ವಾಹನಗಳ ಮೇಲೆ 'ಪ್ರಾಣಿಗಳ ಮೇಲೆ ದಯೆ ಇರಲಿ' ಸ್ಟಿಕ್ಕರ್ ಕಡ್ಡಾಯ: ಮೂಕ ಜೀವಿಗಳ ರಕ್ಷಣೆಗೆ ಸರ್ಕಾರದ ಮಹತ್ವದ ಹೆಜ್ಜೆ

ರಸ್ತೆಗಳು ಕೇವಲ ಮನುಷ್ಯರಿಗೆ ಮಾತ್ರವಲ್ಲ, ಈ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ, ಪ್ರಾಣಿಗಳಿಗೂ ಸೇರಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ವೇಗವಾಗಿ ಚಲಿಸುವ ವಾಹನಗಳ ಅಬ್ಬರಕ್ಕೆ ಸಿಲುಕಿ ಪ್ರತಿದಿನ ನೂರಾರು ಮೂಕ ಪ್ರಾಣಿಗಳು, ಬೀದಿ ನಾಯಿಗಳು ಹಾಗೂ ಕಾಡು ಪ್ರಾಣಿಗಳು ಹೆದ್ದಾರಿಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವ ಹಾಗೂ ವಾಹನ ಸವಾರರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಿಕ್ಕಿಂ ರಾಜ್ಯ ಸರ್ಕಾರ ಒಂದು ಅತ್ಯುತ್ತಮ ಹೆಜ್ಜೆ ಇಟ್ಟಿದೆ.

ನೋಡಲು ಇದೊಂದು ಸಣ್ಣ ಸ್ಟಿಕ್ಕರ್ ರೀತಿ ಕಂಡರೂ, ಅದರಲ್ಲಿ ಅಡಗಿರುವ ಸಂದೇಶ ಹಾಗೂ ಅದರ ಉದ್ದೇಶ ಮಾತ್ರ ಬಹಳ ದೊಡ್ಡದು. ಹೌದು, ಸಿಕ್ಕಿಂ ರಾಜ್ಯದಲ್ಲಿ ಇನ್ನು ಮುಂದೆ ಎಲ್ಲಾ ಟ್ಯಾಕ್ಸಿ ಮತ್ತು ಇತರ ಸಾರ್ವಜನಿಕ ಸಾರಿಗೆ ವಾಹನಗಳ ಮೇಲೆ 'ಪ್ರಾಣಿಗಳ ಮೇಲೆ ದಯೆ ಇರಲಿ' (Be Kind to Animals) ಎಂಬ ವಾಕ್ಯವನ್ನ ಕಡ್ಡಾಯವಾಗಿ ಪ್ರದರ್ಶಿಸಬೇಕಾಗಿದೆ. ಈ ಮೂಲಕ ಪ್ರಾಣಿಗಳ ರಕ್ಷಣೆಗೆ ಮತ್ತು ಮಾನವೀಯತೆಗೆ ಹೊಸ ಭಾಷ್ಯ ಬರೆಯಲಾಗಿದೆ.

Sikkim Mandates Be Kind To Animals Stickers On All Public Transport Vehicles To Save Wildlife

ಸಿಕ್ಕಿಂ ಸಾರಿಗೆ ಇಲಾಖೆಯ ಹೊಸ ನಿಯಮ: ಅಕ್ಟೋಬರ್ 2025ರ ಆದೇಶ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನಿರ್ದೇಶನದ ಮೇರೆಗೆ, ಸಿಕ್ಕಿಂನ ಸಾರಿಗೆ ಇಲಾಖೆಯು ಅಕ್ಟೋಬರ್ 2025ರಲ್ಲಿ ಈ ಮಹತ್ವದ ಆದೇಶವನ್ನ ಅಧಿಕೃತವಾಗಿ ಹೊರಡಿಸಿದೆ. ಈ ಹೊಸ ನಿಯಮದ ಪ್ರಕಾರ, ರಾಜ್ಯದಾದ್ಯಂತ ಸಂಚರಿಸುವ ಟ್ಯಾಕ್ಸಿ, ಬಸ್, ಜೀಪು ಸೇರಿದಂತೆ ಎಲ್ಲಾ ಸಾರ್ವಜನಿಕ ಸಾರಿಗೆ ವಾಹನಗಳ ಮುಂಭಾಗ ಮತ್ತು ಹಿಂಭಾಗದಲ್ಲಿ ಈ ಸಂದೇಶವನ್ನ ಸ್ಪಷ್ಟವಾಗಿ ಕಾಣುವಂತೆ ಕಡ್ಡಾಯವಾಗಿ ಅಂಟಿಸುವುದು ಅಥವಾ ಬರೆಯಿಸುವುದು ಮುಖ್ಯ.

ಪ್ರಾಣಿಗಳ ಸುರಕ್ಷತೆಯ ಬಗ್ಗೆ ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸುವ ಹಾಗೂ ರಸ್ತೆ ಅಪಘಾತಗಳನ್ನ ತಡೆಯುವ ಉದ್ದೇಶದಿಂದ ಇಲಾಖೆಯು ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಮೂಕ ಜೀವಿಗಳ ಉಳಿವಿಗಾಗಿ ಯೋಜನೆ

ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಕೆಲವೊಮ್ಮೆ ದಿಢೀರನೆ ಪ್ರಾಣಿಗಳು ಅಡ್ಡ ಬರುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಅತಿ ವೇಗವಾಗಿ ಬರುವ ವಾಹನಗಳು ನಿಯಂತ್ರಣ ತಪ್ಪಿ ಪ್ರಾಣಿಗಳಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಪ್ರಾಣಿಗಳು ಸಾವನ್ನಪ್ಪುವ ಜೊತೆಗೆ ವಾಹನ ಸವಾರರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ, ವಾಹನದ ಮೇಲಿರುವ 'ಪ್ರಾಣಿಗಳ ಮೇಲೆ ದಯೆ ಇರಲಿ' ಎಂಬ ಈ ಸಣ್ಣ ಸಂದೇಶ ಚಾಲಕರಿಗೆ ಒಂದು ರೀತಿಯ ಎಚ್ಚರಿಕೆಯಂತೆ ಕೆಲಸ ಮಾಡುತ್ತದೆ.

ರಸ್ತೆಯು ಕೇವಲ ಮನುಷ್ಯರದ್ದಲ್ಲ, ಪ್ರಾಣಿಗಳಿಗೂ ಇದು ಸೇರಿದೆ ಎಂಬುದನ್ನ ಈ ವಾಕ್ಯ ನೆನಪಿಸುತ್ತದೆ. ಈ ಸಂದೇಶವನ್ನ ನೋಡಿದ ತಕ್ಷಣ ಚಾಲಕರು ತಮ್ಮ ವಾಹನದ ವೇಗವನ್ನ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳುತ್ತಾರೆ ಹಾಗೂ ಸುತ್ತಮುತ್ತಲಿನ ಪರಿಸರದ ಬಗ್ಗೆ ಹೆಚ್ಚು ಗಮನ ಹರಿಸಲು ಪ್ರೇರೇಪಿತರಾಗುತ್ತಾರೆ. ಇದರಿಂದ ಎಷ್ಟೋ ಮೂಕ ಜೀವಿಗಳ ಜೀವ ಉಳಿಯುತ್ತದೆ.

ಸಾರ್ವಜನಿಕ ಸಾರಿಗೆ ವಾಹನಗಳ ಮೂಲಕ ವ್ಯಾಪಕ ಜಾಗೃತಿ

ಟ್ಯಾಕ್ಸಿಗಳು ಮತ್ತು ಸಾರ್ವಜನಿಕ ಸಾರಿಗೆ ವಾಹನಗಳು ಪ್ರತಿದಿನ ಊರಿಂದ ಊರಿಗೆ ನೂರಾರು ಕಿಲೋಮೀಟರ್ ಪ್ರಯಾಣಿಸುತ್ತವೆ. ಹೀಗಾಗಿ ಈ ವಾಹನಗಳ ಮೇಲೆ ಇಂತಹ ಸಂದೇಶವಿರುವ ಸ್ಟಿಕ್ಕರ್ ಅಂಟಿಸುವುದರಿಂದ, ಆ ವಾಕ್ಯವು ಪ್ರತಿದಿನ ಸಾವಿರಾರು ಜನರನ್ನ ತಲುಪಲು ಸಾಧ್ಯವಾಗುತ್ತದೆ.

ಕೇವಲ ಚಾಲಕರಿಗೆ ಮಾತ್ರವಲ್ಲದೆ, ಆ ವಾಹನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೂ, ಪಾದಚಾರಿಗಳಿಗೂ ಹಾಗೂ ರಸ್ತೆಯಲ್ಲಿ ಹೋಗುವ ಇತರ ವಾಹನ ಸವಾರರಿಗೂ ಪ್ರಾಣಿ ದಯೆಯ ಬಗ್ಗೆ ಅರಿವು ಮೂಡುತ್ತದೆ. ಕೆಲವೊಮ್ಮೆ ಒಂದು ಸಣ್ಣ ಜ್ಞಾಪನೆ ಅಥವಾ ಸಂದೇಶ ನಮ್ಮ ಆಲೋಚನಾ ಕ್ರಮವನ್ನೇ ಬದಲಾಯಿಸುವ ಶಕ್ತಿ ಹೊಂದಿರುತ್ತದೆ.

ರಸ್ತೆಯಲ್ಲಿ ಪ್ರಾಣಿಗಳು ಕಂಡಾಗ ವಾಹನದ ಹಾರ್ನ್ ಮಾಡಿ ಬೆದರಿಸುವ ಬದಲು, ಸ್ವಲ್ಪ ತಾಳ್ಮೆಯಿಂದ ಕಾಯುವ, ವಾಹನವನ್ನ ನಿಧಾನವಾಗಿ ಚಲಾಯಿಸುವ ಮನೋಭಾವವನ್ನು ಬೆಳೆಸಿಕೊಳ್ಳಲು ಇದು ಅತ್ಯಂತ ಸಹಕಾರಿಯಾಗಿದೆ.

ಒಟ್ಟಿನಲ್ಲಿ ಪ್ರಾಣಿ ಸಂರಕ್ಷಣೆಯ ನಿಟ್ಟಿನಲ್ಲಿ ಸಿಕ್ಕಿಂ ಸರ್ಕಾರದ ಈ ನಿರ್ಧಾರ ನಿಜಕ್ಕೂ ಶ್ಲಾಘನೀಯ ಹಾಗೂ ಇತರರಿಗೆ ಮಾದರಿ. ಅಭಿವೃದ್ಧಿಯ ಭರದಲ್ಲಿ ಮತ್ತು ವೇಗದ ಬದುಕಿನಲ್ಲಿ ಮೂಕ ಪ್ರಾಣಿಗಳ ಜೀವಕ್ಕೆ ಬೆಲೆ ಕೊಡಲು ಮರೆಯುತ್ತಿರುವ ಇಂದಿನ ದಿನಗಳಲ್ಲಿ, ಇಂತಹದ್ದೊಂದು ಜಾಗೃತಿ ಅಭಿಯಾನ ಪ್ರತಿಯೊಂದು ರಾಜ್ಯಕ್ಕೂ ಅಗತ್ಯವಿದೆ.

ರಸ್ತೆಗಳು ಕೇವಲ ನಮಗಾಗಿ ಮಾತ್ರವಲ್ಲ, ಪ್ರಾಣಿಗಳಿಗೂ ಸೇರಿವೆ ಎಂಬುದನ್ನ ಅರಿತು, ಅವುಗಳ ರಕ್ಷಣೆಗೆ ಮುಂದಾಗುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+