ಸ್ವಾತಂತ್ರ್ಯ ದಿನಾಚರಣೆ ಭಾಷಣ : ಪ್ರಧಾನಿ ಮೋದಿಗೆ ಸಲಹೆ ಕೊಡಿ

ಬೆಂಗಳೂರು, ಜುಲೈ 31 : ಸ್ವಾತಂತ್ರ್ಯ ದಿನಾಚರಣೆ ಭಾಷಣಕ್ಕೆ ಸಲಹೆಗಳನ್ನು ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಯನ್ನು ಕೋರಿದ್ದಾರೆ. ಭಾಷಣದಲ್ಲಿ ಅಯವ ಯಾವ ವಿಷಯಗಳ ಬಗ್ಗೆ ಮಾತನಾಡಬೇಕು ಎಂಬ ಸಲಹೆಯನು ಸರಕಾರದ MyGov ಪೋರ್ಟಲ್ ಹಾಗೂ ನರೇಂದ್ರ ಮೋದಿ ಅಪ್ಲಿಕೇಷನ್ ಮೂಲಕ ನೀಡಬಹುದು.

ಶಿಕ್ಷಣ, ಸ್ವಚ್ಛತೆ, ಪರಿಸರ, ಡಿಜಿಟಲೈಸೇಷನ್, ಮಹಿಳೆಯರ ಸಾಕ್ಷರತೆ ಸೇರಿದಂತೆ ನಾನಾ ವಿಷಯಗಳಿಗೆ ಸಂಬಂಧಿಸಿದ ಸಲಹೆಗಳನ್ನು ನೀಡಬಹುದು. ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಅಲ್ಲದೆ, ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮಕ್ಕೂ ಇದೇ ರೀತಿ ಸಲಹೆ ನೀಡುವಂತೆ ಆಹ್ವಾನಿಸಲಾಗುತ್ತದೆ.

Share your inputs for Prime Minister’s speech on Independence Day

ಆಗಸ್ಟ್ ಹದಿನೈದರಂದು ಕೆಂಪು ಕೋಟೆಯಿಂದ ದೇಶದ ಜನರ ಜತೆಗೆ ಮಾತನಾಡುವ ಅವಕಾಶ ಸಿಕ್ಕಿದೆ. ಇದು ಒಬ್ಬ ವ್ಯಕ್ತಿ ಮಾತನಾಡುವುದಲ್ಲ. ಇಡೀ ದೇಶದ ನೂರಿಪ್ಪತ್ತೈದು ಕೋಟಿ ಜನರ ಒಟ್ಟು ಧ್ವನಿ. ನಾನು ನಿಮ್ಮ ಧ್ವನಿಯನ್ನು ತಲುಪಿಸುವವನು ಅಷ್ಟೇ ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ, ಭಾಷಣ ಮಾಡುವ ಹೊಸ ಪದ್ಧತಿಯನ್ನು ನರೇಂದ್ರ ಮೋದಿ ಅವರೇ ನಾಂದಿ ಹಾಡಿದ್ದು ಎಂಬುದನ್ನು ಮರೆಯುವಂತಿಲ್ಲ. ಕಳೆದ ವರ್ಷ ಸುಮಾರು ಒಂಭತ್ತು ಸಾವಿರಕ್ಕೂ ಅಧಿಕ ಸಲಹೆಗಳನ್ನು ಸ್ವೀಕರಿಸಲಾಗಿತ್ತು.

72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಪ್ರಧಾನಿ ಅವರು ಮಾಡಲಿರುವ ಭಾಷಣಕ್ಕೆ ನಿಮ್ಮ ಸಲಹೆಗಳೇನಾದರು ಇದ್ದರೆ, ನಮೋ ಆಪ್ ಮೂಲಕ ತಿಳಿಸಬಹುದು. ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+