Get Updates
Get notified of breaking news, exclusive insights, and must-see stories!

Mobile Sim: ಮೊಬೈಲ್‌ಗೆ ಸಿಮ್ ಪಡೆಯುವ ಮೊದಲು ಈ ಸುದ್ದಿ ಓದಿ!

ಮನುಷ್ಯನ ಕೈಗೆ ಅನ್ನ ಸಿಗದಿದ್ರೂ ಆಧುನಿಕ ಕಾಲದಲ್ಲಿ ಮೊಬೈಲ್ ಮಾತ್ರ ಬೇಕೇ ಬೇಕು. ಒಂದು ಕಾಲದಲ್ಲಿ ಊರಿಗೆ ಒಬ್ಬರೋ, ಇಬ್ಬರೋ ಮೊಬೈಲ್ ಬಳಸುತ್ತಿದ್ದರು. ಆದ್ರೆ ಈಗ ಹುಟ್ಟಿದ ಮಗು ಕೂಡ ಕೈಯಲ್ಲಿ ಮೊಬೈಲ್ ಹಿಡಿದು ಸ್ಟೈಲ್ ತೋರಿಸಿ ಸ್ಮೈಲ್ ಕೊಡುತ್ತೆ. ಆದರೆ ಮೊಬೈಲ್ ಹಾವಳಿ ಹೆಚ್ಚಾದಂತೆಲ್ಲಾ ಸಿಮ್ ಕಾರ್ಡ್ ದುರ್ಬಳಕೆ ಜಾಸ್ತಿ ಆಗುತ್ತಿದೆ. ಈ ಕಾರಣಕ್ಕೆ ಸಿಮ್ ಪಡೆಯಲು ನಿಯಮ ಕಠಿಣಗೊಳಿಸಿದೆ ಟೆಲಿಕಾಂ ಇಲಾಖೆ. ಈ ಹೊಸ ನಿಯಮ ಶುಕ್ರವಾರವೇ ಜಾರಿಗೆ ಬರಲಿದೆ.

ಭಾರತದ ಜನಸಂಖ್ಯೆ ಒಂದೂವರೆ ಶತಕೋಟಿ. ಅಂದರೆ ಸುಮಾರು 150 ಕೋಟಿಯಷ್ಟಿದೆ. ಹೀಗಾಗಿಯೇ ಮೊಬೈಲ್ ಸಿಮ್ ಖರೀದಿ ಮೇಲೆ ಬಿಗಿ ನಿಯಮ ಹೇರಿ, ಯಾವ ಕಾರಣಕ್ಕೂ ದುರ್ಬಳಕೆ ಆಗದಂತೆ ಕ್ರಮ ವಹಿಸಲು ಸಿದ್ಧತೆ ನಡೆಸಲಾಗಿದೆ. ಹಾಗಾದರೆ ಏನದು ರೂಲ್ಸ್? ಸಿಮ್ ಕಾರ್ಡ್ ಖರೀದಿಗೆ ಹೊಸ ರೂಲ್ಸ್ ಯಾವಾಗ ಜಾರಿ ಆಗಲಿದೆ? ಇನ್ಮುಂದೆ ನೀವುಗಳು ಸಿಮ್ ಕಾರ್ಡ್ ಪಡೆಯಲು ಅನುಸರಿಸಬೇಕಾದ ನಿಯಮಗಳು ಯಾವು? ಈ ಎಲ್ಲಾ ಪ್ರಶ್ನೆಗೆ ಉತ್ತರ ಇಲ್ಲೇ ಇದೆ, ಮುಂದೆ ಓದಿ.

sim card rules changed and you should know these things before buying new sim after december 1 2023

ಏನೆಲ್ಲಾ ಹೊಸ ನಿಯಮ ಬರಲಿದೆ?

ಹೌದು, ಸಿಮ್ ಕಾರ್ಡ್‌ಗಳ ಮೋಸದ ಮಾರಾಟವನ್ನು ತಡೆಯಲು ಭಾರತದ ಟೆಲಿಕಾಂ ಇಲಾಖೆ 2023ರ ಆಗಸ್ಟ್‌ನಲ್ಲಿ ಟೆಲಿಕಾಂ ಆಪರೇಟರ್‌ಗಳಿಗೆ ಹೊಸ ನಿಯಮ ಜಾರಿಗೊಳಿಸಿತ್ತು. ಈ ಹೊಸ ನಿಯಮ ಅಕ್ಟೋಬರ್ 1 ರಿಂದ ಜಾರಿಗೆ ಬರುತ್ತೆ ಎನ್ನಲಾಗಿತ್ತು. ಆದ್ರೆ ಸಿಮ್ ಖರೀದಿ ಹೊಸ ನಿಯಮ ಮುಂದೂಡಿಕೆ ಆಗಿದ್ದ ಹಿನ್ನೆಲೆ ಡಿಸೆಂಬರ್ 1 ರಿಂದ ಜಾರಿಗೆ ಬರಲಿದೆ. ಹಾಗಾದ್ರೆ ಈ ಹೊಸ ರೂಲ್ಸ್ ಸಿಮ್ ಖರೀದಿ ಬಗ್ಗೆ ಹೇಳುವುದು ಏನು?

10 ಲಕ್ಷ ರೂಪಾಯಿ ದಂಡ!

1). ರಿಜಿಸ್ಟರ್​ ಅಂದರೆ ನೋಂದಣಿ ಮಾಡಿಸಿಕೊಳ್ಳದ ಡೀಲರ್‌ ಮೂಲಕ ಸಿಮ್ ಕಾರ್ಡ್‌ಗಳ ಮಾರಾಟ ಮಾಡಿಸಿದರೆ ಟೆಲಿಕಾಂ ಆಪರೇಟರ್‌ ಮೇಲೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತೆ.

sim card rules changed and you should know these things before buying new sim after december 1 2023

2). ವ್ಯಾಪಾರ ಸಂಪರ್ಕದ ಮೂಲಕ ಮಾತ್ರ ಸಿಮ್ ಕಾರ್ಡ್‌ನ ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಲು ಅನುಮತಿ ಜಾರಿಯಲ್ಲಿ ಇರಲಿದೆ. ಆದರೆ ಸಾಮಾನ್ಯ ಬಳಕೆದಾರರು ಹಿಂದಿನಂತೆ ಒಂದು ಐಡಿ ಕೊಟ್ಟು 9 ಸಿಮ್ ಕಾರ್ಡ್‌ ಪಡೆಯಬಹುದು.

3). ಅಕಸ್ಮಾತ್ ಸಿಮ್​ ಕಾರ್ಡ್ ಒಂದು ಬಳಕೆ ಆಗದೇ ಇದ್ರೆ, ಅದನ್ನ ಕ್ಲೋಸ್​ ಆದ 90 ದಿನ ಬಳಿಕ ಮಾತ್ರ ಬೇರೆ ಗ್ರಾಹಕರಿಗೆ ಆ ಸಂಖ್ಯೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.

4). ಮತ್ತೊಂದ್ಕಡೆ ಅಸ್ತಿತ್ವದಲ್ಲಿ ಇರುವ ಫೋನ್ ಸಂಖ್ಯೆಗೆ, ಸಿಮ್ ಕಾರ್ಡ್‌ ಖರೀದಿಸುವವರು ಆಧಾರ್ & ಇತರ ಡೆಮೊಗ್ರಾಫಿಕ್​ ಡೇಟಾ ಸಲ್ಲಿಸಬೇಕಾಗುತ್ತೆ ಎಂದು ಮಾಹಿತಿ ನೀಡಲಾಗಿದೆ.

5). ಮೊದಲೆ ಹೇಳಿದಂತೆ ರಿಜಿಸ್ಟರ್​ ಆಗದ ಡೀಲರ್‌ಗಳ‌ ಮೂಲಕ ಸಿಮ್ ಕಾರ್ಡ್ ಮಾರಾಟ ಮಾಡಿಸಿದರೆ 10 ಲಕ್ಷ ರೂ. ದಂಡದ ಜೊತೆಗೆ, ಅಂತಹ ಡೀಲರ್ಸ್ ಮೂಲಕ ಪಡೆದ ಸಿಮ್​ ಕಾರ್ಡ್ & ಫೋನ್​​ ನಂಬರ್ ಮರು ಪರಿಶೀಲನೆ ಮಾಡಲು ನಿರ್ಧರಿಸಲಾಗಿದೆ.

ಮತ್ತಷ್ಟು ರೂಲ್ಸ್ ಕೂಡ ಚೇಂಜ್

ಇಷ್ಟೇ ಅಲ್ಲದೆ, ಈಗ ಅಸ್ತಿತ್ವದಲ್ಲಿ ಇರುವ ಪಾಯಿಂಟ್‌ ಆಫ್‌ ಸೇಲ್‌ (ಪಿಒಎಸ್‌) ನವೆಂಬರ್ ಅಂತ್ಯದೊಳಗೆ ದಾಖಲೆ ಸಲ್ಲಿಸಬೇಕು ಮತ್ತು ನೋಂದಾಯಿಸಿಕೊಳ್ಳಬೇಕು. ಪಿಒಎಸ್‌ ಅಥವಾ ಚಿಲ್ಲರೆ ವ್ಯಾಪಾರಿಗಳು ನೋಂದಣಿಗೆ ಕಾರ್ಪೊರೇಟ್ ಗುರುತಿನ ನಂಬರ್ (CIN) & ಲಿಮಿಟೆಟ್​ ಲಯಾಬಿಲಿಟಿ ಪಾರ್ಟ್ನರ್​ಶಿಪ್​ ಐಡೆಂಟಿಫಿಕೇಶನ್​ ನಂಬರ್​ (LLPIN), ವ್ಯಾಪಾರ ಪರವಾನಗಿ, ಆಧಾರ್ ಕಾರ್ಡ್​ ಅಥವಾ ಪಾಸ್‌ಪೋರ್ಟ್, ಪಾನ್​ ಕಾರ್ಡ್​, ಸರಕು & ಸೇವಾ ತೆರಿಗೆ (GST) ನೋಂದಣಿ ಪ್ರಮಾಣಪತ್ರ ಇತ್ಯಾದಿ ಒದಗಿಸಬೇಕಾಗುತ್ತದೆ. ಹಾಗೇ ಇನ್ನೂ ಅನೇಕ ರೂಲ್ಸ್ ಬದಲಾಗಿದ್ದು, ಸಿಮ್ ಕಾರ್ಡ್ ಖರೀದಿ & ಮಾರಾಟದಲ್ಲಿ ಭಾರಿ ಬದಲಾವಣೆಯಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+