ಜುಲೈನಲ್ಲಿ ಶಾಲೆಗಳು ಆರಂಭ; ಮೊದಲು 10 ಮತ್ತು 12ನೇ ತರಗತಿ

ಚಂಡೀಗಢ್, ಜೂನ್ 04 : ಕೊರೊನಾ ವೈರಸ್ ಸೋಂಕು ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ದೇಶಾದ್ಯಂತ ಶಾಲಾ-ಕಾಲೇಜು ಮುಚ್ಚಲಾಗಿದೆ. ಈಗ ಶಾಲೆಗಳನ್ನು ಪುನರಾರಂಭಿಸುವ ಪ್ರಸ್ತಾವ ಎಲ್ಲಾ ರಾಜ್ಯದಲ್ಲಿಯೂ ಕೇಳಿ ಬಂದಿದೆ.

ಗುರುವಾರ ಹರ್ಯಾಣ ಸರ್ಕಾರ ಜುಲೈ ತಿಂಗಳಿನಲ್ಲಿ ಶಾಲೆಗಳನ್ನು ಪುನರಾರಂಭಿಸುವುದಾಗಿ ಘೋಷಣೆ ಮಾಡಿದೆ. ವಿವಿಧ ಹಂತದಲ್ಲಿ ಶಾಲಾ-ಕಾಲೇಜುಗಳನ್ನು ಆರಂಭ ಮಾಡಲಾಗುತ್ತದೆ. ಮೊದಲು 10 ಮತ್ತು 12ನೇ ತರಗತಿ ಆರಂಭವಾಗಲಿದೆ.

ಶಿಕ್ಷಣ ಸಚಿವ ಕನ್ವರ್ ಪಾಲ್ ಈ ಕುರಿತು ಮಾಹಿತಿ ನೀಡಿದರು. "ಜುಲೈನಲ್ಲಿ ಶಾಲಾ-ಕಾಲೇಜು ಪುನರಾರಂಭಿಸಲಾಗುತ್ತದೆ. ಹಂತ ಹಂತವಾಗಿ ಈ ಪ್ರಕ್ರಿಯೆ ನಡೆಯಲಿದ್ದು, ಮೊದಲು 10 ರಿಂದ 12ನೇ ತರಗತಿ ಆರಂಭವಾಗಲಿದೆ" ಎಂದು ಹೇಳಿದರು.

Schools To Reopen In July Says Haryana Govt

"10-12, 6-9, 1-5 ಹೀಗೆ ಮೂರು ಹಂತದಲ್ಲಿ ಶಾಲಾ-ಕಾಲೇಜು ಪುನರಾರಂಭಿಸಲು ತೀರ್ಮಾನಿಸಲಾಗಿದೆ. ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು ಅದಕ್ಕಾಗಿ ಶೇ 50ರಷ್ಟು ವಿದ್ಯಾರ್ಥಿಗಳು ಮಾತ್ರ ಹಾಜರಾಗಬೇಕು" ಎಂದು ಶಿಕ್ಷಣ ಸಚಿವರು ವಿವರಣೆ ನೀಡಿದರು.

"ಒಂದು ತರಗತಿಯಲ್ಲಿ 30 ವಿದ್ಯಾರ್ಥಿಗಳು ಇದ್ದರೆ 15 ಜನರು ಬೆಳಗ್ಗೆ, 15 ಜನರು ಸಂಜೆ ಬರಬೇಕು. ಇಲ್ಲವೇ ದಿನ ಬಿಟ್ಟು ದಿನ ಬರುವಂತೆ ಮಾರ್ಗಸೂಚಿ ರೂಪಿಸಲಾಗುತ್ತದೆ" ಎಂದು ಕನ್ವರ್ ಪಾಲ್ ತಿಳಿಸಿದರು.

ಕೇಂದ್ರ ಗೃಹ ಇಲಾಖೆ ಈಗಾಲೇ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಜುಲೈನಲ್ಲಿ ಶಾಲಾ-ಕಾಲೇಜು ತೆರೆಯಬಹುದು ಎಂದು ಹೇಳಿದೆ. ಶಾಲೆಗಳು ಪೋಷಕರ ಜೊತೆ ಸಭೆ ನಡೆಸಬೇಕು, ಅವರ ಅಭಿಪ್ರಾಯವನ್ನು ಪರಿಗಣಿಸಬೇಕು ಎಂದು ಸಹ ನಿರ್ದೇಶನ ನೀಡಿದೆ.

ಹರ್ಯಾಣದಲ್ಲಿ ಇದುವರೆಗೂ 2594 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ. 23 ಜನರು ಇದುವರೆಗೂ ಮೃತಪಟ್ಟಿದ್ದಾರೆ. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,842.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+