ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಟ್ಕಳ ಮೂಲದ ಶಫಿ ಭಾರತದಲ್ಲಿ ಐಎಸ್‌ಐಎಸ್‌ಗೆ ಮುಖ್ಯಸ್ಥ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಫೆಬ್ರವರಿ 04 : ದೇಶದ ವಿವಿಧ ನಗರಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯ (ಐಎಸ್‍ಐಎಸ್) ಶಂಕಿತ ಉಗ್ರರನ್ನು ಬಂಧಿಸಿದ ಎನ್‌ಐಎ ಮೊಹಮದ್ ಶಫಿ ಅರ್ಮರ್ ಉಗ್ರರು ಮತ್ತು ಭಾರತದ ನಡುವಿನ ಕೊಂಡಿಯಾಗಿದ್ದಾನೆ ಎಂದು ಪತ್ತೆ ಹಚ್ಚಿದೆ.

26 ವರ್ಷದ ಮೊಹಮದ್ ಶಫಿ ಅರ್ಮರ್ ಬಂಧನಕ್ಕೆ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ಐಎಸ್‌ಐಎಸ್‌ಗೆ ನೇಮಕಾತಿ, ಉಗ್ರ ಸಂಘಟನೆಗೆ ಹಣ ಸಂಗ್ರಹಣೆ, ಉಗ್ರ ಸಂಘಟನೆ ಸೇರಿರುವುದು ಸೇರಿದಂತೆ ಶಫಿ ವಿರುದ್ಧ ಹಲವಾರು ಆರೋಪಗಳಿವೆ. [ಉಗ್ರರಿಗೆ ಮುಂಬೈನಿಂದ ಸೂಚನೆ ಸಿಗುತ್ತಿತ್ತು]

mohammad shafi

ಭಟ್ಕಳ ಮೂಲದ ಮೊಹಮದ್ ಶಫಿಯ ಕುಟುಂಬದ ಹೆಸರು ಅರ್ಮರ್. ಕನ್ನಡ, ಇಂಗ್ಲಿಷ್, ಉರ್ದು, ಹಿಂದಿ ಭಾಷೆಯನ್ನು ಶಫಿ ಚೆನ್ನಾಗಿ ಬಲ್ಲ. ಭಾರತದಲ್ಲಿ ಐಎಸ್‌ಐಎಸ್‌ಗೆ ಉಗ್ರರನ್ನು ನೇಮಕ ಮಾಡಿಕೊಳ್ಳಲು ಅನ್ಸರ್‌-ಉಲ್‌-ತವಾಹಿದ್‌ ಸಂಘಟನೆ ಸ್ಥಾಪನೆ ಮಾಡಿದ್ದ ಸುಲ್ತಾನ್ ಅರ್ಮರ್‌ ಶಫಿಯ ಸಹೋದರ. [ಉಗ್ರರ ಬಳಿ ಸುಧಾರಿತ ಸ್ಫೋಟಕ ಪತ್ತೆ]

ಸುಲ್ತಾನ್ ಅರ್ಮರ್‌ ಜೊತೆಗಿದ್ದ ಶಫಿ ಉಗ್ರರನ್ನು ನೇಮಕ ಮಾಡಿಕೊಳ್ಳುತ್ತಿದ್ದ. ಸಿರಿಯಾದಲ್ಲಿ ಸುಲ್ತಾನ್ ಹತ್ಯೆಯಾದ ಬಳಿಕ ಶಫಿ ಅರ್ಮರ್ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದಾನೆ. ಗಣರಾಜ್ಯೋತ್ಸವದ ವೇಳೆಯಲ್ಲಿ ಮುಂಬೈನಲ್ಲಿ ಬಂಧಿಸಲಾದ ಶಂಕಿತ ಉಗ್ರ ಮುದಬ್ಬೀರ್ ಮುಷ್ತಾಖ್ ಸಹ ಶಫಿ ಜೊತೆ ಸಂಪರ್ಕ ಹೊಂದಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದ.

ಭಾರತದಲ್ಲಿದ್ದ ಉಗ್ರರಿಗೆ ಶಫಿ ಹಣವನ್ನು ಕಳಿಸುತ್ತಿದ್ದ ಎಂದು ಗುಪ್ತಚರ ಇಲಾಖೆ ಹೇಳಿದೆ. ಕಳೆದ ವರ್ಷ ಸುಮಾರು 6 ಲಕ್ಷ ರೂ. ಹಣವನ್ನು ಭಾರತದಲ್ಲಿದ್ದ ತನ್ನ ಸಹಚರರಿಗೆ ಶಫಿ ಕಳಿಸಿದ್ದ. ಈ ಹಣವನ್ನು ಇಟ್ಟುಕೊಂಡು ಉಗ್ರರು ಭಾರತದಲ್ಲಿ ತಮ್ಮ ಕಾರ್ಯಾಚರಣೆ ನಡೆಸುತ್ತಿದ್ದರು.

English summary
Mohammad Shafi Armar is just 26 years of age and today according to investigators he is the key link between the ISIS and the Indian recruits. He is a resident of Bhatkal, also the brother of Sultan Armar the founder of the Ansar-ul-Tawhid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X