ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾರ್ ಮತ್ತು ಮಗಳು: ಕಾಂಗ್ರೆಸ್ಸಿಗರಿಗೆ ಸ್ಮೃತಿ ಇರಾನಿ ಲೀಗಲ್ ನೋಟೀಸ್

|
Google Oneindia Kannada News

ನವದೆಹಲಿ, ಜುಲೈ 24: ತಮ್ಮ ಹಾಗೂ ತಮ್ಮ ಮಗಳ ಮೇಲೆ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾನುವಾರ ಲೀಗಲ್ ನೋಟೀಸ್ ಕಳುಹಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಮಾಡಿರುವ ಆರೋಪಗಳು ಸುಳ್ಳು ಹಾಗು ಆಧಾರ ರಹಿತ ಎಂದು ಹೇಳಿರುವ ಇರಾನಿ, ಈ ಕಾಂಗ್ರೆಸ್ ನಾಯಕರು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ನಾಯಕರು ನಿನ್ನೆ ಶನಿವಾರ ಸ್ಮೃತಿ ಇರಾನಿಯವರ 18 ವರ್ಷದ ಮಗಳು ಜೋಯಿಶ್ ಇರಾನಿ ಗೋವಾದಲ್ಲಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಸ್ಮೃತಿ ಇರಾನಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದರು.

ಹಿರಿಯರನ್ನು ಗೌರವಿಸಿ, ನಿಮ್ಮ ಗ್ರಾಮ ಮರೆಯದಿರಿ: ರಾಮನಾಥ್ ಕೋವಿಂದ್ ಕಿವಿಮಾತುಹಿರಿಯರನ್ನು ಗೌರವಿಸಿ, ನಿಮ್ಮ ಗ್ರಾಮ ಮರೆಯದಿರಿ: ರಾಮನಾಥ್ ಕೋವಿಂದ್ ಕಿವಿಮಾತು

ಈ ವಿಚಾರದ ಬಗ್ಗೆ ಸ್ಮೃತಿ ಇರಾನಿ ಇಂದು ಭಾನುವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. "ಅವರು ತಮ್ಮ ಆರೋಪಗಳನ್ನು ವಾಪಸ್ ಪಡೆದು ಬೇಷರತ್ ಕ್ಷಮೆ ಕೋರದೇ ಹೋದರೆ ಇರಾನಿಯವರು ಕಾನೂನು ಪ್ರಕಾರ ಕ್ರಿಮಿನಲ್ ಮೊಕದ್ದಮೆ ಹಾಕುತ್ತಾರೆ" ಎಂದು ಲೀಗಲ್ ನೋಟೀಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

Smriti Irani Legal Notice to Congress Leaders Over Comments On Her Daughter

"ನಮ್ಮ ಕ್ಲೈಂಟ್ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯಾಗಿದ್ದಾರೆ, ಸಚಿವೆಯಾಗಿದ್ದಾರೆ. ಅವರ ಗೌರವಕ್ಕೆ ಕುಂದು ತರುವ ಉದ್ದೇಶದಿಂದ ಈ ಸುಳ್ಳು ಆರೋಪಗಳನ್ನು ಮಾಡಲಾಗಿದೆ," ಎಂದು ನೋಟೀಸ್‌ನಲ್ಲಿ ತಿಳಿಸಲಾಗಿದೆ.

ಇದೇ ನೋಟೀಸ್ ಅನ್ನು ಮಹಿಳಾ ಕಾಂಗ್ರೆಸ್ ನಾಯಕಿ ನೇಟ್ಟಾ ಡಿಸೋಜಾ ಹಾಗೂ ಕಾಂಗ್ರೆಸ್ ಪಕ್ಷಕ್ಕೂ ನೀಡಲಾಗಿದೆ.

ಜೋಯಿಶ್ ಯಾವ ಪರವಾನಿಗೆಗೂ ಅರ್ಜಿ ಸಲ್ಲಿಸಿಲ್ಲ
ಕಾಂಗ್ರೆಸ್ ನಾಯಕರು ಆರೋಪಿಸಿರುವಂತೆ ಸ್ಮೃತಿ ಇರಾನಿ ಮಗಳು ಜೋಯಿಶ್ ಇರಾನಿ ಯಾವುದೇ ಬಾರ್ ಆಗಲೀ ಅಥವಾ ಉದ್ಯಮವಾಗಲೀ ನಡೆಸಲು ಯಾವುದೇ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಿಲ್ಲ. ಗೋವಾದ ಅಬಕಾರಿ ಇಲಾಖೆಯಿಂದ ಆಕೆಗೆ ಯಾವುದೇ ಶೋಕಾಸ್ ನೋಟೀಸ್ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಭಾರತೀಯ ಅಂಟಾರ್ಕ್ಟಿಕ್ ಮಸೂದೆಗೆ ಅಂಗೀಕರಿಸಿದ ಲೋಕಸಭೆಭಾರತೀಯ ಅಂಟಾರ್ಕ್ಟಿಕ್ ಮಸೂದೆಗೆ ಅಂಗೀಕರಿಸಿದ ಲೋಕಸಭೆ

ಗಾಂಧಿ ಕುಟುಂಬದ ಚಿತಾವಣೆ
ತಮ್ಮ ಹಾಗು ತಮ್ಮ ಮಗಳ ಮೇಲೆ ಕಾಂಗ್ರೆಸ್ ನಾಯಕರು ಮಾಡಿರುವ ಈ ಆರೋಪದ ಹಿಂದೆ ಗಾಂಧಿ ಕುಟುಂಬದ ಕೈವಾಡ ಇದೆ ಎಂದು ಸ್ಮೃತಿ ಇರಾನಿ ಇದೇ ವೇಳೆ ಶಂಕಿಸಿದ್ದಾರೆ.

Smriti Irani Legal Notice to Congress Leaders Over Comments On Her Daughter

ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ತಾನು ಗಟ್ಟಿಯಾಗಿ ಧ್ವನಿ ಎತ್ತುತ್ತಿರುವುದರಿಂದ ಗಾಂಧಿ ಕುಟುಂಬದವರು ಈ ಸುಳ್ಳು ಆರೋಪಗಳನ್ನು ಹೇಳಿಸುತ್ತಿದ್ದಾರೆ. ತಾನು ಇದನ್ನು ಇಲ್ಲಿಗೇ ಬಿಡುವುದಿಲ್ಲ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಸ್ಮೃತಿ ಇರಾನಿ ಮಗಳು ಜೋಯಿಶ್ ಇರಾನಿ ಎಂದು ಹೇಳಲಾದ ರೆಸ್ಟೋರೆಂಟ್ ಮುಂದೆ ಭಾನುವಾರ ಗೋವಾದ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡಿದ ಘಟನೆಯೂ ನಡೆದಿದೆ.

Recommended Video

35 ಎಸೆತ,3 ಫೋರ್,5 ಸಿಕ್ಸರ್: ಅಕ್ಷರ್ ಪಟೇಲ್ ಸ್ಫೋಟಕ ಆಟ ಹೇಗಿತ್ತು ನೋಡಿ | *Cricket | OneIndia Kanndaa

(ಒನ್ಇಂಡಿಯಾ ಸುದ್ದಿ)

English summary
Union Minister Smriti Irani has sent legal notice to Congress leaders Jairam Ramesha and others who had alleged that Smriti's daughter is running illegal bar in Goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X