್ಯ ಟೆಕ್‌ ಕಂಪನಿಗಳಲ್ಲಿ ಉನ್ನತ ಹುದ್ದೆಗೇರಲು ಐಐಟಿ ಅಥವಾ ಎನ್‌ಐಟಿಯಂತಹ ಪ್ರಸಿದ್ಧ ಸಂಸ್ಥೆಗಳ ಟ್ಯಾಗ್ ಇರಲೇಬೇಕು ಎನ್ನುವ ನಂಬಿಕೆ ಎಲ್ಲರಲ್ಲಿದೆ. ಆದರೆ ಹೈದರಾಬಾದ್ ಮೂಲದ ಇಂಜಿನಿಯರ್ ಸೌಮಿತ್ ಚಿಂತಲ ಈ ಎಲ್ಲಾ ನಂಬಿಕೆಯನ್ನಾ ಸುಳ್ಳು ಎಂದು ಸಾಬೀತು ಮಾಡಿ ತೋರಿಸಿದ್ದಾರೆ.

ಇವರು ಚಿಕ್ಕವರಿದ್ದಾಗ ಮನೆಯಲ್ಲಿ ಸ್ವಂತ ಕಂಪ್ಯೂಟರ್ ಇಲ್ಲದೆ ಬೆಳೆದ ಈ ಯುವಕ, ಅಮೆರಿಕದ ಬರೋಬ್ಬರಿ 27 ವಿಶ್ವವಿದ್ಯಾಲಯಗಳಿಂದ ತಿರಸ್ಕೃತರಾಗಿದ್ರು. ಆದರೆ, ಇಂದು ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿರುವ ಮೆಟಾ ಸಂಸ್ಥೆಯ ವೈಸ್ ಪ್ರೆಸಿಡೆಂಟ್ ಹಾಗೂ ಮೆಟಾ ಫೆಲೋ ಹುದ್ದೆಗೇರಿ ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿದ್ದಾರೆ ನೋಡಿ.

Soumith Chintala

27 ವಿಶ್ವವಿದ್ಯಾಲಯಗಳಿಂದ ರಿಜೆಕ್ಟ್ ಆದ ಅನುಭವ

ಸಾಮಾಜಿಕ ಜಾಲತಾಣ 'X' ನಲ್ಲಿ ವಿಕಾಸ್ ಎಂಬುವವರು ಸೌಮಿತ್ ಚಿಂತಲ ಅವರ ಈ ರೋಚಕ ಪಯಣವನ್ನ ಹಂಚಿಕೊಂಡಿದ್ದು, ಅದು ಸದ್ಯ ವೈರಲ್ ಆಗಿದೆ. 2009ರಲ್ಲಿ ತಮಿಳುನಾಡಿನ ವಿಐಟಿ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಸೌಮಿತ್, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಲು ನಿರ್ಧರಿಸಿದ್ದರು. ಆದರೆ, ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಿದಾಗ ಅವರಿಗೆ ಸತತ 27 ವಿಶ್ವವಿದ್ಯಾಲಯಗಳ ಸಾಲು ಸಾಲು ತಿರಸ್ಕಾರದ ಉತ್ತರ ಬಂದಿದ್ದವು.

ಆದರೂ ಸೌಮಿತ್ ಹೆದರದೆ, ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದರು. ಅಲ್ಲಿ ಪ್ರಸಿದ್ಧ ಡೀಪ್ ಲರ್ನಿಂಗ್ ಸಂಶೋಧಕರಾದ ಯಾನ್ ಲೆಕುನ್ ಅವರ ಮಾರ್ಗದರ್ಶನದಲ್ಲಿ ಕೃತಕ ಬುದ್ಧಿಮತ್ತೆಯಲ್ಲಿ ಆಳವಾದ ಅಧ್ಯಯನ ನಡೆಸಿದರು. ಆದರೆ, ಶಿಕ್ಷಣ ಮುಗಿದ ತಕ್ಷಣವೇ ಅವರಿಗೆ ಸಕ್ಸಸ್‌ ಸಿಗಲಿಲ್ಲ. ಆರಂಭದಲ್ಲಿ ಉದ್ಯೋಗಕ್ಕಾಗಿ ಹಲವು ತಿರಸ್ಕಾರಗಳನ್ನ ಎದುರಿಸಿದ್ರು ಹಾಗೂ ವೀಸಾ ತೊಂದರೆಯಿಂದಾಗಿ ತಾತ್ಕಾಲಿಕವಾಗಿ ಅಮೆರಿಕವನ್ನೇ ತೊರೆಯಬೇಕಾದ ಪರಿಸ್ಥಿತಿ ಕೂಡ ಬಂದಿತ್ತು.

ಪೈಟಾರ್ಚ್ ಸೃಷ್ಟಿಕರ್ತ: ಮೆಟಾ ಸಂಸ್ಥೆಯಲ್ಲಿ 11 ವರ್ಷಗಳ ಪಯಣ

ಎಲ್ಲ ಕಷ್ಟ-ನಷ್ಟಗಳನ್ನ ಮೆಟ್ಟಿ ನಿಂತ ಸೌಮಿತ್ ಚಿಂತಲ, 2014 ರಲ್ಲಿ ಮೆಟಾ (ಫೇಸ್‌ಬುಕ್) ಸಂಸ್ಥೆಯ ಎಐ ಸಂಶೋಧನಾ ವಿಭಾಗಕ್ಕೆ 'L4 ಸಾಫ್ಟ್‌ವೇರ್ ಇಂಜಿನಿಯರ್' ಆಗಿ ಸೇರ್ಪಡೆಯಾದರು. ಅಲ್ಲಿ ಅವರು ಕೈಗೊಂಡ 'ಪೈಟಾರ್ಚ್' (PyTorch) ಎಂಬ ಓಪನ್ ಸೋರ್ಸ್ ಮೆಷಿನ್ ಲರ್ನಿಂಗ್ ಫ್ರೇಮ್‌ವರ್ಕ್‌ನ ಡೆವಲಪ್‌ಮೆಂಟ್‌, ಎಐ ಜಗತ್ತಿನ ಚಿತ್ರಣವನ್ನೇ ಬದಲಾಯಿಸಿತು.

ಇಂದು ಜಗತ್ತಿನಾದ್ಯಂತ ಲಕ್ಷಾಂತರ ಸಂಶೋಧಕರು, ಅಟೋನಾಮಸ್‌ ಡ್ರೈವಿಂಗ್‌ ಸಂಸ್ಥೆಗಳು ಹಾಗೂ ಗೂಗಲ್, ಮೆಟಾದಂತಹ ದೈತ್ಯ ಕಂಪನಿಗಳು ಪೈಟಾರ್ಚ್ ಸೌಲಭ್ಯವನ್ನೇ ಬಳಸುತ್ತಿವೆ. ಮೆಟಾ ಸಂಸ್ಥೆಯಲ್ಲಿ 11 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಸೌಮಿತ್, ಸಾಮಾನ್ಯ ಸಾಫ್ಟ್‌ವೇರ್ ಇಂಜಿನಿಯರ್ ಹಂತದಿಂದ ಮೆಟಾದ ಅತ್ಯುನ್ನತ ತಾಂತ್ರಿಕ ಹುದ್ದೆಯಾದ 'ಮೆಟಾ ಫೆಲೋ' ಹಾಗೂ 'ವೈಸ್ ಪ್ರೆಸಿಡೆಂಟ್' ಆಗಿ ಬಡ್ತಿ ಪಡೆದು ಇತಿಹಾಸ ನಿರ್ಮಿಸಿದರು.

ಎಐ ಕ್ಷೇತ್ರದಲ್ಲಿ ಹೊಸ ಅಧ್ಯಾಯ: ಥಿಂಕಿಂಗ್ ಮೆಷಿನ್ಸ್ ಲ್ಯಾಬ್‌ಗೆ ಸಿಟಿಒ

ಮೆಟಾದಲ್ಲಿ ಪೈಟಾರ್ಚ್ ಯೋಜನೆಯನ್ನ ದೊಡ್ಡ ಮಟ್ಟದಲ್ಲಿ ಬೆಳೆಸಿದ ಸೌಮಿತ್ ಚಿಂತಲ, ಇತ್ತೀಚೆಗೆ ತಮ್ಮ ಸುದೀರ್ಘ ಪಯಣವನ್ನು ಮುಗಿಸಿ ಮೆಟಾಗೆ ರಾಜೀನಾಮೆ ನೀಡಿದ್ದಾರೆ. ಪ್ರಸ್ತುತ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಎಐ ಸ್ಟಾರ್ಟಪ್‌ 'ಥಿಂಕಿಂಗ್ ಮೆಷಿನ್ಸ್ ಲ್ಯಾಬ್'ಸಂಸ್ಥೆಗೆ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಇವರ ಹಿನ್ನೆಲೆ ಏನೇ ಇರಲಿ, ನಿರಂತರ ಶ್ರಮ ಮತ್ತು ಸಾಧಿಸುವ ಗುರಿಯೊಂದಿದ್ದರೆ ಜಾಗತಿಕ ಮಟ್ಟದಲ್ಲೂ ಸಾಧನೆ ಮಾಡಬಹುದು ಎಂಬುದಕ್ಕೆ ಸೌಮಿತ್ ಚಿಂತಲ ಅವರ ಕಥೆ ಒಂದು ಒಳ್ಳೇಯ ಉದಾಹರಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+