ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇತಿಹಾಸದ ಅತ್ಯಂತ ದುಬಾರಿ ಲೋಕಸಭಾ ಚುನಾವಣೆ

|
Google Oneindia Kannada News

ನವದೆಹಲಿ, ಮೇ 14: ಹದಿನಾರನೇ ಲೋಕಸಭಾ ಚುನಾವಣೆ ಸುದೀರ್ಘ ಒಂಬತ್ತು ಹಂತದಲ್ಲಿ ನಡೆದಿದ್ದು ಒಂದೆಡೆಯಾದರೆ, ಇದು ಇತಿಹಾಸದಲ್ಲಿನ ಅತ್ಯಂತ ದುಬಾರಿ ಲೋಕಸಭಾ ಚುನಾವಣೆಯೂ ಕೂಡಾ ಆಗಿದೆ.

ಹದಿನಾರನೇ ಲೋಕಸಭಾ ಚುನಾವಣೆಗೆ 3,426 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಇದು 2009ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಶೇ. 131ರಷ್ಟು ಹೆಚ್ಚು. 2009ರ ಚುನಾವಣೆಗೆ 1,483 ಕೋಟಿ ಖರ್ಚಾಗಿತ್ತು.

ಚುನಾವಣೆಗೆ ಇಷ್ಟು ಅಗಾಧ ಪ್ರಮಾಣದಲ್ಲಿ ಖರ್ಚಾಗಲು ಹಣದುಬ್ಬರ ಮತ್ತು ಮತದಾನದ ಹಂತಗಳು ಪ್ರಮುಖ ಕಾರಣ ಎನ್ನುವುದು ಚುನಾವಣಾ ಆಯೋಗ ನೀಡುತ್ತಿರುವ ಸ್ಪಷ್ಟೀಕರಣ. ಲೋಕಸಭಾ ಚುನಾವಣೆಗೆ ಆಗುವ ಖರ್ಚನ್ನು ಕೇಂದ್ರ ಸರಕಾರ ಭರಿಸಿದರೆ, ಕಾನೂನು ಸುವ್ಯವಸ್ಥೆಗೆ ತಗಲುವ ಖರ್ಚನ್ನು ಆಯಾಯ ರಾಜ್ಯ ಸರಕಾರಗಳು ಭರಿಸ ಬೇಕಾಗುತ್ತದೆ. (ಚುನಾವಣಾ ಅಕ್ರಮದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ)

16th LS election was most expensive Lok Sabha election ever in India

ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾದಂತೆ ಚುನಾವಣೆಯ ಖರ್ಚು ಹೆಚ್ಚಾಗುತ್ತದೆ. ಮತದಾನದ ಪ್ರಮಾಣ ಹೆಚ್ಚಿಸಲು ಆಯೋಗ ಕೈಗೊಂಡಿರುವ ಹಲವು ಕ್ರಮಗಳೂ ಖರ್ಚು ಹೆಚ್ಚಾಗಲು ಕಾರಣ ಎಂದು ಆಯೋಗ ತಿಳಿಸಿದೆ.

ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಮಾಡಬಹುದಾದ ಖರ್ಚಿನ ವೆಚ್ಚವನ್ನು ನಲವತ್ತು ಲಕ್ಷದಿಂದ ಎಪ್ಪತ್ತು ಲಕ್ಷಕ್ಕೆ ಏರಿಸಲಾಗಿತ್ತು. ಇದು ಕೂಡಾ ಚುನಾವಣೆಯ ಒಟ್ಟು ಖರ್ಚಿನ ಏರಿಕೆಯಲ್ಲಿ ಪ್ರಮುಖವಾದ ಅಂಶ ಎಂದು ಆಯೋಗ ತಿಳಿಸಿದೆ.

ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಕಪ್ಪು ಹಣ, ರಾಜಕೀಯ ಪಕ್ಷಗಳು ಮಾಡಿದ ವೆಚ್ಚ ಈ ಬಾರಿಯ ಚುನಾವಣೆಯನ್ನು ದುಬಾರಿ ಚುನಾವಣೆಯನ್ನಾಗಿಸಿದೆ.

ಒಟ್ಟು ಹದಿನಾರನೇ ಲೋಕಸಭಾ ಚುನಾವಣೆಯ ವೆಚ್ಚ 2012ರಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಆದ ಖರ್ಚಿಗೆ ಸಮೀಪವಾಗಿದೆ. ಅಮೆರಿಕಾದ ಚುನಾವಣೆಗೆ 42,000 ಸಾವಿರ ಕೋಟಿ ವೆಚ್ಚ ತಗುಲಿತ್ತು.

English summary
16th Lok Sabha Election was the most expensive Lok Sabha elections entailing a cost of Rs 3,426 crore. It is a substantial jump of 131 per cent over the expenses incurred in 2009 LS election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X