Video Viral: ಹೆದ್ದಾರಿ ಮಧ್ಯೆ ಗನ್ ಜತೆ ಯುವತಿ ರೀಲ್ಸ್ ವಿಡಿಯೋ: ಮುಂದಾಗಿದ್ದೇನು?
ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ನಿತ್ಯ ಒಂದಲ್ಲಾ ಒಂದು ರೀಲ್ಸ್ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಇದು ಹಲವರಿಗೆ ದೈನಂದಿನ ಕೆಲಸವೆಂಬಂತೆ ರೂಢಿಯಾಗಿಬಿಟ್ಟಿದೆ. ಡಾನ್ಸ್, ಮಾಡಲಿಂಗ್, ಚೇಷ್ಟೇ, ಸಾಮಾಜಿಕ ಸಂದೇಶ, ಸಿನಿಮಾ ಹಾಡುಗಳಿಗೆ ರೀಲ್ಸ್ ಮಾಡಿ ಸುದ್ದಿಯಾಗುತ್ತಾರೆ. ಆದರೆ ಇಲ್ಲೊಬ್ಬ ಯುವತಿ ಗನ್ ಹಿಡಿದು ಹೆದ್ದಾರಿಯಲ್ಲಿ ರೀಲ್ಸ್ ಮಾಡಿದ್ದಾಳೆ. ವಿಡಿಯೋಗೆ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
ಅಂತರ್ಜಾಲ ಯುಗದಲ್ಲಿ ಬಹುತೇಕರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ಕೆಲವರು ರೀಲ್ಸ್ ಮಾಡಿ ವಿವಾದ, ತೊಂದರೆ, ಕಾನೂನು ಕ್ರಮಕ್ಕೆ ಒಳಗಾದ ಉಹಾರಣೆಗಳು ಸಾಕಷ್ಟಿವೆ.

ಕಾನೂನು, ನೀತಿ ಸಂಹಿತೆಯ ಉಲ್ಲಂಘನೆ?
ಅದೇ ರೀತಿ ಲಕ್ನೋದಲ್ಲಿ ಯುವತಿ ಯೊಬ್ಬಳು ಹೆದ್ದಾರಿಯಲ್ಲಿ ಗನ್ ಹಿಡಿದು ಯುವತಿ ಡಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರನ್ನು ಆಕ್ರೋಶ ಹೊರ ಹಾಕಿದ್ದಾರೆ. ನಡು ರಸ್ತೆಯಲ್ಲಿ ಯುವತಿ/ಮಹಿಳೆ ಕೈಯಲ್ಲಿ ಗನ್ (ಪಿಸ್ತೂಲ್) ಹಿಡಿದು ಡಾನ್ಸ್ ಮಾಡಿದ್ದಾರೆ. ಇದು ಕಾನೂನು ನಿಯಮ ಉಲ್ಲಂಘನೆ, ಇದು ಸರಿಯಲ್ಲ ಎಂದು ಹೇಳಿದ್ದಾರೆ.
ಈ ವಿಡಿಯೋದಲ್ಲಿ ಖ್ಯಾತ ಯೂಟ್ಯೂಬರ್ ಸಿಮ್ರಾನ್ ಯಾದವ್ ಇದ್ದು, ಇದನ್ನು ಲಕ್ನೋದ ಹೆದ್ದಾರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ವರದಿ ಆಗಿದೆ. ಈ ವಿಡಿಯೋವನ್ನು ವಕೀಲ ಕಲ್ಯಾಣ್‌ಜಿ ಚೌಧರಿ ಎಂಬುವವರು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಲಕ್ನೋ ಪೊಲೀಸರ ಗಮನಕ್ಕೆ ತಂದಿದ್ದಾರೆ. ತ್ವರಿತ ಕ್ರಮಕ್ಕೆ ಅವರು ಆಗ್ರಹಿಸಿದ್ದಾರೆ.
instagram star सिमरन यादव लखनऊ सरेआम नियम कानून व आचार संहिता की धज्जियाँ उड़ाते हुए highway पर पिस्टल को लहराकर video वायरल करके समाज में अपनी बिरादरी का रौब जमा रहीं हैं परंतु अधिकारी चुप्पी साधे हुए है l @dgpup @ECISVEEP @Splucknow_rural @Igrangelucknow @adgzonelucknow @myogi pic.twitter.com/GN4zWsc1P9
— Advocate kalyanji Chaudhary (@DeewaneHindust1) May 9, 2024
ರೀಲ್ಸ್ ವಿಡಿಯೋದಲ್ಲಿ ಏನಿದೆ?
ಲಕ್ನೋದ ಹೆದ್ದಾರಿ ನಡುವೆ ಈ ಮಹಿಳೆಯು ಭೋಜ್‌ಪುರಿ ಹಾಡಿಗೆ ನೃತ್ಯ ಮಾಡಿದ್ದನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು. ಆಕಾಶಕ್ಕೆ ಪಿಸ್ತೂಲ್ ತೋರಿಸುತ್ತಾ ನೃತ್ಯ ಮಾಡಿರುವ ವಿಡಿಯೋ ಸೆರೆಯಾಗಿದೆ. ಇನ್‌ಸ್ಟಾಗ್ರಾಮ್ ತಾರೆ ಲಕ್ನೋದ ಸಿಮ್ರಾನ್ ಯಾದವ್ ಅವರು ಹೆದ್ದಾರಿಯಲ್ಲಿ ಪಿಸ್ತೂಲ್ ಪ್ರದರ್ಶಿಸುವ ಮೂಲಕ ಕಾನೂನು ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.
ಇತ್ತ ತಮ್ಮ ಸಮಾಜದಲ್ಲಿ ತನ್ನ ಸಮುದಾಯದ ಶಕ್ತಿಯನ್ನು ತೋರಿಸಲು ವೀಡಿಯೊವನ್ನು ಹೆಚ್ಚು ಹೆಚ್ಚು ವೈರಲ್ ಮಾಡುತ್ತಿದೆ. ಇಷ್ಟೆಲ್ಲ ನಡೆದರೂ ಸಂಬಂಧಿಸಿದ ಅಧಿಕಾರಿಗಳು ಏಕೆ ಮೌನ ವಹಿಸಿದ್ದಾರೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಲಕ್ನೋ ಪೊಲೀಸರ ಪ್ರತಿಕ್ರಿಯೆ
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಲಕ್ನೋ ಪೊಲೀಸರು ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ಸಂಬಂಧಿಸಿದಂತೆ ತನಿಖೆ ನಡೆಸಲು ಅವರು ಸೂಚನೆ ನೀಡಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಆದಲ್ಲಿ ಅಗತ್ಯ ಕ್ರಮವಹಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ವಿಡಿಯೋ ನೋಡಿದ ಮತ್ತೊಬ್ಬ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಲ್ಲದೇ ಇಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ವಿಡಿಯೋದಲ್ಲಿ ಆ ಹೆಣ್ಣು ಮಗಳು ಏಕೆ ಗನ್ ಪ್ರದರ್ಶಿಸಿದ್ದಾರೆ. ಅದು ಹೆದ್ದಾರಿಯಲ್ಲಿ ಗುಂಪಾಗಿ ನಿಂತು ರಿಲ್ಸ್ ಮಾಡಿದರೆ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಇನ್ನೊಬ್ಬರು ತಿಳಿಸಿದ್ದಾರೆ.
ಸಿಮ್ರಾನ್ ಯಾದವ್ ಅವರು ಇನ್ಸ್‌ಗ್ರಾಮ್‌ನಲ್ಲಿ 2.2 ದಶಲಕ್ಷಕ್ಕೂ ಹೆಚ್ಚು ಅನುಯಾಯಿ ಹೊಂದಿದ್ದಾರೆ. ಅವರದ್ದೇ ಆದ ಯೂಟ್ಯೂಬ್ ಚಾನಲ್ ನಲ್ಲಿ ಸುಮಾರು 1.8 ದಶಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications