ರೈಲ್ವೇ ಆನ್ ಲೈನ್ ಬುಕಿಂಗ್ ಸೇವಾ ತೆರಿಗೆ ವಿನಾಯ್ತಿ ಮುಂದುವರಿಕೆ

ನವದೆಹಲಿ, ಏಪ್ರಿಲ್ 1: ವಿದ್ಯುನ್ಮಾನ ಪಾವತಿಯನ್ನು (ಡಿಜಿಟಲ್ ಪೇಮೆಂಟ್) ಉತ್ತೇಜಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಅಂತರ್ಜಾಲದ ಮೂಲಕ ರೈಲ್ವೇ ಟಿಕೆಟ್ ಖರೀದಿಗೆ ನೀಡಲಾಗಿರುವ ಸೇವಾ ತೆರಿಗೆ ವಿನಾಯ್ತಿಯನ್ನು ಜೂನ್ 30ವರೆಗೆ ವಿಸ್ತರಿಸಿದೆ.

ನಗದು ರಹಿತ ಪಾವತಿಯನ್ನು ಮತ್ತಷ್ಟು ಚಾಲ್ತಿಗೆ ತರಬೇಕೆಂದರೆ, ರೈಲ್ವೇ ಟಿಕೆಟ್ ಬುಕಿಂಗ್ ಗೆ ನೀಡಲಾಗುತ್ತಿರುವ ಸೇವಾ ತೆರಿಗೆ ವಿನಾಯ್ತಿ ಸೌಲಭ್ಯವನ್ನು ಮತ್ತಷ್ಟು ದಿನಗಳ ಕಾಲ ವಿಸ್ತರಿಸಬೇಕೆಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು, ರೈಲ್ವೇ ಇಲಾಖೆಗೆ ಕಿವಿಮಾತು ಹೇಳಿತ್ತು. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Service charge Online booking of train tickets extended to June 30

ಕಳೆದ ವರ್ಷ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಅಪನಗದೀಕರಣ ನಿರ್ಧಾರ ಕೈಗೊಂಡಿದ್ದಾಗ, ರೈಲ್ವೇ ಟಿಕೆಟ್ ಗಳ ಆನ್ ಲೈನ್ ಬುಕಿಂಗ್ ಮೇಲೆ ವಿಧಿಸಲಾಗುತ್ತಿದ್ದ ಸೇವಾ ತೆರಿಗೆಯನ್ನು ರದ್ದುಗೊಳಿಸಿತ್ತು. ಇದೀಗ ಆ ಸೌಲಭ್ಯವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ.

ಅಂತರ್ಜಾಲದ ಮೂಲಕ ಟಿಕೆಟ್ ಬುಕಿಂಗ್ ಮಾಡಿದರೆ ಸಾಮಾನ್ಯವಾಗಿ ಶೇ. 20ರಿಂದ 40ರವರೆಗೆ ಸೇವಾ ತೆರಿಗೆ ವಿಧಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+