Pension: ರಾಜಕಾರಣಿಗಳಿಗೆ ಜೀವಮಾನ ಪಿಂಚಣಿ ಬೇಕಾ? ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ..Viral

Viral News: ಶಾಕಸರಾಗಲಿ, ಸಂಸದರಾಗಲಿ ಚುನಾಯಿತ ಪ್ರತಿನಿಧಿಗಳು ಪಡೆಯುವ ಜೀವಮಾನ ಪಿಂಚಣಿ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಸರ್ಕಾರಿ ನೌಕರರು ಪಿಂಚಣಿ ಪಡೆಯಲು ದೀರ್ಘ ಕಾಲದ ನಿಯಮಗಳಿವೆ. ಕನಿಷ್ಠ ಅವರು ಹತ್ತು ವರ್ಷ ಸೇವೆ ಮಾಡಿರಬೇಕು. ನಿವೃತ್ತಿ ಬಳಿಕ ಅವರಿಗೆ ನಿಯಮಗಳಡಿ ಪಿಂಚಣಿ ಪಡೆಯುತ್ತಾರೆ. ಆದರೆ ರಾಜಕಾರಣಿಗಳು ಒಂದು ದಿನ ಸೇವೆ ಮಾಡಿದರೂ ಮಾಸಿಕ ಭಾರೀ ಮೊತ್ತ ಪಡೆಯುತ್ತಾರೆ. ಇವರಿಗಿರುವ ನಿಯಮಗಳು, ಪಿಂಚಣಿ ನೀಡುವ ಅಗತ್ಯತೆ ಬಗ್ಗೆ ಆನ್‌ಲೈನ್‌ನಲ್ಲಿ ಚರ್ಚೆಯಾಗುತ್ತಿದೆ.

ಜನಪ್ರತಿನಿಧಿಗಳಿಗೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ದರದಲ್ಲಿ ನೀಡಲಾಗುವ ಜೀವಮಾನ ಪಿಂಚಣಿ ಸೌಲಭ್ಯದ ಅಗತ್ಯವಿದೆಯೇ? ಜನರ ತೆರಿಗೆ ದುಡ್ಡು ಈ ರೀತಿ ಬಳಕೆ ಆಗುವುದು ಸರಿಯೇ ಎಂದು ಮಹಿಳೆಯೊಬ್ಬರು ಹಾಲಿ ನಿಯಮಗಳನ್ನು ಪ್ರಶ್ನಿಸಿದ್ದಾರೆ. ಸದ್ಯ ಆ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಲಿಂಕ್‌ ಇನ್‌ನಲ್ಲಿ ಹಂಚಿಕೊಂಡು ಸರ್ಕಾರವನ್ನು ಪ್ರಶ್ನಿಸಿದ್ದಲ್ಲದೇ, ಜನರಿಗೆ ನಿಮ್ಮ ಅಭಿಪ್ರಾಯ ತಿಳಿಸುವಂತೆ ಕೇಳಿದ್ದಾರೆ.

Lifetime Pension

ಮಾಸಿಕ ಕನಿಷ್ಠ ಪಿಂಚಣಿಯೇ ₹31,000

ಮೊದಲಿಗೆ ಮಾಜಿ ಸಂಸದರಿಗೆ ತಿಂಗಳಿಗೆ ಕನಿಷ್ಠ ₹31,000 ಮೂಲ ಪಿಂಚಣಿ ಸಿಗುತ್ತದೆ. 5 ವರ್ಷಗಳ ಅವಧಿಗಿಂತ ಹೆಚ್ಚು ಕಾಲ ಸಂಸದರಾಗಿ ಸೇವೆ ಸಲ್ಲಿಸಿದರೆ ಅಂಥವರಿಗೆ ಪ್ರತಿ ಹೆಚ್ಚುವರಿ ವರ್ಷಕ್ಕೆ ತಿಂಗಳಿಗೆ ₹2,500 ರಂತೆ ಪಿಂಚಣಿ ಮೊತ್ತ ಹೆಚ್ಚಾಗುತ್ತಾ ಹೋಗುತ್ತದೆ. ನಾಯಕರು ಒಂದೇ ಒಂದು ದಿನ ಶಾಸಕರಾಗಿ, ಸಂಸದರಾಗಿ ಕಳೆದರೂ, ಇಲ್ಲವೇ ಪ್ರಮಾಣ ವಚನ ಸ್ವೀಕರಿಸಿ ಒಂದು ದಿನ ಸೇವೆ ಮಾಡಿದರು ನಿಯಮಗಳಡಿ ಅವರು ಈ ಜೀವಮಾನ ಪಿಂಚಣಿಗೆ ಅರ್ಹರಾಗುತ್ತಾರೆ. ಅದೆಷ್ಟೋ ಜನಸಾಮಾನ್ಯರ/ಹಿರಿಯ ಜೀವಗಳು ಪಿಂಚಣಿಯು ತಿಂಗಳುಗಳು, ವರ್ಷಗಳಿಂದ ಸಿಗದೇ ಪರತಪಿಸುತ್ತಿದ್ದಾರೆ. ಅವರ ಬಗ್ಗೆ ತಲೆ ಕೆಡಸಿಕೊಳ್ಳುವವರಿಲ್ಲದಾಗಿದೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.

ಚುನಾಯಿತ ಪ್ರತಿನಿಧಿಗಳಿಗೆ ಜೀವಮಾನ ಪಿಂಚಣಿ ಬೇಕೇ?

ಸಂಸದೀಯ ಸದಸ್ಯರನ್ನು ನಿಯಂತ್ರಿಸುವ ನಿಯಮಗಳ ಅಡಿಯಲ್ಲಿ, ಸಂಸದರಾಗಿ ಸೇವೆ ಸಲ್ಲಿಸಿದ ವ್ಯಕ್ತಿಯು ಅನ್ವಯವಾಗುವ ನಿಬಂಧನೆಗಳಿಗೆ ಒಳಪಟ್ಟು ಮಾಸಿಕ ಪಿಂಚಣಿಗೆ ಅರ್ಹರಾಗಬಹುದು. ಹಲವಾರು ರಾಜ್ಯಗಳಲ್ಲಿನ ಮಾಜಿ ಶಾಸಕರಿಗೂ ಇದೇ ರೀತಿಯ ವ್ಯವಸ್ಥೆಗಳು ಅಸ್ತಿತ್ವದಲ್ಲಿವೆ, ಈ ನಿಯಮಗಳು ರಾಜ್ಯಗಳಲ್ಲಿ ಕೊಂಚ ಭಿನ್ನವಾಗಿವೆ.

ಇದು ಕೇಲವ ಪಿಂಚಣಿ ಬಗಿಗಿನ ಚರ್ಚೆ ಮಾತ್ರವಲ್ಲ, ಜನಪ್ರತಿನಿಧಿಗಳಿಗೆ ಪಿಂಚಣಿ ನೀಡುವುದು ನ್ಯಾಯಯುತವಾ, ಹೊಣೆಗಾರಿಕೆ ಮತ್ತು ಸಾರ್ವಜನಿಕ ಹಣದ ಬಳಕೆಯ ದುರ್ಬಳಕೆ ಎಂಬ ಪ್ರಶ್ನೆ ಉದ್ಭವವಾಗಿದೆ. ಸಾಮಾನ್ಯ ನಾಗರಿಕರು ತಮ್ಮ ನಿವೃತ್ತಿಗೆ ಯೋಜನೆ ರೂಪಿಸಿ ಕೊಡುಗೆ ನೀಡಬೇಕೆಂದು ನಿರೀಕ್ಷಿಸಿದರೆ, ಚುನಾಯಿತ ಪ್ರತಿನಿಧಿಗಳಿಗೆ ಪಿಂಚಣಿ ನಿಬಂಧನೆಗಳು ವಿಭಿನ್ನ ಚೌಕಟ್ಟನ್ನು ಅನುಸರಿಸಬೇಕೇ? ಎಂದು ಈ ಲಿಂಕ್ಡ್ ಇನ್ ಪೋಸ್ಟ್‌ನಲ್ಲಿ ಕೇಳಲಾಗಿದೆ.

ಪಾರದರ್ಶಕ, ಸಮಾನ ನಿಯಮ ಅನುಸರಿಸಲಾಗುತ್ತಿದೆಯೇ?

ಒಂದು ವೇಳೆ ನೀವು ಪಿಂಚಣಿ ಸೌಲಭ್ಯ ನೀಡುವುದಾದರೆ ಸಾರ್ವಜನಿಕ ಪ್ರತಿನಿಧಿಗಳಿಗೆ ನಿವೃತ್ತಿ ಪ್ರಯೋಜನಗಳನ್ನು ಒದಗಿಸುವ ಮುನ್ನ ಸಾಂವಿಧಾನಿಕ, ಕಾನೂನು ಮತ್ತು ಪ್ರಾಯೋಗಿಕ ಅಂಶಗಳನ್ನು ಪರಿಗಣಿಸಬೇಕು ಎಂದು ಒತ್ತಾಯವು ಕೇಳಿ ಬಂದಿದೆ. ಅಲ್ಲದೇ ಯಾವ ನಿಯಮಗಳಡಿ ಅವರಿಗೆ ಪಿಂಚಣಿ ನೀಡಲಾಗುತ್ತಿದಿಯೋ ಆ ನಿಯಮಗಳು ಪಾರದರ್ಶಕವಾಗಿವೆಯೇ? ಸಮಾನ ಮತ್ತು ಸಾರ್ವಜನಿಕ ನಿರೀಕ್ಷೆಗಳಿಗೆ ಹೊಂದಿಕೆಯಾಗುವಂತೆ ಇವೆಯೇ ಎಂಬುದನ್ನು ಪರಿಶೀಲಿಸಬೇಕೇ? ಎಂದು ಒತ್ತಾಯಿಸಲಾಗಿದೆ.

ಇನ್‌ಸ್ಟಾಗ್ರಾಮ್ ಪೋಸ್ಟ್ ವೊಂದರಲ್ಲಿ, 'ಖಾಸಗಿ ವಲಯದ ಅನೇಕ ಸಾಮಾನ್ಯ ಕಾರ್ಮಿಕರಿಗೆ ಖಾತರಿಪಡಿಸಿದ ಪಿಂಚಣಿ ಅಥವಾ ಅಂತಹುದೇ ನಿವೃತ್ತಿ ಪ್ರಯೋಜನಗಳು ಇಲ್ಲದಿರುವಾಗ ತೆರಿಗೆದಾರರು ರಾಜಕಾರಣಿಗಳಿಗೆ ಜೀವಮಾನದ ಪ್ರಯೋಜನಗಳನ್ನು ನೀಡಬೇಕೇ? ಎಂದು ಕೇಳಲಾಗಿದೆ. ಸದ್ಯ ಈ ಬಗೆಗಿನ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+