ಸೋನಿಯಾ ಗಾಂಧಿಗೆ ಅನಾರೋಗ್ಯ, ಶಿಮ್ಲಾದಿಂದ ದೆಹಲಿಗೆ
ಶಿಮ್ಲಾ, ಮಾರ್ಚ್ 23: ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯ ಮತ್ತೆ ಏರುಪೇರಾಗಿದೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಅವರು ಪುತ್ರ ಪ್ರಿಯಾಂಕಾ ಗಾಂಧಿ ಅವರ ಜತೆ ಶಿಮ್ಲಾದಲ್ಲಿ ವಿಹಾರಾರ್ಥವಾಗಿ ಬಂದಿದ್ದರು. ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಶಿಮ್ಲಾದಿಂದ ದೆಹಲಿಗೆ ವಾಪಸ್ ಆಗಿದ್ದಾರೆ.
ಗುರುವಾರ ರಾತ್ರಿ 11.15 ರ ಸುಮಾರಿಗೆ ಸೋನಿಯಾ ಗಾಂಧಿಯವರನ್ನು ಚಂಡೀಗಢದ ಪಿಜಿಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟ ತೊಂದರೆಯಿಂದ ಅವರು ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ದೆಹಲಿಗೆ ಕಳಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಆಸ್ಪತ್ರೆಯಿಂದ ಬೆಳಗಿನ ಜಾವ 2.30ರ ಸುಮಾರಿಗೆ ಸೋನಿಯಾ ಡಿಸ್ಚಾರ್ಜ್ ಆಗಿದ್ದಾರೆ ಎಂದು ಶಿಮ್ಲಾದ ಇಂದಿರಾಗಾಂಧಿ ಮೆಡಿಕಲ್ ಕಾಲೇಜ್ ವೈದ್ಯ ರಮೇಶ್ ಚಂದ್ ಹೇಳಿದ್ದಾರೆ.

ಕಳೆದ ಎರಡು ದಿನಗಳಿಂದ ಶಿಮ್ಲಾದ ಒಬೆರಾಯ್ ಗ್ರೂಪಿನ ಐಷಾರಾಮಿ ರೆಸಾರ್ಟ್ ನಲ್ಲಿ ಸೋನಿಯಾ ಹಾಗೂ ಮಗಳು ಪ್ರಿಯಾಂಕ ಗಾಂಧಿ ಅವರು ತಂಗಿದ್ದರು. ಶಿಮ್ಲಾದಿಂದ 13 ಕಿಲೋಮೀಟರ್ ದೂರದಲ್ಲಿರುವ ಚರಬ್ರ ಎಂಬಲ್ಲಿರುವ ಈ ರೆಸಾರ್ಟ್ ಇದೆ.












Click it and Unblock the Notifications