ಸದನದಲ್ಲಿ ಜಯಲಲಿತಾ ಸೀರೆಯನ್ನು ಡಿಎಂಕೆ ಸದಸ್ಯ ಎಳೆದಾಗ

Posted By:
Subscribe to Oneindia Kannada

75 ದಿನಗಳ ಜೀವನ್ಮರಣ ಹೋರಾಟದಲ್ಲಿ ಕೊನೆಗೂ ಚೇತರಿಸಿಕೊಳ್ಳದ ತಮಿಳುನಾಡಿನ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಜಯಲಲಿತಾ ಸೋಮವಾರ (ಡಿ 5) ತಡರಾತ್ರಿ ಕೊನೆಯುಸಿರನ್ನೆಳೆದಿದ್ದಾರೆ.

[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]

1977ರಲ್ಲಿ ಅಂದಿನ ಮುಖ್ಯಮಂತ್ರಿ ಎಂ ಜಿ ರಾಮಚಂದ್ರನ್, ಜಯಲಲಿತಾರನ್ನು ರಾಜಕೀಯ ರಂಗಕ್ಕೆ ಪರಿಚಯಿಸಿದ ನಂತರ ಎಂಜಿಆರ್ ಹೆಸರಿನಲ್ಲಿ 1983ರಲ್ಲಿ ಮೊದಲ ಬಾರಿಗೆ ತಿರುಚೆಂದೂರು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದರು.

ಲಕ್ವ ಹೊಡೆದ ನಂತರ ರಾಜಕೀಯ ಮತ್ತು ಪಕ್ಷದ ಚಟುವಟಿಕೆಯಿಂದ ದೂರ ಸರಿದ ಎಂಜಿಆರ್ ಅವರ ಸ್ಥಾನವನ್ನು ಒಂದೊಂದು ಹೆಜ್ಜೆಯನ್ನು ಇಡುತ್ತಲೇ ತುಂಬುತ್ತಾ ಬಂದ ಪಕ್ಷದಲ್ಲಿ ಮತ್ತು ತಮಿಳುನಾಡು ರಾಜಕೀಯದಲ್ಲಿ ಬಲಾಢ್ಯವಾಗಿ ಹೊರಹೊಮ್ಮಿದ್ದರು.

ತಮಿಳುನಾಡಿನಲ್ಲಿ ಕಳೆದ ಎರಡು ದಶಕಗಳಿಂದ ಎರಡು ಸ್ಥಳೀಯ ಪಕ್ಷಗಳದ್ದೇ ಕಾರುಬಾರು ಮತ್ತು ಇಬ್ಬರು ರಾಜ್ಯದ ಪ್ರಭಾವಿ ಮುಖಂಡರಾದ ಕರುಣಾನಿಧಿ ಮತ್ತು ಜಯಲಲಿತಾ ನಡುವೆಯೇ ನೇರ ಹಣಾಹಣಿ.

ರಾಜಕೀಯವಾಗಿ ಹಾವು ಮುಂಗುಸಿಯಂತಿರುವ ಈ ಇಬ್ಬರು ಮುಖಂಡರ ನಡುವಿನ ವೈಮನಸ್ಸು ಅತ್ಯಂತ ಕೀಳುಮಟ್ಟಕ್ಕೆ ಹೋದ ಉದಾಹರಣೆಗಳೂ ಇವೆ. ಅದರಲ್ಲಿ ಪ್ರಮುಖವಾಗಿ ವಿಧಾನಸಭೆಯಲ್ಲೇ ಜಯಲಲಿತಾ ಸೀರೆಯ ಮೇಲೆ ಡಿಎಂಕೆ ಸದಸ್ಯ ಕೈಹಾಕಿದ್ದು. ಮುಂದೆ ಓದಿ..

ತಮಿಳುನಾಡು ಅಸೆಂಬ್ಲಿ

ತಮಿಳುನಾಡು ಅಸೆಂಬ್ಲಿ

1989ರ ಮಾರ್ಚ್ 25ರಲ್ಲಿ ನಡೆದ ಘಟನೆ ಭಾರತದ ರಾಜಕೀಯ ಇತಿಹಾಸದಲ್ಲೇ ಒಂದು ಕಪ್ಪುಚುಕ್ಕೆ. ಅಸೆಂಬ್ಲಿಯ ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕಿಯಾಗಿದ್ದ ಜಯಲಲಿತಾ ಸೀರೆಗೆ ಡಿಎಂಕೆ ಸದಸ್ಯ ಕೈಹಾಕಿದ್ದು ಮಾನವ ಸಮಾಜವೇ ತಲೆ ತಗ್ಗಿಸುವಂತೆ ಮಾಡಿತು. ಮತ್ತು ಸಿಎಂ ಆಗಿದ್ದ ಕರುಣಾನಿಧಿ ಪಾಲಿಗೆ ಈ ಘಟನೆ ತಲೆತಗ್ಗುಸುವಂತೆ ಮಾಡಿತು.

ಬಜೆಟ್ ಅಧಿವೇಶನ

ಬಜೆಟ್ ಅಧಿವೇಶನ

25.03.1989ರಂದು ಹಣಕಾಸು ಖಾತೆಯನ್ನೂ ಹೊಂದಿದ್ದ ಸಿಎಂ ಕರುಣಾನಿಧಿ ಬಜೆಟ್ ಭಾಷಣ ಓದಲು ಮುಂದಾಗಿದ್ದರು. ಆಗ ಸರಕಾರ ನನ್ನ ಮೇಲೆ ದೌರ್ಜನ್ಯ ಎಸಗುತ್ತಿದೆ, ನನ್ನ ದೂರವಾಣಿ ಕದ್ದಾಲಿಗೆಯಾಗುತ್ತಿದೆ. ಮೊದಲು ಇದರ ಬಗ್ಗೆ ಚರ್ಚೆ ನಡೆಯಲಿ ಎಂದು ಜಯಾ ಹಠ ಹಿಡಿದು, ಪ್ರತಿಭಟನೆ ನಡೆಸಿದರು.

ಕೆಂಡಕಾರಿದ ಸಿಎಂ

ಕೆಂಡಕಾರಿದ ಸಿಎಂ

ಜಯಾ ಮತ್ತು ಎಐಡಿಎಂಕೆ ಸದಸ್ಯರ ಪ್ರತಿಭಟನೆಗೆ ಕೆಂಡಕಾರಿದ ಸಿಎಂ ಕರುಣಾನಿಧಿ ಅಸಂವಿಧಾನಿಕ ಪದಗಳನ್ನು ಜಯಾ ವಿರುದ್ದ ಬಳಸಿದರು. ಇದಕ್ಕೆ ತಿರುಗಿಬಿದ್ದ ಎಐಡಿಎಂಕೆ ಸದಸ್ಯರು ಮತ್ತು ಜಯಾ ಸ್ಪೀಕರ್ ಕುರ್ಚಿಯತ್ತ ಹೊರಟಾಗ ಆಯತಪ್ಪಿ ಕೆಳಗೆಬಿದ್ದರು.

ಚಪ್ಪಲಿ ತೂರಾಟ

ಚಪ್ಪಲಿ ತೂರಾಟ

ಎಐಡಿಎಂಕೆ ಸದಸ್ಯರ ಪ್ರತಿಭಟನೆಗೆ ತಿರುಗಿಬಿದ್ದ ಆಡಳಿತ ಡಿಎಂಕೆ ಪಕ್ಷದ ಸದಸ್ಯರು ವಾಗ್ಯುದ್ದಕ್ಕೆ ಇಳಿದರು. ಸಭೆಯಲ್ಲಿ ಆರೋಪ, ಪ್ರತ್ಯಾರೋಪದ ನಡುವೆ ಪರಸ್ಪರ ಚಪ್ಪಲಿ ತೂರಿಕೊಂಡು ಸದನದ ಪಾವಿತ್ರ್ಯತೆಕ್ಕೆ ಧಕ್ಕೆ ತಂದಿದ್ದರು. ಸ್ಪೀಕರ್ ಬೇರೆ ವಿಧಿಯಿಲ್ಲದೇ ಸದನವನ್ನು ಮುಂದೂಡಿದ್ದರು.

ಜಯಾ ಸೆರಿಗಿಗೆ ಕೈಹಾಕಿದ ಶಾಸಕ

ಜಯಾ ಸೆರಿಗಿಗೆ ಕೈಹಾಕಿದ ಶಾಸಕ

ಆ ಸಮಯದಲ್ಲಿ ಸಭೆಯಿಂದ ಹೊರಹೋಗಲು ಮುಂದಾಗಿದ್ದ ಜಯಲಲಿತಾ ಸೀರೆಯ ಸೆರಗಿಗೆ ಡಿಎಂಕೆ ಸದಸ್ಯ ಕೈಹಾಕಿದ. ಆ ಸಮಯದಲ್ಲಿ ಜಯಲಲಿತಾ ಸಹಾಯಕ್ಕಾಗಿ ಕಿರುಚಾಡಿದರು. ಈ ಘಟನೆ ಭಾರತದ ರಾಜಕೀಯ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿ ಉಳಿಯಿತು.

ಜಯಾ ಪ್ರತಿಜ್ಞೆ

ಜಯಾ ಪ್ರತಿಜ್ಞೆ

ಹೆಣ್ಣಿಗೆ ಸದನದಲ್ಲಿ ಗೌರವ, ಮರ್ಯಾದೆ, ಅಭಯ ಎಲ್ಲಿಯವರೆಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ ತಮಿಳುನಾಡು ಅಸೆಂಬ್ಲಿಗೆ ಕಾಲಿಡುವುದಿಲ್ಲ ಎಂದು ಜಯಲಲಿತಾ ಪ್ರಮಾಣ ಮಾಡಿದರು. ತಮ್ಮ ಪ್ರತಿಜ್ಞೆಯನ್ನು ಪಾಲಿಸಿಕೊಂಡು ಬಂದರೋ ಇಲ್ಲವೋ ಅದು ಜಯಾ ರಾಜಕೀಯ ಇತಿಹಾಸದ ಗತಪುಟಕ್ಕೆ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Country witnessed shameful incident when DMK MLA pulled Jayalalithaa saree in Assembly budget session in March 25, 1989.
Please Wait while comments are loading...