ಕಚೇರಿಗೆ ಬಂದ ಕೇಂದ್ರ ಸಚಿವರು; ಮಾಸ್ಕ್ ಧರಿಸಿ ಕೆಲಸ
ನವದೆಹಲಿ, ಏಪ್ರಿಲ್ 13 : ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಕೇಂದ್ರ ಸಚಿವರು ಇಂದು ಕಚೇರಿಗೆ ಹಾಜರಾಗಿದ್ದಾರೆ. ಕೊರೊನಾ ತಡೆಯಲು ಲಾಕ್ ಡೌನ್ ಘೋಷಣೆಯಾದ ಬಳಿಕ ಮನೆಯಿಂದಲೇ ಸಚಿವರು ಕೆಲಸ ಮಾಡುತ್ತಿದ್ದರು.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಕಾಶ್ ಜಾವಡೇಕರ್, ಕಿರಣ್ ರಿಜು ಸೇರಿದಂತೆ ವಿವಿಧ ಸಚಿವರು ತಮ್ಮ-ತಮ್ಮ ಕಚೇರಿಗೆ ಆಗಮಿಸಿದ್ದಾರೆ. ಮಾಸ್ಕ್ ಧರಿಸಿಕೊಂಡು, ಆಗಾಗ ಹ್ಯಾಂಡ್ ಸ್ಯಾನಿಟೈಸರ್‌ನಿಂದ ಕೈ ಸ್ವಚ್ಛ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಮನೆಯಲ್ಲಿಯೇ ತಯಾರು ಮಾಡಿದ ಮಾಸ್ಕ್ ಧರಿಸಿಕೊಂಡು ನಾರ್ಥ್ ಬ್ಲಾಕ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಲಾಕ್ ಡೌನ್ ಘೋಷಣೆಯಾದ ಬಳಿಕ ಕೇಂದ್ರ ಸಚಿವರು ಕಚೇರಿಗೆ ಬರುವುದುನ್ನು ನಿಲ್ಲಿಸಿದ್ದರು. ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಶನಿವಾರ ಪ್ರಧಾನಿ ನರೇಂದ್ರ ಮೋದಿ ಸೋಮವಾರದಿಂದ ಎಲ್ಲರೂ ಕಚೇರಿಗೆ ಬರಬೇಕು ಎಂದು ಕರೆ ನೀಡಿದ್ದರು.
ಪ್ರಕಾಶ್ ಜಾವಡೇಕರ್ ಮಾಸ್ಕ್ ಧರಿಸಿಕೊಂಡು ಕಚೇರಿಗೆ ಆಗಮಿಸಿದ್ದಾರೆ. ಶಾಸ್ತ್ರೀ ಭವನದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅವರು ಸಭೆಯನ್ನು ನಡೆಸಿದ್ದಾರೆ.
Back to working in North Block office with a home-made mask this morning. pic.twitter.com/SlkxZdYuab
— Nirmala Sitharaman (@nsitharaman) April 13, 2020
ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ ಲಾಕ್ ಡೌನ್ ಏಪ್ರಿಲ್ 14ರ ಮಂಗಳವಾರಕ್ಕೆ ಮುಕ್ತಾಯವಾಗಲಿದೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದು, ಲಾಕ್ ಡೌನ್ ವಿಸ್ತರಣೆಯಾಗಲಿದೆಯೇ? ಕಾದು ನೋಡಬೇಕು.











Click it and Unblock the Notifications