Gautam Adani: ಅದಾನಿ ಗ್ರೂಪ್ ವಿರುದ್ಧದ ಆರೋಪ ತಳ್ಳಿಹಾಕಿದ SEBI: ಗೌತಮ್ ಅದಾನಿ ಭರವಸೆಯ ಪತ್ರ
Gautam Adani: ಅದಾನಿ ಗ್ರೂಪ್ ವಿರುದ್ಧ ಮಾಡಲಾದ ಆರೋಪಗಳನ್ನು ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ತಳ್ಳಿಹಾಕಿದೆ. ಇದನ್ನು ತಮ್ಮ ಆಡಳಿತ ಮತ್ತು ಪಾರದರ್ಶಕತೆಯ "ಪ್ರಬಲ ದೃಢೀಕರಣ" ಎಂದು ಗೌತಮ್ ಅದಾನಿ ಅವರು ಹೇಳಿದ್ದಾರೆ. ಷೇರುದಾರೊಂದಿಗೆ ಮಾತನಾಡಿದ ಅವರು, ನಮ್ಮನ್ನ ದುರ್ಬಲಗೊಳಿಸಲು ಉದ್ದೇಶಿಸಲಾದ ವಿಷಯಗಳು ಅದರ ಅಡಿಪಾಯವನ್ನು ಬಲಪಡಿಸಿವೆ ಎಂದು ತಿಳಿಸಿದ್ದಾರೆ.
ಗ್ರೂಪ್‌ನ ಕಂಪನಿಗಳ ಷೇರುದಾರರಿಗೆ ಬರೆದ ಪತ್ರದಲ್ಲಿ, ಅದಾನಿ 2023ರ ಜನವರಿ 24ರಂದು ಅಮೆರಿಕಾದ ಶಾರ್ಟ್-ಸೆಲ್ಲರ್ ವರದಿ ಮಾರುಕಟ್ಟೆಯಲ್ಲಿ ಬಿರುಗಾಳಿ ಸೃಷ್ಟಿಸಿದ ಸಂದರ್ಭವನ್ನು ನೆನಪಿಸಿಕೊಂಡರು. "ಇದು ಕೇವಲ ನಿಮ್ಮ ಅದಾನಿ ಗ್ರೂಪ್‌ನ ವಿರುದ್ಧದ ಟೀಕೆ ಮಾತ್ರವಲ್ಲ. ಜಾಗತಿಕ ಮಟ್ಟದಲ್ಲಿ ಕನಸು ಕಾಣುವ ಭಾರತೀಯ ಉದ್ಯಮಗಳ ಧೈರ್ಯಕ್ಕೆ ನೇರ ಸವಾಲಾಗಿತ್ತು," ಎಂದು ಅವರು ಬರೆದಿದ್ದಾರೆ.

ಅದಾನಿ ಅವರು, ಕಳೆದ ವಾರ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ನೀಡಿದ ಸ್ಪಷ್ಟ ತೀರ್ಪು ಎರಡು ವರ್ಷಗಳ ತೀವ್ರ ಪರಿಶೀಲನೆಗೆ ಅಂತ್ಯ ಹಾಡಿದೆ ಎಂದು ಹೇಳಿದರು. "SEBIಯ ಸ್ಪಷ್ಟ ಮತ್ತು ಅಂತಿಮ ತೀರ್ಪಿನೊಂದಿಗೆ, ಸತ್ಯವು ಮೇಲುಗೈ ಸಾಧಿಸಿದೆ. ಅಲ್ಲದೆ, ನಾವು ಯಾವಾಗಲೂ ಹೇಳಿದಂತೆ ಸತ್ಯಮೇವ ಜಯತೇ," ಎಂದು ಅವರು ಉಲ್ಲೇಖಿಸಿದರು.
ಪ್ರಕ್ಷುಬ್ಧತೆಯ ಸಮಯದದಲ್ಲೂ ತಮ್ಮ ಗುಂಪಿನ ಸಾಧನೆ ಕುರಿತು ಹೇಳಿದ ಅದಾನಿ, ನಮ್ಮ ಗ್ರೂಪ್‌ನ ಪೋರ್ಟ್‌ಫೋಲಿಯೊ ಇಬಿಟಿಡಾ (EBITDA) FY23ರಲ್ಲಿ ₹57,205 ಕೋಟಿಯಿಂದ FY25ರಲ್ಲಿ ₹89,806 ಕೋಟಿಗೆ ಏರಿದೆ. ಈ ಮೂಲಕ ಇದು ಶೇಕಡಾ 57ರಷ್ಟು ಹೆಚ್ಚಳ ಆಗಿದೆ ಎಂದು ಹೇಳಿದರು. ಇದೇ ಅವಧಿಯಲ್ಲಿ ಗ್ರಾಸ್ ಬ್ಲಾಕ್ ₹4.12 ಲಕ್ಷ ಕೋಟಿಯಿಂದ ₹6.09 ಲಕ್ಷ ಕೋಟಿಗೆ ವಿಸ್ತರಿಸಿತು. ಇದರಿಂದ ಅಂದಾಜು ₹2 ಲಕ್ಷ ಕೋಟಿಗೆ ಹೆಚ್ಚಾಗಿದೆ. ಈ ಅವಧಿಯಲ್ಲಿ ಕಾರ್ಯಾರಂಭ ಮಾಡಿದ ಪ್ರಮುಖ ಯೋಜನೆಗಳಲ್ಲಿ ಕೇರಳದ ವಿಝಿಂಜಂನಲ್ಲಿ ಭಾರತದ ಮೊದಲ ಕಂಟೇನರ್ ಟ್ರಾನ್ಸ್‌ಶಿಪ್‌ಮೆಂಟ್ ಬಂದರು, ಖವ್ದಾದಲ್ಲಿ ವಿಶ್ವದ ಅತಿದೊಡ್ಡ ಖವ್ದಾದಲ್ಲಿ ವಿಶ್ವದ ಅತಿದೊಡ್ಡ ಏಕ ಸ್ಥಳೀಯ ನವೀಕರಿಸಬಹುದಾದ ಇಂಧನ ಯೋಜನೆ ಸೇರಿ 6 ಗಿಗಾವಾಟ್ ಸಾಮರ್ಥ್ಯದ ಉತ್ತೇಜನ ಸೇರಿವೆ. ಅಲ್ಲದೆ, ವಿಶ್ವದ ಅತಿದೊಡ್ಡ ಕಾಪರ್ ಸ್ಮೆಲ್ಟರ್ ಹಾಗೂ ಮೆಟಲರ್ಜಿಕಲ್ ಸಂಕೀರ್ಣ, 7,000 ಸರ್ಕ್ಯೂಟ್ ಕಿಲೋ ಮೀಟರ್ ಉದ್ದದ ಪ್ರಸರಣ ಮಾರ್ಗಗಳು ಮತ್ತು 4 ಗಿಗಾವಾಟ್ ಹೊಸ ಉಷ್ಣ ವಿದ್ಯುತ್ ಸಾಮರ್ಥ್ಯ ಸೇರಿವೆ.
ಬಿಕ್ಕಟ್ಟಿನ ಸಂದರ್ಭದಲ್ಲಿ ಹೂಡಿಕೆದಾರರು, ಸಾಲದಾತರು, ಪೂರೈಕೆದಾರರು ಮತ್ತು ಪಾಲುದಾರರು ಎದುರಿಸಿದ ಆತಂಕವನ್ನು ಅದಾನಿ ಒಪ್ಪಿಕೊಂಡರು. "ನಿಮ್ಮ ನಂಬಿಕೆಯೇ ನಮ್ಮನ್ನು ಸ್ಥಿರಗೊಳಿಸಿತು, ನಿಮ್ಮ ತಾಳ್ಮೆಯೇ ನಮಗೆ ಸಹಾಯ ಮಾಡಿತು ಮತ್ತು ನಿಮ್ಮ ವಿಶ್ವಾಸವೇ ನಮಗೆ ಧೈರ್ಯ ತುಂಬಿತು ಎಂದು ಹೇಳಿದರು. ಈ ಮೂಲಕ ಬೆಂಬಲಕ್ಕೆ ನಿಂತವರಿಗೆ ಕೃತಜ್ಞತೆಗಳನ್ನು ತಿಳಿಸಿದರು.
ಭವಿಷ್ಯದಲ್ಲಿ, ಕೈಗಾರಿಕೋದ್ಯಮಿ ಆಡಳಿತದ ಮಾನದಂಡಗಳನ್ನು ಮತ್ತಷ್ಟು ಬಲಪಡಿಸಲು, ನಾವೀನ್ಯತೆ ಮತ್ತು ಸುಸ್ಥಿರತೆಯನ್ನು ವೇಗಗೊಳಿಸಲು ಮತ್ತು ರಾಷ್ಟ್ರ ನಿರ್ಮಾಣದತ್ತ ಹೆಚ್ಚು ಶ್ರಮ ಹಾಕುವುದಾಗಿ ಪ್ರತಿಜ್ಞೆ ಮಾಡಿದರು. ಸೆಬಿ ತೀರ್ಪು ಕೇವಲ ಆತ್ಮವಿಶ್ವಾಸವನ್ನು ಪುನಃಸ್ಥಾಪಿಸುವುದಲ್ಲದೆ, ಕಂಪನಿಯ ಮೌಲ್ಯಗಳನ್ನು ಪುನರುಚ್ಚರಿಸಬೇಕು ಎಂದು ಅವರು ಹೇಳಿದರು. ಸಂಕಷ್ಟದಲ್ಲಿ ಸ್ಥೈರ್ಯ, ಕಾರ್ಯದಲ್ಲಿ ಪ್ರಾಮಾಣಿಕತೆ ಮತ್ತು ಭಾರತ ಹಾಗೂ ವಿಶ್ವಕ್ಕೆ ಉಜ್ವಲ ಭವಿಷ್ಯ ಕಟ್ಟುವಲ್ಲಿ ಹೆಚ್ಚು ಶ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದರು.
ತಮ್ಮ ಪತ್ರದ ಕೊನೆಯಲ್ಲಿ ಕವಿ ಸೋಹನ್‌ಲಾಲ್ ದ್ವಿವೇದಿ ಅವರ ಸಾಲುಗಳನ್ನು ಉಲ್ಲೇಖಿಸಿದ ಅದಾನಿ ಅವರು, ನಾವು ದೃಢಸಂಕಲ್ಪದೊಂದಿಗೆ ಮುಂದುವರಿಯುವುದಾಗಿ ಹೇಳಿದರು. "ಅಲೆಗಳಿಗೆ ಹೆದರುವ ದೋಣಿ ಎಂದಿಗೂ ದಡವನ್ನು ತಲುಪಲು ಸಾಧ್ಯವಿಲ್ಲ, ಆದರೆ ಪ್ರಯತ್ನಿಸುತ್ತಲೇ ಇರುವವರು ಶಾಶ್ವತವಾಗಿ ಗೆಲ್ಲುತ್ತಾರೆ," ಅಂತಲೂ ಉಲ್ಲೇಖಿಸಿದ್ದಾರೆ.












Click it and Unblock the Notifications