• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಫೇಲ್‌ಗಿಂತ ಶಿಕ್ಷಣ ನೀತಿ ಸಮರ್ಪಕ ಜಾರಿ ಮುಖ್ಯ: ಶಿವಸೇನೆ

|

ಮುಂಬೈ, ಜುಲೈ 31: ರಫೇಲ್ ಯುದ್ಧ ವಿಮಾನಕ್ಕಿಂತಲೂ ಹೊಸ ಶಿಕ್ಷಣ ನೀತಿ ಬಹಳ ಮುಖ್ಯವಾದದ್ದು, ಅದನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಶಿವಸೇನೆ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಉತ್ತಮ ಕೆಲಸ ಮಾಡಿದ್ದಾರೆ. ದೇಶದ ಶಿಕ್ಷಣ ನೀತಿಯನ್ನೇ ಬದಲಿಸಿದ್ದಾರೆ. 34 ವರ್ಷಗಳ ಬಳಿಕ ಶಿಕ್ಷಣ ನೀತಿ ಬದಲಾಗಿದೆ. ಇದು ರಫೇಲ್ ಯುದ್ಧ ವಿಮಾನಕ್ಕಿಂತಲೂ ಪ್ರಮುಖವಾದದ್ದು, ಹಾಗೆಯೇ ದೇಶಕ್ಕೆ ಶಿಕ್ಷಣ ಸಚಿವಾಲಯವೂ ಕೂಡ ಮುಖ್ಯವಾಗುತ್ತದೆ.

ರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶ

ಶಿಕ್ಷಣದ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿರುವವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಬೇಕಿದೆ. ಆರೋಗ್ಯ, ಶಿಕ್ಷಣ, ಹಣಕಾಸು ಮಂತ್ರಿಯಾಗಿ ಆಯಾ ಕ್ಷೇತ್ರಗಳನ್ನು ಪೂರ್ಣವಾಗಿ ತಿಳಿದುಕೊಂಡಿರುವವರನ್ನು ಮಾಡಬೇಕು ಇಲ್ಲವಾದಲ್ಲಿ ವ್ಯವಸ್ಥೆಯೇ ತಲೆಕೆಳಗಾಗುತ್ತದೆ ಎಂದಿದ್ದಾರೆ.

ಐದನೇ ತರಗತಿಯವರಿಗೆ ಮಾತೃಭಾಷಯಲ್ಲೇ ಶಿಕ್ಷಣ ನೀಡಬೇಕು ಎನ್ನುವ ಅಂಶವನ್ನು ಶಿವಸೇನೆ ಸ್ವಾಗತಿಸಿದೆ. ಆದರೆ ಇದು ಸರ್ಕಾರಿ ಶಾಲೆಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದರು.

ಇಂಗ್ಲಿಷ್ ಹಾವಳಿಯಿಂದಾಗಿ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಲು ಪೋಷಕರು ಒಪ್ಪುತ್ತಿಲ್ಲ. ಇದರಿಂದಾಗಿ ಮಾತೃಭಾಷೆ, ಸಂಸ್ಕೃತಿ ನಾಶವಾಗುತ್ತಿದೆ. ಮುಂಬೈ, ಥಾನೆಯಲ್ಲಿ ಮರಾಠಿ ಶಾಲೆಗಳು ಬಾಗಿಲು ಮುಚ್ಚಿವೆ. ಮರಾಠಿ ಶಿಕ್ಷಕರು ನಿರುದ್ಯೋಗಿಗಳಾಗಿದ್ದಾರೆ.

English summary
The New Education Policy 2020 unveiled by the Government of India is more important than the procurement of Rafale fighter planes but there are concerns on its proper implementation, Shiv Sena said in its mouthpiece Saamana on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more