• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಗರೇಟು ಸೇವನೆ ಇನ್ಮುಂದೆ ಜೇಬಿಗೂ ಹಾನಿಕರ!

By Prasad
|

ಬೆಂಗಳೂರು, ಜು. 10 : 'ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ' ಎಂದು ಸಿಗರೇಟ್ ಪ್ಯಾಕ್ ಮೇಲೆ ಬರೆದಿರುವ ಸಂದೇಶವನ್ನು ಇನ್ನು ಮುಂದೆ 'ಸಿಗರೇಟು ಸೇವನೆ ಜೇಬಿಗೂ ಹಾನಿಕರ' ಎಂದು ಓದಿಕೊಳ್ಳಬೇಕಾದ ಪ್ರಸಂಗ ಬಂದಿದೆ. ಏಕೆಂದರೆ, ಸಿಗರೇಟ್ ಮೇಲಿನ ಸುಂಕವನ್ನು ಶೇ.11ರಿಂದ ಶೇ.72ರವರೆಗೆ ಏರಿಸಿದ್ದಾರೆ ಅರುಣ್ ಜೇಟ್ಲಿ ಸಾಹೇಬ್ರು.

ಶೋಕಿಗಾಗಿಯೋ, ಚಟಕ್ಕಾಗಿಯೋ, ಸಂತೋಷಕ್ಕಾಗಿಯೋ, ಹುಡುಗಿಯರಿಗಾಗಿಯೋ, ನೋವು ಮರೆಯಲಿಕ್ಕಾಗಿಯೋ(?), ಅಥವಾ ಸುಖಾಸುಮ್ಮನೆ ಸಿಗರೇಟಿನ ಹೊಗೆಯನ್ನು ಬಿಡುತ್ತಿದ್ದ ಸಿಗರೇಟುವಾಲಾಗಳಿಗೆ ವಿತ್ತ ಸಚಿವರಾದ ಅರುಣ್ ಜೇಟ್ಲಿಯವರು ಸರಿಯಾದ ಬತ್ತಿ ಇಟ್ಟಿದ್ದಾರೆ.

ಈ ತೀರ್ಮಾನದಿಂದಾಗಿ ಸಿಗರೇಟು ಆರಾಧಕರು ಅದರ ತುದಿಯಲ್ಲಿನ ಕೆಂಡದಂತಾಗಿದ್ದರೆ, ಪರೋಕ್ಷವಾಗಿ ಹಾನಿಗೊಳಲಾಗುತ್ತಿದ್ದವರು ಗಾಳಿಗೆ ಮೇಲೆ ಹಾರಿದ ಹೊಗೆಯಂತೆ ನಿರಾಳರಾಗಿದ್ದಾರೆ. ಕನಿಷ್ಠಪಕ್ಷ ಇದರಿಂದ ಸ್ವಲ್ಪ ಮಟ್ಟಿನ ವಾಯುಮಾಲಿನ್ಯ ತಪ್ಪುತ್ತದೆಂದು ಸಿಗರೇಟು ವಿರೋಧಿಗಳು ಅಂದುಕೊಂಡರೂ ಅಚ್ಚರಿಯಿಲ್ಲ. [ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]

ಕೇಂದ್ರ ಬಜೆಟ್ಟಿನಲ್ಲಿ ಜೇಟ್ಲಿಯವರು ಸಿಗರೇಟು ದರ ಏರಿಸಿರುವುದನ್ನು ಸ್ವಾಗತಿಸಿ, ವಿರೋಧಿಸಿ ಹಲವಾರು ಟ್ವಿಟ್ಟಗರು ಟ್ವೀಟ್ ಮಾಡುತ್ತಿದ್ದಾರೆ. ಕೆಲವೊಂದು ಸ್ವಾರಸ್ಯಕರ ಟ್ವೀಟ್ ಗಳು ಮುಂದಿವೆ. ಓದಿ ಮಜಾ ಮಾಡಿ. [ಕೇಂದ್ರ ಬಜೆಟ್ 2014 ಮುಖ್ಯಾಂಶಗಳು]

ಟ್ವೀಟ್ ಓದುವ ಮುನ್ನ ಸಿಗರೇಟ್ ಬೆಲೆ ಎಷ್ಟಿದೆ?

ಟ್ವೀಟ್ ಓದುವ ಮುನ್ನ ಸಿಗರೇಟ್ ಬೆಲೆ ಎಷ್ಟಿದೆ?

ಪ್ರಸ್ತುತ ಈಗ ಮಾರುಕಟ್ಟೆಯಲ್ಲಿರುವ ಒಂದು ಸಿಗರೇಟ್ ಬೆಲೆ ಇಂತಿದೆ

ಗೋಲ್ಡ್ ಫ್ಲೇಕ್ : 10 ರು.

ವಿಲ್ಸ್ ಕ್ಲಾಸಿಕ್ : 10 ರು.

ಐಟಿಸಿ (ಚಿಕ್ಕದು) : 7 ರು.

ಐಟಿಸಿ (ದೊಡ್ಡದು) : 10 ರು.

ಮಾರ್ಲ್ಬೊರೊ : 10 ರು.

ಸಿಗರೇಟನ್ನು ಆಭರಣವಾಗಿ ಬಳಸಿ

ಸಿಗರೇಟಿನ ಮೇಲಿನ ಸುಂಕವನ್ನು ಏರಿಸಿದ್ದರಿಂದ ಧೂಮಪಾನಿಗಳು ಇನ್ನು ಮುಂದೆ ಸಿಗರೇಟನ್ನು ಆಭರಣವಾಗಿ ಧರಿಸಲಿದ್ದಾರೆ.

ಸಿಗರೇಟು ಸೇವನೆ ಜೇಬಿಗೂ ಹಾನಿಕರ!

ಹಳೆಯದು : ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ.

ಹೊಸದು : ಸಿಗರೇಟು ಸೇವನೆ ಜೇಬಿಗೂ ಹಾನಿಕರ!

ಸಿಗರೇಟು ಸೇವಿಸುವವರು ಬಡವರಲ್ಲ ಸ್ವಾಮೀ!

ತಂಬಾಕು ತುಟ್ಟಿಯಾಗುತ್ತಿರುವುದರಿಂದ ಬಾಲಿವುಡ್ ಮಂದಿ ಇನ್ನು ಮುಂದೆ ವಿಭಿನ್ನವಾಗಿ ಆಲೋಚಿಸಬೇಕಾಗಿದೆ.

ಸಿಗರೇಟ್ ಸುಗಂಧ ದ್ರವ್ಯದ ಬಿಸಿನೆಸ್ ಆರಂಭಿಸಿದರೆ

ಇನ್ನು ಮುಂದೆ ಸಿಗರೇಟ್, ಆಲ್ಕೋಹಾಲ್, ತಂಬಾಕು ಸುಗಂಧ ಸೂಸುವ ಉತ್ಪನ್ನಗಳ ಅಥವಾ ಸಿಗರೇಟ್ ಕಾಂಡೋಮ್ ತಯಾರಿಸುವ ಬಿಸಿನೆಸ್ ಶುರು ಮಾಡಿವುದು ಒಳ್ಳೆಯ ಐಡಿಯಾ.

ದೇಶದ ಒಳಿತಿಗಾಗಿ ಧೂಮಪಾನ ಮುಂದುವರಿಸುತ್ತೇನೆ

ಅಲ್ವೆ ಮತ್ತೆ? ಸಿಗರೇಟು ಹೆಚ್ಚು ಸೇವಿಸುವುದರಿಂದ ದೇಶದ ಆರ್ಥಿಕ ಸ್ಥಿತಿಯೂ ಉತ್ತಮವಾಗುತ್ತದೆ? ದೇಹದ ಆರೋಗ್ಯ ನೆಗೆದುಬಿದ್ದು ಹೋಗಲಿ!

ಸಿಗರೇಟ್ ಅಂಗಡಿಯ ಮುಂದೆ ದೊಡ್ಡ ಕ್ಯೂ ಅಂತೆ

ಸಿಗರೇಟ್ ರೇಟ್ ಏರಿಸಿರುವುದರಿಂದ ಪಾನ್ ಬೀಡಾ ಅಂಗಡಿಯ ಮುಂದೆ ಜನರು ಕ್ಯೂ ನಿಂತಿದ್ದಾರಂತೆ!

ಸಿಗರೇಟ್ ಪ್ಯಾಕೇಟು ಮತ್ತು ಖಾಲಿ ಪಾಕೀಟು!

ಇನ್ನು ಮುಂದೆ ಸಿಗರೇಟ್ ಪ್ಯಾಕ್ ಮೇಲೆ ಹದಗೆಟ್ಟು ಹೋಗಿರುವ ಶ್ವಾಸಕೋಶದ ಚಿತ್ರದ ಬದಲು ಖಾಲಿ ಪಾಕೀಟಿನ ಚಿತ್ರ ಬರಲಿದೆ!

ಬ್ಯಾಂಕಿಂದ ಸಿಗರೇಟಿಗಾಗಿ ಸಾಲ

ಬ್ಯಾಂಕುಗಳು ಸಿಗರೇಟ್ ಕೊಳ್ಳಲಿಕ್ಕೆಂದು ಆಕರ್ಷಕ ದರದಲ್ಲಿ ಗ್ರಾಹಕರಿಗೆ ಸಾಲ ನೀಡಲಿದೆಯಂತೆ!

ಸಿಗರೇಟಿಗೆ ಭಾರೀ ಬಿಗಿ ಭದ್ರತೆ

ಕಾರಲ್ಲಿ ಎರಡು ಪ್ಯಾಕೇಟ್ ಸಿಗರೇಟಿದೆ. ಅದನ್ನು ಕಾಯಲೆಂದು ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳನ್ನು ಕಳಿಸಿದ್ದೇನೆ.

ಸಿಗರೇಟು ಆರಾಧಕರು ಕ್ಯಾನ್ಸರಿಂದ ಸಾಯಲ್ಲ

ಸಿಗರೇಟು ಸೇದುವವರು ಕ್ಯಾನ್ಸರಿಂದ ಸಾಯುವುದಿಲ್ಲ. ಬದಲಾಗಿ, ಶಾಕ್ ನಿಂದ ಮತ್ತು ಆಘಾತದಿಂದ ಸಾಯುತ್ತಾರೆ.

ಬ್ಯಾಂಕ್ ಲಾಕರಲ್ಲಿ ಏನು ಸಿಕ್ಕಿದೆ ಗೊತ್ತಾ?

ಬ್ಯಾಂಕ್ ಲಾಕರಲ್ಲಿ ಕಳ್ಳನಿಗೆ ಏನು ಸಿಕ್ಕಿದೆ ಗೊತ್ತಾ? ಸಿಗರೇಟ್ ಪ್ಯಾಕ್!

ಗರ್ಲ್ ಫ್ರೆಂಡ್ ಪಟಾಯಿಸಲು ಇನ್ನೇನು ಬೇಕು?

ಗರ್ಲ್ ಫ್ರೆಂಡ್ ಪಟಾಯಿಸಲು ಇದಕ್ಕಿಂತ ಇನ್ನೇನು ಬೇಕು ಹೇಳಿ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union Budget 2014 : Arun Jaitley has given jolt to smokers by hiking excise duty on cigarettes between 11 to 72%. Few tweeples are making fun of it and many have welcomed it. Here are some funny tweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more