ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಬಿಜೆಪಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ

ಅಹಮದಾಬಾದ್‌, ಜನವರಿ 21: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಗಜೇಂದ್ರ ಸಿಂಗ್ ಪರ್ಮಾರ್ ಮತ್ತು ಹಿಮತ್‌ನಗರದ ಮಹೇಶ್ ಪಟೇಲ್ ವಿರುದ್ಧ ರಾಜಸ್ಥಾನ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಅಹಮದಾಬಾದ್ ನಗರದ ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರಿನಲ್ಲಿ ಅವರು ಮತ್ತು ಅವರ ಕುಟುಂಬವು ಗುಜರಾತ್‌ನ ಬಿಜೆಪಿ ಶಾಸಕ ಗಜೇಂದ್ರಸಿಂಹ ಪರ್ಮಾರ್ ಅವರೊಂದಿಗೆ ಕುಟುಂಬ ಸಂಬಂಧವನ್ನು ಹೊಂದಿತ್ತು ಎಂದು ಹೇಳಿದ್ದಾರೆ.

ನವೆಂಬರ್ 2020ರಲ್ಲಿ ಜೈಸಲ್ಮೇರ್ ಪ್ರವಾಸದ ಸಮಯದಲ್ಲಿ ಗಜೇಂದ್ರಸಿಂಹ ಮತ್ತು ಮಹೇಶ್ ಅಬು ಸ್ಥಳೀಯ ರಸ್ತೆ ಬಳಿ ತಮ್ಮ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರಯತ್ನಿಸಿದ್ದರು. ಈ ವಿಚಾರವಾಗಿ ಗಜೇಂದ್ರಸಿಂಹ ಹಾಗೂ ಮಹೇಶ್ ಜತೆ ತಾವು ಜಗಳವಾಡಿದ್ದಾಗಿ ತಿಳಿಸಿದ್ದಾರೆ. ಈ ಸಂಬಂಧ ಆಕೆ ಈ ಹಿಂದೆ ಆರೋಪಿಗಳ ವಿರುದ್ಧ ದೂರು ದಾಖಲಿಸಲು ಯತ್ನಿಸಿದ್ದರು. ಆದರೆ ಪೊಲೀಸರು ಕೇಸು ದಾಖಲಿಸಲು ಹಿಂದೇಟು ಹಾಕಿದ ಕಾರಣ ರಾಜಸ್ಥಾನದ ಸಿರೋಹಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಶುಕ್ರವಾರ ಮಧ್ಯಾಹ್ನ ದೂರು ದಾಖಲಾಗಿತ್ತು.

Sexual assault on minor: pocso Case against two including BJP MLA

ಗಜೇಂದ್ರಸಿಂಹ ಪರ್ಮಾರ್ ಬಿಜೆಪಿಯ ಹಾಲಿ ಶಾಸಕರಾಗಿದ್ದು, ಕಳೆದ ಸರ್ಕಾರದಲ್ಲಿ ಅವರು ಸಚಿವರಾಗಿದ್ದರು ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ದೂರುದಾರರು ಈ ಹಿಂದೆ ಅಹಮದಾಬಾದ್ ಪೊಲೀಸರಿಗೆ ದೂರು ನೀಡಿದ್ದರು. ನಂತರ ತನಗೆ ಬೆದರಿಕೆಗಳು ಬರಲಾರಂಭಿಸಿದವು, ಈ ಕಾರಣದಿಂದ ಅವಳು 2021 ರಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+