ಮಿಚಿಗನ್: ಭಯೋತ್ಪಾದಕನೆಂದು ಹೇಳಿ ಭಾರತೀಯನಿಗೆ ಗುಂಡೇಟು
ಮಿಚಿಗನ್ ನ ಅಂಗಡಿಯಲ್ಲಿ ಗುಮಾಸ್ತನಾಗಿದ್ದ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಅಪರಿಚಿತನಿಂದ ಗುಂಡಿನ ದಾಳಿ. ಘಟನೆಯಲ್ಲಿ ಗಾಯಗೊಂಡಿರುವ ಭಾರತ ಮೂಲದ ಇಂದರ್ಜೀತ್ ಸಿಂಗ್.
ನ್ಯೂಯಾರ್ಕ್, ಜೂ. 13: ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡಿಟ್ಟು ಗಾಯಗೊಳಿಸಿದ ಘಟನೆ ಮಿಚಿಗನ್ ನಗರದಲ್ಲಿ ನಡೆದಿದೆ.
ಇಲ್ಲಿನ ಅಂಗಡಿಯೊಂದರಲ್ಲಿ ಗುಮಾಸ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಂದರ್ಜಿತ್ ಸಿಂಗ್ ಎಂಬುವರ ಮೇಲೆ ಈ ಹಲ್ಲೆ ನಡೆದಿದೆ.

ಅಂಗಡಿಗೆ ಬಂದಿದ್ದ ವ್ಯಕ್ತಿ ಇಂದರ್ಜಿತ್ ಸಿಂಗ್ ಜತೆಗೆ ಕಾಲು ಕೆರೆದು ಜಗಳವಾಡಿದ್ದಾನೆ. ಅಲ್ಲದೆ, ಇಂದರ್ಜಿತ್ ಅವರನ್ನು ಭಯೋತ್ಪಾದಕ ಎಂದು ನಿಂದಿಸಿದ್ದಾನೆ. ಇದರಿಂದ ರೇಗಿದ ಇಂದರ್ಜಿತ್ ಕೂಡ ಜಗಳವಾಡಿದ್ದಾರೆ. ಆ ಸಂದರ್ಭದಲ್ಲಿ ತನ್ನ ಕಿಸೆಯಿಂದ ಪಿಸ್ತೂಲು ತೆಗೆದ ಆ ಅಪರಿಚಿತ ಗುಂಡು ಹಾರಿಸಿದ್ದಾನೆ. ಆತನ ಪಿಸ್ತೂಲಿನಿಂದ ಸಿಡಿದ ಗುಂಡು ಆ ವ್ಯಕ್ತಿಯ ಕೆನ್ನೆಗೆ ತಗುಲಿ ಗಾಯವಾಗಿದೆ.
ಪೊಲೀಸರ ಪ್ರಕಾರ, ಇಂದರ್ಜಿತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳೀಯರ ನೆರವಿನಿಂದ ಪೊಲೀಸರು ದಾಳಿಕೋರನನ್ನು ಬಂಧಿಸಿದ್ದಾರೆ. ಆದರೆ, ಗುಂಡು ಹಾರಿಸಿದ ವ್ಯಕ್ತಿಯ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ.












Click it and Unblock the Notifications