ಮಹಿಳೆಯರ ದೈಹಿಕ ಪರೀಕ್ಷೆ ಮಾಡಿದ ಪುರುಷ ಪೇದೆಗಳು!

Posted By:
Subscribe to Oneindia Kannada

ಜೈಪುರ, ಫೆ. 18: ರಾಜಸ್ಥಾನದ ಚಿತ್ತೋರ್​ಘರ್​ನಲ್ಲಿ ಪೊಲೀಸ್ ನೇಮಕಾತಿಗಾಗಿ ನಡೆದ ದೈಹಿಕ ಪರೀಕ್ಷೆ ವಿವಾದಕ್ಕೆ ಕಾರಣವಾಗಿದೆ. ಮಹಿಳಾ ಅಭ್ಯರ್ಥಿಗಳ ಪರೀಕ್ಷೆಯನ್ನು ಪುರುಷರು ನಡೆಸಿರುವುದು ಭಾರಿ ಟೀಕೆಗೆ ಗುರಿಯಾಗಿದೆ.

ಮಹಿಳಾ ಅಭ್ಯರ್ಥಿಗಳ ದೈಹಿಕ ಸಧೃಡತೆ ಪರೀಕ್ಷೆಯನ್ನು ಪುರುಷರು ನಡೆಸಿರುವುದು ವಿವಾದಕ್ಕೆ ಕಾರಣವಾಗಿದ್ದು, ಈ ಕುರಿತ ವಿಡಿಯೋ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ರಾಜಸ್ಥಾನ ಅರಣ್ಯ ಇಲಾಖೆ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಿದ್ದರು.

Watch video: Male cops conduct physical examination of women candidates in Rajasthan

ಈ ಸಂದರ್ಭ ಮಹಿಳಾ ಪೇದೆಗಳಿದ್ದರೂ ಪುರುಷ ಪೊಲೀಸರೇ ಮಹಿಳಾ ಅಭ್ಯರ್ಥಿಗಳ ಎದೆ ಸುತ್ತಳತೆ ಮತ್ತಿತರ ದೈಹಿಕ ಅರ್ಹತೆಗಳ ತಪಾಸಣೆ ನಡೆಸಿರುವುದು ಕಂಡು ಬಂದಿದೆ. ಇಂಚು ಪಟ್ಟಿಯನ್ನು ಹಿಡಿದುಕೊಂಡ ಪೇದೆಯೊಬ್ಬರು ಮಹಿಳಾ ಅಭ್ಯರ್ಥಿಗೆ ಉಸಿರು ಬಿಡು, ಉಸಿರು ಎಳೆದುಕೊಂಡು ಎಂದು ಎದೆ ಸುತ್ತಳತೆಯನ್ನು ತೆಗೆದುಕೊಳ್ಳುವ ದೃಶ್ಯಗಳು ಕಂಡು ಬಂದಿದ್ದು, ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಪರೀಕ್ಷೆ ನಡೆಸಿದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ರಾಜಸ್ಥಾನ ಅರಣ್ಯ ಇಲಾಖೆ ಸಚಿವ ರಾಜ್​ಕುಮಾರ್ ರಿನ್ವಾ ಹೇಳಿದ್ದಾರೆ. ಆದರೆ, ಸಚಿವರ ಹೇಳಿಕೆಯಿಂದ ತೃಪ್ತಿಗೊಳ್ಳದ ಕಾಂಗ್ರೆಸ್ ಪಕ್ಷ, ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಸುಮಾರು 1,512 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shocking visuals of male cops conducting physical test of female candidates in Rajasthan's Chittorgarh, has gone viral thereby raising questions over sensitivity of Vasundhara Raje government in the Rajasthan.
Please Wait while comments are loading...