Everest Fish Curry Masala: ಎವರೆಸ್ಟ್ ಫಿಶ್ ಕರಿ ಮಸಾಲೆ ಬ್ಯಾನ್: ಕಾರಣ ಇಲ್ಲಿದೆ
ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ ಜನಪ್ರಿಯ ಮಸಾಲೆ ಉತ್ಪನ್ನವಾದ ಎವರೆಸ್ಟ್ ಫಿಶ್ ಕರಿ ಮಸಾಲಾವನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸಿಂಗಾಪುರ ಫುಡ್ ಏಜೆನ್ಸಿ ಸೂಚನೆ ನೀಡಿದೆ.
ಎವರೆಸ್ಟ್ ಫಿಶ್ ಕರಿ ಮಸಾಲೆಯಲ್ಲಿ ಕೀಟನಾಶಕ ಪದಾರ್ಥವಾದ ಎಥಿಲೀನ್ ಆಕ್ಸೈಡ್ ಹೆಚ್ಚಿನ ಮಟ್ಟದಲ್ಲಿದೆ ಎಂದು ಆರೋಪಿಸಿದೆ. ಹೀಗಾಗಿ ಈ ಮಸಾಲೆ ಮಿಶ್ರಣದಲ್ಲಿ ಮಾನವ ಬಳಕೆಗೆ ಸೂಕ್ತವಲ್ಲ ಎಂದು ಪರಿಗಣಿಸಲಾಗಿದೆ. ಈ ಬಗ್ಗೆ ಹಾಂಗ್ ಕಾಂಗ್‌ನ ಆಹಾರ ಸುರಕ್ಷತೆ ಕೇಂದ್ರವು ಎವರೆಸ್ಟ್ ಫಿಶ್ ಕರಿ ಮಸಾಲೆಯನ್ನು ಹಿಂಪಡೆಯುವ ಅಧಿಸೂಚನೆಯನ್ನು ಹೊರಡಿಸಿದೆ.

"ಮಿತಿಗಳನ್ನು ಮೀರಿದ ಮಟ್ಟದಲ್ಲಿ ಎಥಿಲೀನ್ ಆಕ್ಸೈಡ್ ಇರುವ ಕಾರಣದಿಂದ ಹಾಂಗ್ ಕಾಂಗ್‌ನ ಆಹಾರ ಸುರಕ್ಷತೆ ಕೇಂದ್ರವು ಭಾರತದಿಂದ ಎವರೆಸ್ಟ್ ಫಿಶ್ ಕರಿ ಮಸಾಲಾವನ್ನು ಹಿಂಪಡೆಯಲು ಅಧಿಸೂಚನೆಯನ್ನು ಹೊರಡಿಸಿದೆ" ಎಂದು ಸಿಂಗಾಪುರ್ ಫುಡ್ ಏಜೆನ್ಸಿ ಹೇಳಿಕೆಯಲ್ಲಿ ತಿಳಿಸಿದೆ.
SFA has directed the recall of Everest's Masala Fish Curry from India due to exceeding levels of ethylene oxide detected in the product. The recall is ongoing.https://t.co/mEDarMptR5 pic.twitter.com/6UnFtZUGQ6
— Singapore Food Agency (SFA) (@SGFoodAgency) April 18, 2024
ಹೀಗಾಗಿ ಕಡಿಮೆ ಗುಣಮಟ್ಟದ ಹಾಗೂ ಎಥಿಲೀನ್ ಆಕ್ಸೈಡ್ ಮಿಶ್ರಣ ಮಾಡಿದ ಪದಾರ್ಥವನ್ನು ಸೇವನೆ ಮಾಡುವುದರಿಂದ ತಕ್ಷಣಕ್ಕೆ ಯಾವುದೇ ಅಪಾಯಗಳು ಎದುರಾಗುವುದಿಲ್ಲ. ಆದರೆ, ದೀರ್ಘ ಕಾಲದಲ್ಲಿ ಇದು ಮನುಷ್ಯರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ, ಇದು ಕೀಟನಾಶಕದಂತಹ ಕೃಷಿ ಉತ್ಪನ್ನಗಳನ್ನು ತಯಾರಿಸಲು ಹಾಗೂ ಧೂಮಪಾನ ಮಾಡಲು ಮಾತ್ರ ಬಳಸಲಾಗುತ್ತದೆ. ಹೀಗಾಗಿ ಈ ಎವರೆಸ್ಟ್ ಫಿಶ್ ಕರಿ ಮಸಾಲೆಯನ್ನು ಜನರು ಬಳಸುವುದುನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂದು ಫುಡ್ ಏಜೆನ್ಸಿ ತಿಳಿಸಿದೆ.
ಇತ್ತೀಚಿಗೆ ಮಾನವ ಸೇವನೆ ಆಹಾರದಲ್ಲಿ ಕೀಟನಾಶಕಗಳ ಬಳಕೆ ಹೆಚ್ಚಾಗುತ್ತಿದೆ. ಇವುಗಳು ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇವುಗಳು ಕಾಲಕ್ರಮೇಣ ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಪ್ರತಿಯೊಂದು ಆರೋಗ್ಯ ಸಂಸ್ಥೆಯು ದೇಶದಲ್ಲಿ ಚಾಲ್ತಿಯಲ್ಲಿರುವ ಆಹಾರಗಳ ಮೇಲೆ ನಿಗಾ ವಹಿಸುತ್ತಿದೆ.












Click it and Unblock the Notifications