Sheesh Mahal Controversy: ದೆಹಲಿ ಚುನಾವಣೆ ಬೆನ್ನಲ್ಲೇ ಶುರುವಾಯ್ತು "ಶೀಷ್ ಮಹಲ್" ವಿವಾದ
ಭಾರತದಲ್ಲಿ ಚುನಾವಣೆ ಸಮಯದಲ್ಲಿ ವಿವಾದಗಳು, ವಾಗ್ದಾಳಿಗಳು ನಡೆಯುವುದು ಹೊಸದಲ್ಲ. ಇದೀಗ ದೆಹಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಶೀಷ್ ಮಹಲ್ ವಿವಾದ ಮುನ್ನೆಲೆಗೆ ಬಂದಿದೆ. ಶೀಷ್ ಮಹಲ್ ವಿವಾದದ ಮೂಲಕವೇ ಆಮ್ ಆದ್ಮಿ ಪಾರ್ಟಿಯನ್ನು ದೆಹಲಿಯಲ್ಲಿ ಕಟ್ಟಿ ಹಾಕುವುದಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ದೆಹಲಿಯಲ್ಲಿ ಇದೇ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಯ ಬೆನ್ನಲ್ಲೇ ಶೀಷ್ ಮಹಲ್ ವಿವಾದ ಮುನ್ನೆಲೆಗೆ ಬಂದಿದೆ. ಹಾಗಾದರೆ ಏನಿದು ಶೀಷ್ ಮಹಲ್ ವಿವಾದ. ಈಗ ಯಾಕೆ ಈ ವಿಷಯದ ಬಗ್ಗೆ ಚರ್ಚೆ ಹಾಗೂ ದೆಹಲಿ ವಿಧಾನಸಭೆ ಚುನಾವಣೆಗೂ ಇದಕ್ಕೂ ಇರುವ ಸಂಬಂಧವೇನು ಎನ್ನುವ ವಿವರ ಇಲ್ಲಿದೆ.
ದೆಹಲಿ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕಳೆದ ಎರಡು ಬಾರಿ ಗೆದ್ದಿದ್ದ ಎಎಪಿಗೆ ಈ ಬಾರಿ ಗೆಲ್ಲುವುದು ಸುಲಭದ ಮಾತಾಗಿಲ್ಲ. ಇದರ ನಡುವೆ ದೆಹಲಿಯ ಶೀಷ್ ಮಹಲ್ ವಿವಾದವು ಆಮ್ ಆದ್ಮಿ ಪಾರ್ಟಿಗೆ ನುಂಗಲಾಗದ ತುಪ್ಪವಾಗಿ ಪರಿಣಮಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ಶಾ ಅವರು ಶೀಷ್ ಮಹಲ್ ವಿವಾದದ ಬಗ್ಗೆ ಕಿಡಿಕಾರಿದ್ದಾರೆ. ಅಷ್ಟಕ್ಕೂ ಏನಿದು ಶೀಷ್ ಮಹಲ್ ವಿವಾದ ಅಷ್ಟಕ್ಕೂ ದೇಶದಲ್ಲಿ ಈ ವಿವಾದದ ಬಗ್ಗೆ ಚರ್ಚೆ ಜೋರಾಗಿರುವುದೇಕೆ ಎನ್ನುವ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಶೀಷ್ ಮಹಲ್ ವಿವಾದ ಇತ್ತೀಚಿನ ದಿನಗಳಲ್ಲಿ ಜೋರಾಗಿದೆ. ಶೀಷ್ ಮಹಲ್ ಎನ್ನುವುದು ದೆಹಲಿಯ ಸರ್ಕಾರಿ ಬಂಗಲೆಯಾಗಿದೆ. ಈ ಬಂಗಲೆಯ ವಿಚಾರವಾಗಿ ಆಮ್ ಆದ್ಮಿ ಪಾರ್ಟಿ ಹಾಗೂ ಬಿಜೆಪಿ ನಡುವೆ ವಾಕ್ಸಮರ ನಡೆಯುತ್ತಿದೆ. ಮದ್ಯ ನೀತಿ ಹಗರಣ ತಣ್ಣಗಾದ ಮೇಲೆ ಬಿಜೆಪಿ ಈ ವಿಷಯವನ್ನು ಇರಿಸಿಕೊಂಡು ಎಎಪಿಯ ಮೇಲೆ ಮುಗಿಬಿದ್ದಿದೆ. ಶೀಷ್ ಮಹಲ್‌ಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯ ಸರ್ಕಾರಿ ಬಂಗಲೆಯಾಗಿರುವ ಮುಖ್ಯಮಂತ್ರಿ ಮನೆಯ ನವೀಕರಣಕ್ಕಾಗಿ ಮೂರು ಪಟ್ಟು ದುಡ್ಡು ಖರ್ಚು ಮಾಡಲಾಗಿದೆ. ಅದೂ ಸಹ ಜನ ಕೋವಿಡ್ ಸಂಕಷ್ಟದಲ್ಲಿ ಇದ್ದ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ ಎಂದು ಹೇಳಲಾಗಿದೆ.
ಕೋಟಿ.. ಕೋಟಿ ಖರ್ಚು ?
ದೆಹಲಿಯ ಶೀಷ್ ಮಹಲ್ ನಿರ್ಮಾಣಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಸರ್ಕಾರಿ ಕಚೇರಿ ನಿರ್ಮಾಣ ಮಾಡುವುದಕ್ಕೆ 33 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿದೆ. ಈ ಹಿಂದೆ ದೆಹಲಿಯ ಸಿಎಂ ಆಗಿ ಕೇಜ್ರಿವಾಲ್ ಅವರು ಅಧಿಕಾರ ನಡೆಸುವಾಗ ಈ ಬೆಳವಣಿಗೆ ಆಗಿದೆ ಎನ್ನುವ ಆರೋಪ ಇದೆ. ಈ ಬಂಗಲೆಯನ್ನು ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಬಾರಿ ನವೀಕರಣ ಮಾಡಿರುವ ಆರೋಪ ಕೇಳಿ ಬಂದಿದೆ. ಮೂರು ಬಾರಿ ದುಬಾರಿ ವಸ್ತುಗಳನ್ನು ಬಳಸಿಯೇ ಈ ಮನೆಯ ನವೀಕರಣ ಮಾಡಲಾಗಿದೆ ಎನ್ನುವ ಆರೋಪವನ್ನು ಬಿಜೆಪಿ ಮಾಡಿದೆ.












Click it and Unblock the Notifications